Advertisement

ಕಾರ್ಮಿಕರಿಗೆ ತಾಲೂಕು ಆಡಳಿತ ನೆರವು

03:13 PM Apr 18, 2020 | mahesh |

ಚನ್ನರಾಯಪಟ್ಟಣ/ಶ್ರವಣಬೆಳಗೊಳ: ತಾಲೂಕಿನ ಶ್ರವಣ ಬೆಳಗೊಳ ಹೋಬಳಿ ಬೆಟ್ಟದಹಳ್ಳಿ ಕ್ವಾರಿಯಲ್ಲಿ ನೆಲೆಸಿರುವ ಕೂಲಿಕಾರ್ಮಿಕರಿಗೆ ಶಾಸಕ ಸಿ.ಎನ್‌.ಬಾಲಕೃಷ್ಣ ತಾಲೂಕು ಆಡಳಿತದಿಂದ ಆಹಾರ ಪದಾರ್ಥವನ್ನು ವಿತರಿಸಿದರು. ಕೂಲಿ ಕೆಲಸವಿಲ್ಲದೇ ಪರಿತಪಿಸುತ್ತಿದ್ದ ಬಗ್ಗೆ ಉದಯವಾಣಿ ಪತ್ರಿಕೆ “ನಮ್ಮೂರಿಗೆ ತೆರಳಲು ವ್ಯವಸ್ಥೆ ಮಾಡಿ’ ಎಂದ ಶೀರ್ಷಿಕೆ ಅಡಿಯಲ್ಲಿ ವಿಶೇಷ ವರದಿ ಪ್ರಕಟಣೆ ಮಾಡಿತ್ತು. ಇದನ್ನು ಗಮನಿಸಿದ ತಾಲೂಕು ಆಡಳಿತ ಕೂಲಿ ಕಾರ್ಮಿಕರು ನೆಲೆಸಿರುವ ಸ್ಥಳಕ್ಕೆ ಧಾವಿಸಿ ತಾಲೂಕು ಆಡಳಿತ ನಿಮ್ಮೊಂದಿಗೆ ಇದೆ. ಲಾಕ್‌ಡೌನ್‌ ಮುಗಿಯುವವರೆಗೂ ಇಲ್ಲೇ ನೆಲೆಸ ಬೇಕೆಂದು ಧೈರ್ಯ ತುಂಬಿ ನಿತ್ಯ ಬಳಕೆಯ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಿದೆ.

Advertisement

ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಮಿಕರು ನೆಲೆಸಿರುವ ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿದರು. ಆರೋಗ್ಯ ಸಮಸ್ಯೆ ಕಂಡು ಬಂದಾಗ ದೂರವಾಣಿ ಕರೆ ಮಾಡಿದರೆ ವೈದ್ಯರೊಂದಿಗೆ ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಇಲ್ಲಿ ವಾಸವಾಗಿರುವ ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಕ್ರಷರ್‌ ಮಾಲೀಕರಾದ ಎಲ್‌ವಿಆರ್‌ ಸುನಿಲ್‌ಕುಮಾರ, ಜಗದೀಶ್‌ ಜನಪ್ರತಿನಿಧಿ ಮತ್ತು ಅಧಿಕಾರಿಗಳೊಂದಿಗೆ ಮಾತ ನಾಡಿ, ಕಾರ್ಮಿಕರು ಪೋಷಕರು ಅವರ ಹುಟ್ಟೂರಿನಲ್ಲಿ ಇದ್ದಾರೆ. ಕೊರೊನಾ ವೈರಸ್‌ ಭೀತಿಯಿಂದ ಪೋಷಕರ ನೋಡಿಕೊಳ್ಳಬೇಕು ಎಂದು ಒತ್ತಡ ಹಾಕುತ್ತಿದ್ದಾರೆ. ಇವರಿಗೆ ಆಹಾರದ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇವೆ ಆದರೂ ಅವರು ತಮ್ಮೂರಿಗೆ ತೆರಳಲು ನಿತ್ಯ ಬೇಡಿಕೊಳ್ಳುತ್ತಿದ್ದಾರೆ ಎಂದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕ್ರಷರ್‌ ಮಾಲೀಕರಿಂದ ಕೂಲಿ ಕಾರ್ಮಿಕರ ಪಟ್ಟಿ ಪಡೆದು ಶೀಘ್ರದಲ್ಲಿ ಗೃಹ ಬಳಕೆ ಸಾಮಗ್ರಿ ನೀಡುವುದಾಗಿ ಭರ ವಸೆ ನೀಡಿದ್ದಾರೆ. ಯುವಬ್ರಿಗೇಡ್‌ ತಾಲೂಕು ಸಂಚಾಲಕ ಧರ ಣೀಶ್‌, ತಹಶೀಲ್ದಾರ್‌ ಜೆ.ಬಿ. ಮಾರುತಿ, ಬಿಸಿಎಂ ಅಧಿಕಾರಿ ಮಂಜುನಾಥ, ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಚಲುವನಾರಾಯಣ ಸ್ವಾಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next