ತುರುವೇಕೆರೆ: ರಾಜ್ಯದ ಮಾಜಿ ಸಚಿ ವರೂ, ಹೇಮಾವತಿ ನೀರಿನ ಹರಿಕಾರರು ಆಗಿದ್ದ ದಿ.ತಾಳ್ಕೆರೆ ಸುಬ್ರ ಹ್ಮಣ್ಯಂ ರವರ ಜನ್ಮಸ್ಥಳವಾಗಿರುವ ತಾಳ್ಕೆರೆ ಗ್ರಾಮವನ್ನು ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಮಸಾಲಾ ಜಯರಾಮ್ ತಿಳಿಸಿದರು.
ತಾಲೂಕಿನ ತಾಳ್ಕೆರೆ ಗ್ರಾಮ ಮತ್ತು ಕಾಲೋನಿ ಯಲ್ಲಿ 85 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಸಿಸಿ ರಸ್ತೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತ ನಾಡಿ, ಹಲವಾರು ವರ್ಷಗಳಿಂದ ಈ ಗ್ರಾಮವನ್ನು ನಿರ್ಲಕ್ಷಿಸ ಲಾಗಿತ್ತು. ಇದುವರೆಗೂ ಆಡಳಿತ ಮಾಡಿದ್ದ ಶಾಸ ಕರು ಯಾವುದೇ ಅಭಿವೃದ್ಧಿ ಕಾರ್ಯ ಮಾಡಿರಲಿಲ್ಲ ಎಂದು ದೂರಿದರು.
ತಾಳ್ಕೆರೆ ಗ್ರಾಮದಲ್ಲಿ ಹಲವಾರು ವರ್ಷ ಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗ್ರಾಮ ಸ್ಥರು ಸಹಕರಿಸಿ ಕಾಮ ಗಾರಿಗೆ ಅವಕಾಶ ನೀಡಿ ದಲ್ಲಿ ಅತ್ಯುತ್ತಮ ರಸ್ತೆ ಮತ್ತು ಚರಂಡಿ ಆಗಲಿದೆ ಎಂದು ಶಾಸಕ ಮಸಾಲಾ ಜಯ ರಾಮ್ ತಿಳಿಸಿದರು.
ಈಗ ಮೊದಲ ಹಂತದ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಇದಾದ ನಂತರ ಪುನಃ ಹೆಚ್ಚುವರಿ ಕಾಮಗಾರಿ ಪ್ರಾರಂಭಿಸಲಾಗುವುದು. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕಾಮ ಗಾರಿ ಮಾಡಬೇಕೆಂದು ಶಾಸಕ ಮಸಾಲಾ ಜಯರಾಮ್ ಸೂಚನೆ ನೀಡಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗ ರತ್ನಮ್ಮ, ಉಪಾ ಧ್ಯಕ್ಷೆ ಮಣಿಯಮ್ಮ, ಗಾಪಂ ಸದಸ್ಯರಾದ ಸಿದ್ದಲಿಂಗ ಮೂರ್ತಿ, ಗ್ರಾಮದ ಮುಖಂಡರಾದ ರಾಜ ಶೇಖರ್, ಮಹ ಲಿಂಗಯ್ಯ, ಅನಂತ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.