Advertisement
ಭಾರತದ ಆಂತರಿಕ ವ್ಯವಹಾರಗಳಲ್ಲಿ ಇತರ ದೇಶಗಳು ಮೂಗು ತೂರಿಸುವ ಅಗತ್ಯವಿಲ್ಲ ಎಂದು ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಭಾರತದ ನಿಲುವಿನ ಬಗ್ಗೆ ಚೀನ ಸ್ಪಷ್ಟ ತಿಳಿವಳಿಕೆ ಇದೆ.ಭಾರತದ ಆಂತರಿಕ ವಿಚಾರಗಳ ಬಗ್ಗೆ ಇತರ ದೇಶಗಳು ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲ ಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ. ಶುಕ್ರವಾರ ಭಾರತಕ್ಕೆ ಆಗಮಿ ಸಲಿರುವ ಕ್ಸಿ , ಅದಕ್ಕೂ ಮುನ್ನ ಪಾಕಿಸ್ಥಾನದ ಪ್ರಧಾನಿ ಖಾನ್‌ರನ್ನು ಭೇಟಿ ಮಾಡಿದ್ದಾರೆ.
ಅಷ್ಟೇ ಅಲ್ಲ, ಚೀನ ಮತ್ತು ಪಾಕಿಸ್ಥಾನದ ಸಂಬಂಧವು ಸುಸ್ಥಿರ ಎಂಬುದಾಗಿ ಭರವಸೆ ನೀಡಿದ್ದಾರೆ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಕಾಶ್ಮೀರ ವಿಚಾರವನ್ನು ಪ್ರಸ್ತಾವಿಸುವ ಪಾಕಿಸ್ಥಾನದ ಪ್ರಯತ್ನ ವಿಫಲವಾದ ಅನಂತರ, ಚೀನಗೆ ತೆರಳಿ ಅಲ್ಲಿ ಕ್ಸಿ ಜಿನ್‌ಪಿಂಗ್‌ರನ್ನು ಖಾನ್ ಭೇಟಿ ಮಾಡಿದ್ದರು.