ಎಚ್.ಡಿ.ಕೋಟೆ: ಕಳೆದ ಸಾಲಿನಲ್ಲಿ ರಾಜ್ಯ ದಲ್ಲಿ ನಿರೀಕ್ಷೆ ಪ್ರಮಾಣದಲ್ಲಿ ಮಳೆ ಯಾಗದೆ ಭೀಕರ ಬರಗಾಲ ಎದುರಾಗಿ ಪ್ರಸಕ್ತ ಸಾಲಿ ನಲ್ಲಾದರೂ ಉತ್ತಮ ಮಳೆಯಾದರೆ ಸಾಕೆಂದು ತಾಲೂಕಿನ ರೈತರು ಕೃಷಿ ಭೂಮಿ ಹದ ಮಾಡಿಕೊಂಡು ಮಳೆಗಾಗಿ ಹಾತೊರೆಯುತ್ತಿದ್ದಾರೆ. ಪ್ರತಿ ಸಾಲಿನ ಯುಗಾದಿಗೆ ಮುನ್ನ 2-3 ಭಾರಿ ಮಳೆಯಾಗುವುದು ವಾಡಿಕೆ ಯಾದರೂ ಪ್ರಸಕ್ತ ಸಾಲಿನಲ್ಲಿ ಮಳೆಯ ಆಗಮನ ವಾಗಿಲ್ಲ.
ಕಳೆದ ಸಾಲಿನಲ್ಲಿ ಬಿದ್ದ ಅಲ್ಪಸ್ಪಲ್ಪ ಮಳೆಯಿಂದ ಕೃಷಿ ಚಟುವಟಿಕೆ ಕುಂಠಿತವಾಗಿ ಕೆರೆಕಟ್ಟೆಗಳು ನೀರಿಲ್ಲದೇ ಒಣಗಿ ನಿಂತಿವೆ. ಅಂತರ್ಜಲ ಕುಸಿದು ಕುಡಿವ ನೀರಿಗಾಗಿ ಜನ- ಜಾನುವಾರುಗಳು ಹಾಹಾಕಾರ ಪಡುವಂತಾಗಿದೆ. ಇದರಿಂದ ಕಂಗೆಟ್ಟ ರೈತರು ಪ್ರಸಕ್ತ ಸಾಲಿನಲ್ಲಿಯಾದರೂ ಉತ್ತಮ ಬೆಳೆ ತೆಗೆದು ಜೀವನ ಸುಧಾರಿಸಿ ಕೊಳ್ಳುವ ನಿರ್ಧಾರ ಮಾಡಿದ್ದಾರೆ. ಆದರೆ ಮಳೆಯಾಗುವುದೇ ಅನ್ನುವುದೇ ಯಕ್ಷ ಪ್ರಶ್ನೆ.
ಭೂಮಿ ಹದ ಮಾಡಿಕೊಂಡ ರೈತರು: ಕಳೆದ ಸಾಲಿನಲ್ಲಿ ಮಳೆ ಕೈಕೊಟ್ಟ ಹಿನ್ನೆಲೆ ಪ್ರಸಕ್ತ ಸಾಲಿನಲ್ಲಾದರೂ ಮಳೆಯ ಆಗಮನ ವಾಗುತ್ತಿದ್ದಂತೆಯೇ ಬಿತ್ತನೆ ಕಾರ್ಯ ಆರಂಭಿಸುವ ಸಲುವಾಗಿ ತಾಲೂಕಿನ ಬಹುತೇಕ ರೈತರು ಭೂಮಿ ಉಳುಮೆ ಮಾಡಿಕೊಂಡು ಮಳೆರಾಯನ ಆಗಮನ ಕ್ಕಾಗಿ ಕಾಯುತ್ತಿದ್ದಾರೆ. ಬೇಸಿಗೆಯ ಉರಿ ಬಿಸಿಲಿತ ತಾಪ ಸಹಿಸಲಾಗುತ್ತಿಲ್ಲ, ಹೀಗಿರು ವಾಗಲೂ ಅನ್ನದಾನ ಧೃತಿಗೆಡದೆ ಪ್ರಸಕ್ತ ಸಾಲಿನಲ್ಲಿಯಾದರೂ ಉತ್ತಮ ಬೆಳೆಯುವ ನಿರೀಕ್ಷೆಯಲ್ಲಿದದ್ದಾನೆ.
ತಾಲೂಕಿನ ಆರ್ಥಿಕ ಬೆಳೆ ಹತ್ತಿ: ತಾಲೂಕಿನ ರೈತರ ಆರ್ಥಿಕ ಬೆಳೆ ಹತ್ತಿ. ಈ ಹತ್ತಿಗೆ ನೆರೆಯ ತಮಿಳುನಾಡಿನಲ್ಲಿ ವಿಶೇಷ ಬೇಡಿಕೆ ಇದೆ. ಹಾಗಾಗಿ ತಾಲೂಕಿನ ಬಹುತೇಕ ರೈತರು ಹತ್ತಿ ಅವಲಂಭಿಸಿದ್ದಾರೆ.
ನಿರೀಕ್ಷೆ ಪ್ರಮಾಣದ ಮಳೆಯಾಗುವುದೆ: ಕಳೆದ ಸಾಲಿನ ಬರಗಾಲದಿಂದಲೇ ಜನ ಜಾನು ವಾರುಗಳು ತತ್ತರಗೊಂಡಿವೆ. ಹೀಗಿರು ವಾಗ ಮಳೆಯ ತಜ್ಞರ ವರದಿಯಂತೆ ಪ್ರಸಕ್ತ ಸಾಲಿನಲ್ಲಿಯೂ ನಿರೀಕ್ಷೆ ಪ್ರಮಾಣದಲ್ಲಿ ಮಳೆ ಯಾಗುವುದಿಲ್ಲ ಅನ್ನುವ ಮಾಹಿತಿ ಲಭ್ಯ ವಾಗಿದೆ.
ಆದರೂ ರೈತರು ಮಾತ್ರ ಕೃಷಿ ಚಟುವಟಿಕೆ ಆರಂಭಕ್ಕೆ ಹಾತೊರೆಯುತ್ತಾ ಮಳೆಗಾಗಿ ಕಾಯುತ್ತಿದ್ದಾರೆ. ಆದರೆ ಎಷ್ಟು ಪ್ರಮಾಣದಲ್ಲಿ ಬೀಳುವುದೋ ಅನ್ನುವುದರ ಮೇಲೆ ರೈತರ ಜೊತೆಯಲ್ಲಿ ಜನಸಾಮಾನ್ಯರ ಜೀವನ ನಿರ್ಧಾ ರವಾಗಲಿದ್ದು ಮುಂದೇ ನಾಗುವುದೋ ಕಾದು ನೋಡಬೇಕಿದೆ?