Advertisement

ಬೇರೆ ಧರ್ಮದ ಬಗ್ಗೆ ಮಾತಾಡಿದ್ರೆ ಗಲಾಟೆ ಆಗುತ್ತೆ..ಹಾಗಾಗಿ..;ಜಗ್ಗೇಶ್

12:58 PM Jun 27, 2017 | Sharanya Alva |

ಬೆಂಗಳೂರು:ಹಿಂದೂ ದೇವರು, ನಂಬಿಕೆ ಬಗ್ಗೆ ಗಂಟೆಗಟ್ಟಲೆ ಚರ್ಚೆ ನಡೆಯುತ್ತೆ. ಆದ್ರೆ ಬೇರೆ ಧರ್ಮಗಳ ಬಗ್ಗೆ ಮಾತಾಡಿದ್ರೆ ಗಲಾಟೆ ನಡೆಯುತ್ತೆ. ಬೇರೆ ಧರ್ಮಗಳಲ್ಲಿ ವಿವಾದಗಳಿಗೆ ಅವಕಾಶವೇ ನೀಡುವುದಿಲ್ಲ. ಕೆಲವರು ಭಗವದ್ಗೀತೆ ಎಲ್ಲಿದೆ? ದೇವರು ಎಲ್ಲಿದ್ದಾನೆ ಎಂದು ಪ್ರಶ್ನಿಸುತ್ತಾರೆ. ಹಾಗಾಗಿ ಹಿಂದೂಗಳು ಮಾತ್ರ ಇಂದು ಕಲಬೆರಕೆ ಆಗಿದ್ದಾರೆ ಎಂದು ನಟ, ಮಾಜಿ ಎಂಎಲ್ ಸಿ ಜಗ್ಗೇಶ್ ಅವರು ಗೋ ಹತ್ಯೆ ಪರವಾಗಿ ಇರುವವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

Advertisement

ಮಂಗಳವಾರ ನಗರದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಹಿಂದೂ ಧರ್ಮದ ಬಗ್ಗೆ ತುಂಬಾ ಚರ್ಚೆ ನಡೆಯುತ್ತಿದೆ. ನಮ್ಮ ವಿಚಾರಧಾರೆಗಳು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿವೆ. ನಾವು ಗೋ ಮಾಂಸ ತಿನ್ನುತ್ತೇವೆ, ಯಾರ್ ಏನ್ ಮಾಡ್ತೀರಿ ಎಂಬ ಅರ್ಥದಲ್ಲಿ ಮಾತಾನಾಡುತ್ತಾರೆ. ಹಾಗಂತ ಬೇರೆ ಧರ್ಮದ ಬಗ್ಗೆ ಚರ್ಚೆ, ಚಕಾರವೇ ಎತ್ತೋದಿಲ್ಲ. ಯಾಕೆಂದರೆ ಗಲಾಟೆ ಆಗುತ್ತೆ ಎಂದು ಹೇಳಿದರು.

ಹಿಂದೂ ಧರ್ಮದ ಬಗ್ಗೆ ಚರ್ಚೆ, ಅವಹೇಳನ, ಪ್ರಶ್ನಿಸೋದು ನಡೆಯುತ್ತಿದೆ. ಕೆಲ ಹಿಂದೂಗಳು ಯಾವ ತರ ಆಗಿದ್ದಾರೆ ಅಂದ್ರೆ ಆ ಕಡೆ ಇಂಗ್ಲಿಷ್ ನವರೂ ಅಲ್ಲ, ಈ ಕಡೆ ಇಂಡಿಯನ್ನೂ ಅಲ್ಲದ ಕಲಬೆರಕೆ ಆಗಿ ಬಿಟ್ಟಿದ್ದಾರೆ ಎಂದು ಗೋ ಮಾಂಸ ತಿನ್ನುವ ಹಿಂದೂಗಳ ವಿರುದ್ಧ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next