Advertisement

ಕುಡಿವ ನೀರಿನ ಹಾಹಾಕಾರ ತಪ್ಪಿಸಿ

04:01 PM Feb 10, 2021 | Team Udayavani |

ತುಮಕೂರು: “ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನ ವಿವಿಧ ಕಡೆ ಕುಡಿಯುವ ನೀರಿನಸಮಸ್ಯೆ ಎದ್ದು ಕಾಣುತ್ತಿದೆ. ಬೋರ್‌ವೆಲ್‌ಗ‌ಳು ಬತ್ತಿಹೋಗುತ್ತಿವೆ. ಏಪ್ರಿಲ್‌, ಮೇ ನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರ ವಾಗಲಿದ್ದು ಅಧಿಕಾರಿಗಳು ಮೊದಲು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಹೆಚ್ಚಿನ ಒತ್ತು ನೀಡಬೇಕೆಂದು’ ತಾಪಂ ಸದಸ್ಯರು ಒತ್ತಾಯಿಸಿದರು.

Advertisement

ನಗರದ ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಕವಿತಾ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸದಸ್ಯ ಸುರೇಶ್‌ ಮಾತನಾಡಿ, ಹಿರೇಹಳ್ಳಿಭಾಗದಲ್ಲಿ ಕುಡಿವ ನೀರಿನ ತತ್ವಾರ ಹೆಚ್ಚಾಗಿದ್ದು,ಇರುವ ಕೆಲವು ಬೋರ್‌ವೆಲ್‌ಗ‌ಳುಬತ್ತಿಹೋಗಿದೆ. ಇನ್ನೂ ಕೆಲವು ಬೋರ್‌ವೆಲ್‌ ದುರಸ್ಥಿ ಮಾಡಬೇಕಾಗಿದೆ. ಕೂಡಲೇಅಧಿಕಾರಿಗಳು ಕ್ರಮ ವಹಿಸಿ ನೀರಿನ ಸಮಸ್ಯೆ ನೀಗಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ತಾಪಂ ಅಧ್ಯಕ್ಷೆ ಕವಿತಾ, ಈಗಾಗಲೇ ಬೇಸಿಗೆ ಆರಂಭವಾಗಿದೆ. ಅಧಿಕಾರಿಗಳು ಜವಾಬ್ದಾರಿ ವಹಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಖಡಕ್‌ ಸೂಚನೆ ನೀಡಿದರು.

ರಾಗಿ ಖರೀದಿ ಕೇಂದ್ರ ತೆರೆಯಿರಿ: ರಾಗಿ ಖರೀದಿ ಕೇಂದ್ರಗಳು ಇನ್ನೂ ಆರಂಭವಾಗಿಲ್ಲ. ರೈತರು ಪರದಾಡುವಂತಾಗಿದೆ. ಕೂಡಲೇ ಅಧಿಕಾರಿಗಳು ಗಮನ ಹರಿಸಿ ಎಪಿಎಂಸಿ ಯಾರ್ಡ್‌ನಲ್ಲಿ ರಾಗಿ ಖರೀದಿಗೆ ಮುಂದಾಗಬೇಕೆಂದು ಸದಸ್ಯರು ಒತ್ತಾಯಿಸಿದರು.

ಗಮನ ಹರಿಸದ ಶಿಕ್ಷಣ ಇಲಾಖೆ: ಕೋರಾ ಹೋಬಳಿ ಬೊಮ್ಮನಹಳ್ಳಿ ಶಾಲೆ ಸರ್ವೆ ನಂ.22/3ಬಿ ನಲ್ಲಿ ಸುಮಾರು 1 ಎಕರೆ ಜಾಗಖಾಸಗಿಯವರು ಒತ್ತುವರಿ ಮಾಡಿದ್ದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ಗಮನ ಹರಿಸಿಲ್ಲಸದಸ್ಯರು ದೂರಿದರು. ಶಿಕ್ಷಣ ಇಲಾಖೆ ಅಧಿಕಾರಿಗಳು ವಾರದೊಳಗೆ ಒತ್ತುವರಿ ಶಾಲೆಜಾಗ ತೆರವುಗೊಳಿಸಿ ಶಾಲೆಗೆ ಬಿಡಿಸಿಕೊಡ0ಬೇಕೆಂದು ಆಗ್ರಹಿಸಿದರು.

