Advertisement

ನಾಳೆ “ಜಾತಿ ಗಡಿಗಳಿಂದಾಚೆಗೆ ಅಂಬೇಡ್ಕರ್‌’ಗೋಷ್ಠಿ

03:05 PM Oct 10, 2020 | Suhan S |

ತಿ.ನರಸೀಪುರ: ಪಟ್ಟಣದಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಂಡಿರುವ “ಜಾತಿ ಗಡಿಗಳಿಂದಾಚೆಗೆ ಅಂಬೇಡ್ಕರ್‌’ ಕುರಿತ ತಾಲೂಕು ಮಟ್ಟದ ಒಂದು ದಿನದ ವಿಚಾರಗೋಷ್ಠಿ ಭಾನುವಾರ ನಡೆಯಲಿದೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಸಿ.ಉಮಾಮಹದೇವ ಹೇಳಿದರು.

Advertisement

ಪಟ್ಟಣ ದಅಂಬೇಡ್ಕರ್‌ ‌ ಸಮುದಾಯ ಭವನದಲ್ಲಿ ವಿಚಾರಗೋಷ್ಠಿಯ ಕರಪತ್ರ ಹಾಗೂ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ರೈತ ಸಂಘ, ಹಸಿರುಸೇನೆ, ಕಬ್ಬು ಬೆಳೆಗಾರರ ಸಂಘ, ಪತ್ರಕರ್ತರ ಸಂಘ, ನಾಯಕರ ಸಂಘ, ವೀರಶೈವ ಮಹಾಸಭಾ ಹಾಗೂ ಕುರುಬರ ಸಂಘದ ಸಹಭಾಗಿತ್ವದಲ್ಲಿಜಾತಿ ಗಳಿಗಳಿಂದಾಚೆಗೆ ಅಂಬೇಡ್ಕರ್‌ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.

ಅ.11ರಂದು ಬೆಳಗ್ಗೆ 10.30 ಗಂಟೆಗೆ ಶಾಸಕ ಎಂ.ಅಶ್ವಿ‌ನ್‌ ಕುಮಾರ್‌ ವಿಚಾರ ಗೋಷ್ಠಿಯನ್ನು ಉದ್ಘಾಟಿಸಲಿದ್ದು, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಅಧ್ಯಕ್ಷತೆ ವಹಿಸುವರು. ನನ್ನ ಪ್ರಾಸ್ತಾವಿಕ ಮಾತುಗಳ ಬಳಿಕ ಮೈಸೂರು ವಿವಿಯ ಅಂಬೇಡ್ಕರ್‌ ‌ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಜೆ. ಸೋಮಶೇಖರ್‌ ಆಶಯ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ಪಿ.ಸ್ವಾಮಿನಾಥಗೌಡ, ಆಲಗೂಡು ಶಿವಕುಮಾರ್‌, ಕರೋಹಟ್ಟಿ ಕುಮಾರ ಸ್ವಾಮಿ, ವೆಂಕಟರಾಮಯ್ಯ, ಕೊತ್ತೇಗಾಲ ಬಸವ ರಾಜುಹಾಗೂದೊಡ್ಡೇಬಾಗಿಲುಎಂ.ಮಲ್ಲಿಕಾರ್ಜುನ ಸ್ವಾಮಿ ಭಾಗವಹಿಸುವರು ಎಂದರು.

ಮಧ್ಯಾಹ್ನ12 ಗಂಟೆಗೆ “ಮೀಸಲಾತಿ ವರ್ಗೀಕರಣ ಹಾಗೂ ಖಾಸಗೀಕರಣದ ಸವಾಲುಗಳು’ ಮೊದಲ ವಿಚಾರಗೋಷ್ಠಿ ನಡೆಯಲಿದ್ದು, ವಿಭಾಗ ಯೋಜನೆ ಪ್ರದೇಶ ಅಭಿವೃದ್ಧಿ ಮಂಡಳಿ ನಿರ್ದೇಶಕ ಡಿ.ಚಂದ್ರಶೇಖರಯ್ಯ ವಿಷಯ ಮಂಡಿಸುವರು. ದಸಂಸ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಚೋರನಹಳ್ಳಿ ಶಿವಣ್ಣ, ಎಂ.ಡಿ.ಬಸವರಾಜು, ಆಲಗೂಡು ನಾಗರಾಜು,ಕಿರಗಸೂರು ಶಂಕರ್‌,ಕುಕ್ಕೂರುರಾಜು, ಟಿ.ಎಸ್‌.ಪ್ರಶಾಂತ್‌ ಬಾಬು, ಬನ್ನಹಳ್ಳಿ ‌ ಸೋಮಣ್ಣ, ಯಡದೊರೆ ಸಿದ್ದರಾಜು, ತಿರುಮಕೂಡಲು ಶ್ರೀನಿವಾಸ್‌ ಹಾಗೂ ಕೆ.ವಜ್ರೆàಗೌಡ ಭಾಗವಹಿಸುವರು. ಮಧ್ಯಾಹ್ನ 2 ಗಂಟೆಗೆನಡೆಯುವ ‘ದಲಿತರೇತರರ ದೃಷ್ಟಿಯಲ್ಲಿ ಅಂಬೇಡ್ಕರ್‌’ ಎರಡನೇ ವಿಚಾರಗೋಷ್ಠಿಯಲ್ಲಿ ಪ್ರಗತಿಪರ ಚಿಂತಕ, ಸ್ವರಾಜ್‌ ಇಂಡಿಯಾ ಚಿಂತಕ ಉಗ್ರನರಸಿಂಹೆಗೌಡ ಹಾಗೂ ಉಪನ್ಯಾಸಕ ಎ.ಎಂ.ಶಿವಸ್ವಾಮಿ ಮಾತನಾಡುವರು. ವೀರಶೈವ ಮಹಾಸಭಾ ಅಧ್ಯಕ್ಷ ತೊಟ್ಟವಾಡಿಮಹದೇವಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಯಡದೊರೆ ಮಹದೇವಯ್ಯ, ಬನ್ನೂರು ಕೃಷ್ಣಪ್ಪ, ಕಿರಂಗೂರು ಸ್ವಾಮಿ, ಶ್ರೀರಂಗರಾ ಜಪುರ ಚಿನ್ನಸ್ವಾಮಿ, ಎಂ.ಮಹದೇವ್‌, ಎಸ್‌.ಬಿ. ಪ್ರಕಾಶ್‌ ಹಾಗೂ ಕೆ.ಸಿ.ಬಲರಾಂ ಭಾಗವಹಿಸುವರು.

ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಯಡದೊರೆ ಮಹದೇವಯ್ಯ, ತಾಲೂಕು ಸಂಚಾಲಕರಾದ ಕುಕ್ಕೂರು ರಾಜು, ಎಂ.ಸಿದ್ದರಾಜು, ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಕಿರಗಸೂರು ಶಂಕರ್‌, ಮುಖಂಡರಾದ ಬಿ.ನಂಜುಂಡಸ್ವಾಮಿ, ಮಲ್ಲೇಶ್‌, ಪುಟ್ಟರಾಜು, ಮೂಡಹಳ್ಳಿ ಮಹದೇವ್‌, ಶಂಭುದೇವನಪುರ

Advertisement

ನಂಜುಂಡಸ್ವಾಮಿ, ಎಂ.ಮಹದೇವಸ್ವಾಮಿ, ಸಿ.ಎಂ. ಮಹದೇವಸ್ವಾಮಿ, ಮಾದೇಶ, ಪ್ರಶಾಂತ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next