Advertisement

ಅಕ್ರಮ ತನಿಖೆಗೆ ತಾಪಂ ಸದಸ್ಯರ ಆಗ್ರಹ

02:54 PM Jan 14, 2020 | Team Udayavani |

ಜಮಖಂಡಿ: ಅಂಗನವಾಡಿ ಕೇಂದ್ರಗಳಿಗೆ ಎನ್‌ಜಿಒ ಸಂಸ್ಥೆಯಿಂದ ವಿತರಣೆ ಮಾಡುವ ಆಹಾರ ಪದಾರ್ಥಗಳಲ್ಲಿ ಅಕ್ರಮ ಹಾಗೂ ಹಮಾಲರ ವೇತನದಲ್ಲಿ ತಾರತಮ್ಯ ಅನುಸರಿಸುತ್ತಿರುವ ತಾಪಂ ಅಧಿಕಾರಿಗಳ ಧೋರಣೆ ಖಂಡಿಸಿ ತಾಪಂ ಅಧ್ಯಕ್ಷರ ನೇತೃತ್ವದಲ್ಲಿ ತಾಪಂ ಆವರಣದಲ್ಲಿ ಸದಸ್ಯರು, ಹಮಾಲರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಧರಣಿ ಸತ್ಯಾಗ್ರಹ ಆರಂಭಿಸಿದರು.

Advertisement

ತಾಪಂ ಅಧ್ಯಕ್ಷೆ ಸವಿತಾ ಕಲ್ಯಾಣಿ ಮಾತನಾಡಿ, ಕಳೆದ 13 ವರ್ಷಗಳಿಂದ ಒಂದೇ ಎನ್‌ಜಿಒ ಸಂಸ್ಥೆ ಆಹಾರ ವಿತರಣೆ ನಿರ್ವಹಣೆ ಮಾಡುತ್ತಿದೆ. ಯಾವ ಮಾನದಂಡದ ಮೇಲೆ ಗುತ್ತಿಗೆ ನೀಡಲಾಗಿದೆ ಎಂಬುದೇ ಅಧಿ ಕಾರಿಗಳಿಗೆ ಮಾಹಿತಿಯಿಲ್ಲ. ತಾಪಂ ಸಭೆಯಲ್ಲಿ ಅಧಿಕಾರಿಗಳು ಸದಸ್ಯರ ಗಮನಕ್ಕೆ ತರದೆ, 10 ವರ್ಷದಿಂದ ಒಂದೇ ಎನ್‌ಜಿಒಗೆ ಗುತ್ತಿಗೆ ನೀಡುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿಲ್ಲ. ಎನ್‌ಜಿಒ ಹಾಗೂ ಅಧಿ ಕಾರಿಗಳು ಅಕ್ರಮದಲ್ಲಿ ಶಾಮೀಲಾಗಿದ್ದು, ಸರಕಾರದ ಹಣ ದುರ್ಬಳಕೆ ಮಾಡಿದ್ದಾರೆ.

ಸಮಗ್ರವಾಗಿ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  ತಾಪಂ ಸದಸ್ಯ ಶ್ರೀಮಂತ ಚೌರಿ ಮಾತನಾಡಿ, ತಾಪಂ ಸಾಮಾನ್ಯ ಸಭೆಯಲ್ಲಿ ಅಂಗನವಾಡಿ ಕೇಂದ್ರ ಮತ್ತು ಮಹಿಳಾ ಮತ್ತು ಕಲ್ಯಾಣ ಇಲಾಖೆ ಅವ್ಯವಹಾರ ಚರ್ಚೆ ಸಂದರ್ಭದಲ್ಲಿ 18 ಸದಸ್ಯರು ಭಾಗವಹಿಸಿದ್ದರೂ ಕೋರಂ ಇಲ್ಲ ಎಂದು ತಾಪಂ ಅಧಿಕಾರಿ ಹೇಳಿದ್ದನ್ನು ಖಂಡಿಸಿದರು.

ಸಂಬಂಧಿ ಸಿದ ಇಲಾಖೆ ವಿರುದ್ಧ ತನಿಖೆಗೆ ಆದೇಶಿಸಬೇಕು ಎಂದು ಒತ್ತಾಯಿಸಿದರು. ಧರಣಿ ಸತ್ಯಾಗ್ರಹದಲ್ಲಿ ತಾಪಂ ಉಪಾಧ್ಯಕ್ಷೆ ಸುಂದ್ರವ್ವ ಬೆಳಗಲಿ, ಸದಸ್ಯರಾದ ಧರೆಪ್ಪ ಗುಗ್ಗರಿ, ಭೀಮಪ್ಪ ಹಾದಿಮನಿ, ನಾಗವ್ವ ಕುರಣಿ, ಗೋವಿಂದ ಗಸ್ತಿ, ಚಂದಪ್ಪ ನರಸಗೊಂಡ, ಬಸವರಾಜ ಕಡಪಟ್ಟಿ, ಬಸವರಾಜ ಬಿರಾದಾರ, ಮಂಜುನಾಥ ಆಲಬಾಳ, ಹಮಾಲರ ಸಂಘದ ಶ್ರೀಶೈಲ ಹಿರೇಮಠ, ಲಕ್ಷ್ಮಣ ಸರಪಳಿ, ರಾಜ್ಯ ದಲಿತ ವೇದಿಕೆ ಜಿಲ್ಲಾಧ್ಯಕ್ಷ ದಿಲೀಪ ದಾಸ್ಯಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next