Advertisement

ತಾಲೂಕು ಮಟ್ಟದ ಶಾಲಾ ದಾಖಲಾತಿ ಆಂದೋಲನ

11:48 AM Jun 02, 2018 | Team Udayavani |

ಬಸವಕಲ್ಯಾಣ: ಸಾರ್ವಜನಿಕ ಶಿಕ್ಷಣ ಇಲಾಖೆ ಕ್ಷೇತ್ರಶಿಕ್ಷಣಾಧಿಕಾರಿ ಕಾರ್ಯಾಲಯದಿಂದ ತಾಲೂಕಿನ ಮುಡಬಿ ಗ್ರಾಮದಲ್ಲಿ ತಾಲೂಕು ಮಟ್ಟದ 2018-19ನೇ ಸಾಲಿನ ದಾಖಲಾತಿ ಆಂದೋಲನ ಕಾರ್ಯಕ್ರಮ ನಡೆಯಿತು.

Advertisement

ದಾಖಲಾತಿ ಆಂದೋಲನ ಕುರಿತು ಗ್ರಾಮದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಕಾರ್ಯಕ್ರಮದ ನಿಮಿತ್ತ ಶಾಲೆಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ಮಕ್ಕಳಿಂದ ನಡೆದ ಕೋಲಾಟ ಗಮನ ಸೆಳೆದರೆ, ವಿದ್ಯಾರ್ಥಿನಿಯರು ಕುಂಭ ಕಳಸ ಕೊತ್ತು ಹೆಜ್ಜೆ ಹಾಕಿದರು.

ಗ್ರಾಮದಲ್ಲಿ ನಡೆದ ಮೆರವಣಿಗೆಯಲ್ಲಿ ಸರ್ಕಾರದಿಂದ ಒದಗಿಸಲಾಗುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುವ ಜತೆಗೆ 5 ವರ್ಷ 5 ತಿಂಗಳು ತುಂಬಿದ ಮಕ್ಕಳಿಗೆ ಸರ್ಕಾರಿ ಶಾಲೆಗಳಿಗೆ ದಾಖಲಾತಿ ಮಾಡುವಂತೆ ಪಾಲಕರಲ್ಲಿ ಮನವಿ ಮಾಡಲಾಯಿತು. 

ಸರ್ಕಾರದಿಂದ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಮಧ್ಯಾಹ್ನ ಬಿಸಿಊಟದ ವ್ಯವಸ್ಥೆ, ಕ್ಷೀರಭಾಗ್ಯ ಯೋಜನೆ ಹಾಗೂ ಮಕ್ಕಳಿಗೆ ಶಿಷ್ಯವೇತನ ನೀಡುವ ಸೌಲಭ್ಯ ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿದ್ದು, ಇದರ ಸದುಪಯೋಗ
ಪಡೆಯುಬೇಕು. ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಕಾಳಜಿ ವಹಿಸುತ್ತಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಾಲಕರು ಕೈಜೋಡಿಸಬೇಕು ಎಂದು ವಿನಂತಿಸಲಾಯಿತು.

ಶಿಕ್ಷಣ ಇಲಾಖೆಯ ಡಾ| ಅಂಬಾದಾಸ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶರಣಬಸಪ್ಪ ಬಿರಾದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದೀಲಿಪ ಸಾಗಾವೆ, ಎಸ್‌ಸಿ/ಎಸ್ಟಿ ಶಿಕ್ಷಕರ ಕ್ಷೇಮಾಭಿವೃದ್ಧಿ
ಸಂಘದ ತಾಲೂಕು ಅಧ್ಯಕ್ಷ ಅಂಬಣ್ಣ ಘಾಂಗ್ರೆ, ಸಿಆರ್‌ಪಿ ಹಣಮಂತ, ಇಸಿಒ ರವಿ ಬಿರಾದಾರ, ತುಕಾರಾಮ ರೊಡ್ಡೆ, ಬಿಆರ್‌ಪಿ ವಿನೋದ ರಾಠೊಡ, ಐಇಆರ್‌ಟಿ ಶರಣಪ್ಪ ಗದಲೇಗಾಂವ, ಹಾಗೂ ತಾಲೂಕಿನ ವಿವಿಧ ವಲಯದ ಇಸಿಒ,
ಬಿಆರ್‌ಪಿ, ಬಿಆಯ್‌ಆರ್‌ಟಿಇ ಹಾಗೂ ಸಿಆರ್‌ಪಿ ಭಾಗವಹಿಸಿದ್ದರು. ಮುಡಬಿ ವಲಯದ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮಕ್ಕಳು ಹಾಗೂ ಮುಖ್ಯಗುರುಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು. ಗ್ರಾಮದ ಪಾಲಕರು, ಮುಖಂಡರು, ವಿವಿಧ ಶಾಲೆಗಳ ಎಸಿಎಂಸಿ ಅಧ್ಯಕ್ಷರು, ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಂದೋಲನ ಯಶಸ್ವಿಗೆ ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next