Advertisement

ಗುರುಮಠಕಲ್ ತಾ.ಪಂ ಅಧಿಕಾರ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾದ ದಳಪತಿಗಳು

02:40 PM Aug 10, 2020 | sudhir |

ಯಾದಗಿರಿ : ಜಿಲ್ಲೆಯ ನೂತನ ಗುರುಮಠಕಲ್ ತಾಲೂಕು ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧಿಕಾರ ಗಿಟ್ಟಿಸಿಕೊಳ್ಳುವಲ್ಲಿ ಕೊನೆಗೂ ದಳಪತಿಗಳು ಯಶಸ್ವಿಯಾಗಿದ್ದಾರೆ.

Advertisement

12 ಸದಸ್ಯ ಬಲ ಹೊಂದಿರುವ ತಾ. ಪಂ. ನಲ್ಲಿ ಜೆಡಿಎಸ್ 4, ಕಾಂಗ್ರೆಸ್ 6 ಹಾಗೂ ಬಿಜೆಪಿಯ 2 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.

ಕಾಂಗ್ರೆಸ್ ಭದ್ರ ಕೋಟೆಯಿಂದ ರಾಜ್ಯದಲ್ಲಿ ಬಿಂಬಿತವಾಗಿದ್ದ ಗುರುಮಠಕಲ್ ಮತಕ್ಷೇತ್ರದಲ್ಲಿ 2018 ಚುನಾವಣೆಯಲ್ಲಿ ಜೆಡಿಎಸ್ ನ ನಾಗನಗೌಡ ಕಂದಕೂರ ವಿಜಯಪತಾಕೆ ಹಾರಿಸಿ, ಕೈ ಕೋಟೆಯನ್ನು ತನ್ನ ತೆಕ್ಕೆಗೆ ಪಡೆದಿದ್ದರು, ಆಗಿಂದ ಗುರುಮಠಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ನಾಯಕತ್ವ ಕೊರತೆಯುಂಟಾಗಿದೆ.

ಸದ್ಯ ತಾ. ಪಂ. ಗೆ ಅಧಿಕಾರಕ್ಕೇರಲು 7 ಸದಸ್ಯರು ಬೇಕಿತ್ತು, ಕಾಂಗ್ರೆಸ್ 6 ಸದಸ್ಯರ ಬಲ ಹೊಂದಿದ್ದರೂ ಮೀಸಲಾತಿಯ ಅಭ್ಯರ್ಥಿಯಿಲ್ಲದ ಕಾರಣ ಅಧಿಕಾರದಿಂದ ವಂಚಿತವಾಗುವಂತಾಗಿದೆ.

ಇದನ್ನೆ ಅಸ್ತ್ರವಾಗಿ ಬಳಸಿಕೊಂಡ ಜೆಡಿಎಸ್ ರಾಜ್ಯ ಯುವ ನಾಯಕ ಶರಣಗೌಡ ಕಂದಕೂರ ತಂತ್ರ ಹೆಣೆದು ತಮ್ಮ 4 ಜನ ಸದಸ್ಯರ ಬಲದೊಂದಿಗೆ ಇತರೆ ಸದಸ್ಯರ ವಿಶ್ವಾಸ ಪಡೆದು ನೂತನ ತಾ. ಪಂ. ಗೆ ಮೊದಲ ಬಾರಿಗೆ ಅವಿರೋಧವಾಗಿ ಗದ್ದುಗೆ ಏರಿದ ಖ್ಯಾತಿ ಪಡೆದಿದೆ.

Advertisement

ಇದೀಗ ಕಂದಕೂರ ತಾ. ಪಂ ನ ಈಶ್ವರ ನಾಯಕ ಅಧ್ಯಕ್ಷ ಮತ್ತು ರಾಮಲಿಂಗಮ್ಮ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next