Advertisement
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿ.ಪಂ.ನ ಚುನಾಯಿತ ಅವಧಿ 2021ರ ಎ. 27ಕ್ಕೆ ಮುಕ್ತಾಯಗೊಂಡು 5 ವರ್ಷಗಳ ಜನಪ್ರತಿನಿಧಿಗಳ ಆಡಳಿತ ಕೊನೆಗೊಂಡಿತ್ತು ದಕ್ಷಿಣ ಕನ್ನಡದಲ್ಲಿ ಮಂಗಳೂರು, ಪುತ್ತೂರು, ಕಡಬ ಹಾಗೂ ಮೂಡುಬಿದಿರೆ ತಾ.ಪಂ.ಗಳ ಚುನಾಯಿತ ಅವಧಿ 2021ರ ಮೇ 7ಕ್ಕೆ; ಬಂಟ್ವಾಳ, ಬೆಳ್ತಂಗಡಿ ತಾ.ಪಂ.ಗಳ ಚುನಾಯಿತ ಅವಧಿ ಮೇ 10ಕ್ಕೆ ಹಾಗೂ ಸುಳ್ಯ ತಾ.ಪಂ.ನ ಚುನಾಯಿತ ಅವಧಿ ಮೇ 5ಕ್ಕೆ ಕೊನೆಗೊಂಡಿತ್ತು. ಈಗ ಹೊಸದಾಗಿ ಉಳ್ಳಾಲ ಮತ್ತು ಮೂಲ್ಕಿ ತಾ.ಪಂ.ಗಳು ಸೇರ್ಪಡೆಯಾಗಿದ್ದು, ಒಟ್ಟು ಸಂಖ್ಯೆ 9ಕ್ಕೇರಿದೆ.
ಸಾಮಾನ್ಯವಾಗಿ ಜಿ.ಪಂ.ನ ಚುನಾಯಿತ ಅವಧಿ ಮುಕ್ತಾಯಗೊಳ್ಳುವುದರೊಳಗೆ ಚುನಾವಣೆ ನಡೆಯಬೇಕು. ಈ ನಿಟ್ಟಿನಲ್ಲಿ ರಾಜ್ಯ ಚುನಾವಣ ಆಯೋಗ ಸಿದ್ಧತೆ ಆರಂಭಿಸಿತ್ತು. ಜಿ.ಪಂ., ತಾ.ಪಂ. ಕ್ಷೇತ್ರಗಳ ಪುನರ್‌ವಿಂಗಡನೆ ನಡೆದು ಹೊಸ ಕ್ಷೇತ್ರಗಳ ಹೆಸರು, ಕ್ಷೇತ್ರವಾರು ಮತದಾರರ ಸಂಖ್ಯೆ ನಿಗದಿಯೂ ಮುಗಿದು ಕ್ಷೇತ್ರವಾರು ಮೀಸಲಾತಿ ನಿಗದಿ ಮಾತ್ರ ಬಾಕಿಯುಳಿದಿತ್ತು. ಆದರೆ ಈ ಹಂತದಲ್ಲಿ ಕೊರೊನಾ ಅಲೆ ಎದುರಾದ ಹಿನ್ನೆಲೆಯಲ್ಲಿ ಎಲ್ಲ ಚುನಾವಣೆಗಳನ್ನು ಆರು ತಿಂಗಳು ನಡೆಸದಿರಲು ರಾಜ್ಯ ಸರಕಾರ ನಿರ್ಧರಿಸಿತ್ತು.
Related Articles
Advertisement