Advertisement
ಶುಕ್ರವಾರ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಶಿವಕುಮಾರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕಿತ ವ್ಯಕ್ತಿ ಗುರುವಾರ ಮೃತಪಟ್ಟಿದ್ದು, ಅಂತ್ಯಕ್ರಿಯೆ ನೆರವೇರಿಸಲು ಹೋದ ವೇಳೆ ಊರಿನ ಜನರೆಲ್ಲರೂ ನನಗೆ ಕರೆ ಮಾಡಿ, ಯಾವ ಮುಂಜಾಗ್ರತೆಯೂ ಇಲ್ಲದೆ ಮಾಡಲಾಗುತ್ತಿದೆ ಎಂದು ದೂರಿದ್ದಾರೆ. ಆರೋಗ್ಯ ಇಲಾಖೆಯವರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು.
Related Articles
Advertisement
ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ವೈದ್ಯಾಧಿಕಾರಿ ಡಾ.ಜವರೇಗೌಡ, ಸೋಂಕಿನಿಂದ ಮೃತಪಟ್ಟವರನ್ನು ಸುಡುವುದಕ್ಕೆ ಅವಕಾಶವಿಲ್ಲ. 10 ಅಡಿ ಆಳದ ಗುಂಡಿ ತೆಗೆದು ಕಡ್ಡಾಯವಾಗಿದೆ ಹೂಳಲಾಗುತ್ತಿದೆ. ತಾಲೂಕಿನಲ್ಲಿ ಕೊರೊನಾ ಸೋಂಕಿನಿಂದ 63 ಜನರು ಮೃತಪಟ್ಟಿದ್ದು, ಎಲ್ಲರನ್ನೂ ಹೂಳಲಾಗಿದೆ. ಯಾರಿಗೂ ಸುಡುವುದಕ್ಕೆ ಅವಕಾಶ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ತಾಲೂಕಿನಾದ್ಯಂತ 45 ವರ್ಷ ಮೇಲ್ಪಟ್ಟವರೆಲ್ಲರಿಗೂ ಕೋವಿಶೀಲ್ಡ್ ಲಸಿಕೆ ಹಾಕಲಾಗುತ್ತಿದೆ. ತಾಲೂಕಿಗೆ 48 ಸಾವಿರ ಡೋಸ್ ಲಸಿಕೆ ಬಂದಿದ್ದು, ಯಾವುದೇ ತೊಂದರೆ ಇಲ್ಲ ಎಂದು ಹೇಳಿದರು.
ಐಸೋಲೇಷನ್‌ನಲ್ಲಿ: ಹಿಂದುಳಿದ ವರ್ಗಗಳ ಅಭಿವೃದ್ಧಿ ಅಧಿಕಾರಿ ಮಾತನಾಡಿ, ವಸತಿ ಶಾಲೆಯ 3 ಮಕ್ಕಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮನೆಗೆ ಕಳುಹಿಸಲಾಗಿದೆ. ಆ ಮಕ್ಕಳ ಸಂಪರ್ಕದಲ್ಲಿದ್ದವರನ್ನು ಐಸೋಲೇಶನ್‌ನಲ್ಲಿ ಇರಿಸಿ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಶ್ವೇತಾ, ತಾಪಂ ಕಾರ್ಯನಿರ್ವಾಹಕ ಅಕಾರಿ ಎ.ಬಿ.ವೇಣುಗೋಪಾಲ್, ತಾಲೂಕು ಯೋಜನಾಕಾರಿ ಶ್ರೀನಿವಾಸ್, ಲೆಕ್ಕಾಕಾರಿ ಮಂಜುಳಾ ಇದ್ದರು.
ಹಂತ ಹಂತವಾಗಿ ದುರಸ್ತಿ :
ಸದಸ್ಯ ಮಂಜೇಗೌಡ ಮಾತನಾಡಿ, ತಾಲೂಕಿನ ಅಂಗನವಾಡಿಗಳ ಸ್ಥಿತಿ ಶೋಚನೀಯವಾಗಿದೆ. ಚಾವಣಿ ಕುಸಿದು ಬೀಳುವ ಹಂತದಲ್ಲಿದ್ದು, ಅವುಗಳ ದುರಸ್ತಿ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಶಿಶು ಅಭಿವೃದ್ಧಿ ಅಧಿಕಾರಿ ಕುಮಾರಸ್ವಾಮಿ, ಅಂಗನವಾಡಿಗಳ ದುರಸ್ತಿಗೆ ಖನಿಜ ನಿಗಮ ಹಾಗೂ ಶಾಸಕರ ಅನುದಾನದಿಂದ ಹಣ ಪಡೆದು ಹಂತ ಹಂತವಾಗಿ ದುರಸ್ತಿ ಮಾಡಲಾಗುತ್ತಿದೆ ಹೇಳಿದರು. ಅಧ್ಯಕ್ಷೆ ಎಚ್. ಎಸ್.ಶಿವಕುಮಾರಿ ಮಾತನಾಡಿ, ಚಿಂದಗಿರಿದೊಡ್ಡಿಯಲ್ಲಿ ಅಂಗನವಾಡಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ.
ಅಂಗನವಾಡಿ ನಿರ್ಮಾಣಕ್ಕೆ ಸೂಕ್ತ ಜಾಗ ಇದ್ದರೂ ಹೊಸ ಕಟ್ಟಡ ನಿರ್ಮಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬೇರೆಡೆ ಮಕ್ಕಳಿಲ್ಲದಿದ್ದರೂ ನೂತನ ಅಂಗನವಾಡಿ ಕಟ್ಟಡ ನಿರ್ಮಿಸಲಾಗುತ್ತಿದೆ. ಆದರೆಮಕ್ಕಳು ದಾಖಲಾಗಿದ್ದರೂ ಕಟ್ಟಡ ಇಲ್ಲದೆ ಪರದಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಲಸಿಕೆ ಪಡೆದ ಸದಸ್ಯರು :
ಆರೋಗ್ಯ ಇಲಾಖೆ ವತಿಯಿಂದ ಕ್ಯಾತುಂಗೆರೆ ಆರೋಗ್ಯ ಕೇಂದ್ರದಲ್ಲಿ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ನಂತರ 45ವರ್ಷ ಮೇಲ್ಪಟ್ಟ ಸದಸ್ಯರು ಕೊರೊನಾ ಲಸಿಕೆ ಪಡೆದರು.
ನರೇಗಾ ಅಡಿ ದುರಸ್ತಿಗೆ ಮನವಿ :
ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಾಂತ ಮಾತನಾಡಿ, ತಾಲೂಕಿನ ದಕ್ಷಿಣ ವಲಯದ ವ್ಯಾಪ್ತಿಯ ಪ್ರಾಥಮಿಕ, ಪ್ರೌಢ ಶಾಲೆಗಳ ಶೌಚಾಲಯ ದುರಸ್ತಿ, ಹೊಸಶೌಚಾಲಯ ನಿರ್ಮಾಣ, ಕುಡಿಯುವ ನೀರಿನವ್ಯವಸ್ಥೆ, ಶಾಲೆಗಳ ಗೋಡೆ ಕಾಮಗಾರಿ, ಅಡುಗೆ ಮನೆ ದುರಸ್ತಿ ಕಾಮಗಾರಿಗಳನ್ನು ನರೇಗಾ ಅಡಿ ಮಾಡಬೇಕು ಎಂದು ಮನವಿ ಮಾಡಿದರು.