Advertisement
ಕೇಂದ್ರ ಸಂಸದೀಯ ಸಮಿತಿ ನೌಕಾನೆಲೆಗೆ ಬಂದ ಕಾರಣ ಟನಲ್ ನ್ನು ಐಆರ್ ಬಿ ಅಧಿಕಾರಿಗಳು ಓಪನ್ ಮಾಡಿಕೊಟ್ಟಿದ್ದರು. ಇದು ಮಾಧ್ಯಮ ಕಣ್ಣಿಗೆ ಬೀಳುತ್ತಿದ್ದಂತೆ, ಮಾಹಿತಿ ಜಿಲ್ಲಾಧಿಕಾರಿ ಹಾಗೂ ಶಾಸಕರಿಗೂ ತಲುಪಿತು. ನಂತರ ವಿಧಾನಪರಿಷತ್ ಸದಸ್ಯ ಉಳ್ವೇಕರ್ ಅವರಿಗೂ ತಲುಪಿತು. ಆಗ ಸಂಸದರಿಗೆ ಒಂದು ನೀತಿ, ಸಾರ್ವಜನಿಕರಿಗೆ ಒಂದು ನೀತಿಯೇ ಎಂಬ ಪ್ರಶ್ನೆ ಉದ್ಭವಿಸಿತು . ತಕ್ಷಣ ಶಾಸಕರು ಜಿಲ್ಲಾಧಿಕಾರಿ, ಮಾಧ್ಯಮಗಳ ಜೊತೆ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಜೊತೆ ಮಾತುಕತೆಗೆ ಮುಂದಾದರು. ಮಾತುಕತೆ ಯಶಸ್ವಿಯಾದ ಕಾರಣ , ಅನಾಹುತದ ಹೊಣೆಯನ್ನು ಎನ್ ಎಚ್ ಎ ಐ ಮತ್ತು ಐಆರ್ ಬಿಗೆ ಜಿಲ್ಲಾಧಿಕಾರಿ ಯಿಂದ ಪತ್ರಬರೆಯಿಸಿ, ಸಾರ್ವಜನಿಕರಿಗೆ,ವಾಹನ ಚಾಲಕರಿಗೆ ಅನುಕೂಲ ಮಾಡಿಕೊಡುವ ನಿರ್ಧಾರಕ್ಕೆ ಬರಲಾಯಿತು. ಜಿಲ್ಲಾಧಿಕಾರಿಗೆ ಬಂದ ಮೇಲ್
ಇದಕ್ಕೂ ಮುನ್ನ ಎನ್ ಎಚ್ ಐ ಹಿರಿಯ ಅಧಿಕಾರಿ ಟನಲ್ ಪರಿಶೀಲನೆಗೆ ಅ.2 ರಂದು ಬರಬೇಕಾದ ಅಧಿಕಾರಿ ಅ. 8 ರಂದು ಬರುವರು. ಜೆ.ಪಿ.ನಡ್ಡಾ ಪುಣೆಗೆ ಬರುವ ಕಾರಣ ಟೆಕ್ನಾಲಜಿಕಲ್ ಯುನಿವರ್ಸಿಟಿ ವಿಜ್ಞಾನಿಗಳು ಕಾರವಾರಕ್ಕೆ ತತ್ ಕ್ಷಣ ಬರಲಾಗುತ್ತಿಲ್ಲ. ಅವರು ಅ. 8 ರಂದು ಬರಲಿದ್ದಾರೆಂದು ಜಿಲ್ಲಾಧಿಕಾರಿಗೆ ಮೇಲ್ ಮಾಡಿದ್ದರು. ಜಿಲ್ಲಾಧಿಕಾರಿ ಐಆರ್ ಬಿ ಮತ್ತು ಎನ್ ಎಚ್ ಎ ಐಗೆ ಅ.2 ರೊಳಗೆ ಟನಲ್ ಸುರಕ್ಷತೆ ಬಗ್ಗೆ ಖಾತ್ರಿ ಪಡಿಸಲು ಗಡುವು ನೀಡಿದ್ದರು. ಈಗ ಎನ್ ಎಚ್ ಎಐ ಮೇಲ್ ಗಮನಿಸಿ, ಸಾರ್ವಜನಿಕರಿಗೆ , ವಾಹನ ಸವಾರರಿಗೆ ತೊಂದರೆ ಆಗುವುದನ್ನು ತಪ್ಪಿಸಲು , ಟನಲ್ ವಾಹನ ಸಂಚಾರಕ್ಕೆ ಮುಕ್ತ ಮಾಡಿ ಸೋಮವಾರ ಸಂಜೆ ಆದೇಶ ಹೊರಡಿಸಿದರು. ಅಲ್ಲದೆ ಅ.8 ರೊಳಗೆ ಟನಲ್ ಸುರಕ್ಷತೆ ಮತ್ತೊಮ್ಮೆ ಪರೀಕ್ಷಿಸಬೇಕು. ಅನಾಹುತವಾದರೆ ಅದರ ಹೊಣೆಯನ್ನು ಎನ್ ಎಚ್ ಎ ಐ ಹೊನ್ನಾವರದಲ್ಲಿನ ಕಚೇರಿಯ ಪ್ರೊಜೆಕ್ಟ್ ಡೈರೆಕ್ಟರ್ ಹೊರಬೇಕು ಎಂದು ಆದೇಶ ಹೊರಡಿಸಿದ್ದಾರೆ. ಈ ಆದೇಶವನ್ನು ಸಂಬಂಧಿಸಿದ ಕಂಪನಿ ಹಾಗೂ ಎನ್ ಎಚ್ ಎ ಐ ಹೊನ್ನಾವರ ಕಚೇರಿಗೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಪೊಲೀಸ್ ಅಧೀಕ್ಷಕರು, ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ನಿರ್ದೇಶಕರಿಗೆ, ಜಿಲ್ಲೆಯ ಕೆಎಸ್ ಆರ್ ಟಿಸಿ ಅಧಿಕಾರಿಗಳು, ತಹಶೀಲ್ದಾರರು, ಸಹಾಯಕ ಕಮಿಷನರ್ ಗಳಿಗೆ ಕಳುಹಿಸಲಾಗಿದೆ.
Related Articles
Advertisement