Advertisement

ತೆರವುಗೊಳಿಸಿ: ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಹನುಮಾನಾಯ್ಕ ಮಾತನಾಡಿ, ಇಂದೇಬೊಮ್ಮನಹಳ್ಳಿ ಶಾಲೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ, ಒತ್ತುವರಿ ಆಗಿರುವಶಾಲೆಯ ಜಾಗ ತೆರವುಗೊಳಿಸಲು ಕ್ರಮ ವಹಿಸುವುದಾಗಿ ತಿಳಿಸಿದರು. 2020-21ನೇಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾಶೌಚಾಲಯ, ಆಟದ ಮೈದಾನ ಅಡುಗೆಕೋಣೆಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು ಜಲ್‌ ಜೀವನ್‌ ಮಿಷನ್‌ನಡಿ ಅನುಷ್ಠಾನಗೊಳಿಸಲು ಜಿಪಂಗೆ ವರದಿ ಕಳುಹಿಸಲಾಗಿದೆ ಎಂದರು.

ಅಭಿವೃದ್ಧಿ ಕೈಗೊಳ್ಳಿ: ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಎನ್‌ಆರ್‌ಇಜಿ ಸಹಭಾಗಿತ್ವದಲ್ಲಿ ತಾಲೂಕಿನ ಕೆಲವು ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಶಾಲಾ ಕಾಂಪೌಂಡ್‌ನಿರ್ಮಾಣ, ಆಟದ ಮೈದಾನ ಅಭಿವೃದ್ಧಿ,ಶೌಚಾಲಯ ನಿರ್ಮಾಣ, ಕೈ ತೋಟ ಅಭಿವೃದ್ಧಿಸೇರಿ ಹಲವು ಅಭಿವೃದ್ಧಿ ಕೆಲಸ ಕೈಗೊಳ್ಳಬೇಕಿದೆ ಎಂದು ಬಿಇಒ ಹನುಮಾನಾಯ್ಕ ಸಭೆಗೆ ಮಾಹಿತಿ ನೀಡಿದರು.

ತಾಲೂಕಿನ ಕೆಲವು ಸರ್ಕಾರಿ ಶಾಲೆಗಳು ಖಾತೆ ಆಗದೇ ಹಾಗೇ ಉಳಿದಿದ್ದು, ಶಿಕ್ಷಣ ಇಲಾಖೆಅಧಿಕಾರಿಗಳು ಕೂಡಲೇ ಮಾಹಿತಿ ಪಡೆದುಖಾತೆ ಆಗದೇ ಇರುವ ಶಾಲೆಗಳನ್ನು ಗುರುತಿಸಿಖಾತೆ ಮಾಡಬೇಕೆಂದು ಸದಸ್ಯ ಗಂಗಾಂಜಿನೇಯ ಒತ್ತಾಯಿಸಿದರು.

ವರದಿ ನೀಡಿ: ತಾಪಂ ಇಒ ಜೈಪಾಲ್‌ಮಾತನಾಡಿ, ತಾಲೂಕಿನ ಎಲ್ಲಾ ಇಲಾಖೆಗಳಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಖಾಲಿ ಹುದ್ದೆಗಳ ಪಟ್ಟಿ ಮಾಡಿ ಕೊಟ್ಟರೆ ಮುಂದಿನಸಭೆಯಲ್ಲಿ ಈ ಬಗ್ಗೆ ತೀಮಾನ ಕೈಗೊಂಡು ನಡವಳಿ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಸಭೆಯಲ್ಲಿ ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಸೇರಿ ವಿವಿಧಇಲಾಖೆಗಳಿಗೆ ಸಂಬಂಧಿಸಿದಂತೆ ಪ್ರಗತಿಯಮಾಹಿತಿಯನ್ನು ಅಧಿಕಾರಿಗಳು ನೀಡಿದರು.ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಶಾಂತಕುಮಾರ್‌, ಸಾಮಾಜಿಕ ಸ್ಥಾಯಿ ಸಮಿತಿಅಧ್ಯಕ್ಷ ಎಚ್‌.ಜಿ.ಮಧು, ಹಣಕಾಸು ಅಧಿಕಾರಿ ಆದಿಲಕ್ಷ್ಮಮ್ಮ ಇದ್ದರು.

ಬೇಸಿಗೆ ಪ್ರಾರಂಭವಾಗುತ್ತಿದೆ.ತಾಲೂಕಿನ ಯಾವುದೇ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಬಾರದಂತೆ ಕ್ರಮ ಕೈಗೊಳ್ಳಬೇಕು. ನೀರುಬಾರದ ಬೋರ್‌ವೆಲ್‌ ದುರಸ್ತಿಗೊಳಿ ಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.ರಂಗಸ್ವಾಮಯ್ಯ, ಸಿರಿವರ ತಾಪಂ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next