Advertisement

ಉಪ ಚುನಾವಣೆಗೆ ತಾಲೂಕು ಆಡಳಿತ ಸಕಲ ಸಿದ್ಧ

11:47 AM Sep 24, 2019 | Team Udayavani |

ಹಿರೇಕೆರೂರ: ಹಿರೇಕೆರೂರ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಗೆ ತಾಲೂಕು ಆಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ವಿನೋದಕುಮಾರ ಹೆಗ್ಗಳಗಿ ತಿಳಿಸಿದರು.

Advertisement

ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಉಪಚುನಾವಣೆ ಸಿದ್ಧತೆ ಕುರಿತು ಅವರು ಮಾಹಿತಿ ನೀಡಿದರು. ಉಪಚುನಾವಣೆಗೆ ಇಂದಿನಿಂದ ಸೆ.30 ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ನಾಮಪತ್ರ ಸಲ್ಲಿಸಬಹುದು. ಅ.1 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅ.3ರಂದು ಮಧ್ಯಾಹ್ನ 3 ಗಂಟೆ ಒಳಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಅ.21 ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದೆ ಎಂದರು.

ಹಿರೇಕೆರೂರ ವಿಧಾನ ಕ್ಷೇತ್ರದಲ್ಲಿ ಒಟ್ಟು 1,82,815 ಮತದಾರರಿದ್ದು, 94,246 ಪುರುಷರು, 88565 ಮಹಿಳೆಯರು ಮತ್ತು 4 ಇತರ ಮತದಾರರಿದ್ದಾರೆ. 229 ಮತಗಟ್ಟೆ ಕೇಂದ್ರಗಳಿವೆ. ಹೊಲಬಿಕೊಂಡ, ಹಳ್ಳೂರು ಮತ್ತು ಕೊಡಮಗ್ಗಿ ಗ್ರಾಮಗಳಲ್ಲಿ ಚೆಕ್‌ಪೋಸ್ಟ್‌ಗಳು ಸ್ಥಾಪಿಸಲಾಗುವುದು. ಅವುಗಳಲ್ಲಿ ಅಧಿಕಾರಿಗಳು, ಪೊಲೀಸ್‌ ಸಿಬ್ಬಂದಿ, ವಿಡಿಯೋ ಗ್ರಾಫರ್‌ ನಿತ್ಯ ಮೂರು ಪಾಳಯದಲ್ಲಿ ವಾಹನ ತಪಾಸಣೆ ನಡೆಸುವರು ಎಂದರು.

26 ಸೆಕ್ಟರ್‌ ಆಫೀಸರನ್ನು ನೇಮಕ ಮಾಡಲಾಗಿದ್ದು, ಮತಗಟ್ಟೆ ಕೇಂದ್ರ ತಪಾಸಣೆ ಮತ್ತು ಮತಗಟ್ಟೆ ಕೇಂದ್ರದ ಸಿಬ್ಬಂದಿಗಳಿಗೆ ಸೆಕ್ಟರ್‌ ಆಫೀಸರ ಎರಡು ಹಂತಗಳಲ್ಲಿ ತರಬೇತಿ ನೀಡುತ್ತಾರೆ. ಹಿರೇಕೆರೂರ, ರಟ್ಟಿàಹಳ್ಳಿ ಮತ್ತು ಹಂಸಭಾವಿ ಹೋಬಳಿಗೆ ಪ್ರತ್ಯೇಕ ಪ್ಲೇಯಿಂಗ್‌ ಸ್ಕ್ಯಾಡ್‌ ತಂಡ, ಮಾದರಿ ನೀತಿ ಸಂಹಿತೆಯ ನೋಡಲ್‌ ಅಧಿಕಾರಿ, ಚುನಾವಣಾ ವೆಚ್ಚ ಪರಿಶೀಲನಾ ತಂಡ, ವಿಡಿಯೋ ಕಣ್ಗಾವಲು ತಂಡಗಳನ್ನು ರಚಿಸುವ ಮೂಲಕ ಉಪ ಚುನಾವಣೆಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ, ತಹಶೀಲ್ದಾರ್‌ ಆರ್‌.ಎಚ್‌. ಭಾಗವಾನ್‌, ಎಚ್‌. ವೈ. ಕೊಪ್ಪದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next