Advertisement
ಕಿನ್ನಿಗೋಳಿ: ಕಿನ್ನಿಗೋಳಿ ಪೇಟೆಯ ಪೂರ್ವ ಭಾಗದಲ್ಲಿರುವ ಗ್ರಾಮವೇ ತಾಳಿಪಾಡಿ. ಈ ಗ್ರಾಮಕ್ಕೆ ಕಿನ್ನಿಗೋಳಿ ಪೇಟೆಯೇ ಪ್ರಧಾನವಾಗಿದೆ. ಆದರೆ ಕಿನ್ನಿಗೋಳಿ ಪೇಟೆ ಮಾತ್ರ ಅಭಿವೃದ್ಧಿಯಾಗಿದ್ದು, ತಾಳಿಪಾಡಿ ಮಾತ್ರ ಗ್ರಾಮಾಂತರವಾಗಿಯೇ ಉಳಿದಿದೆ.
Related Articles
Advertisement
ಗ್ರಾಮೀಣ ಪ್ರದೇಶದ ಕೆಲ ರಸ್ತೆಗಳ, ಸಂಪರ್ಕ ಕೊಂಡಿ ರಸ್ತೆಗಳು ಇನ್ನು ಅಭಿವೃದ್ಧಿ ಹೊಂದಿಲ್ಲ. ಪುನರೂರು ಒಳಭಾಗದ ಪುನರೂರು ಮಿಲ್ ರಸ್ತೆ, ತಾಳಿಪಾಡಿಯಿಂದ ಪುನರೂರು-ಕಾಚೂರು ಸಂರ್ಪಕಿಸುವ ರಸ್ತೆ ದುರಸ್ತಿ ಆಗಬೇಕಿದೆ. ಪದ್ಮನೂರು ಬಾಬಾಕೋಡಿ ರಸ್ತೆ ಅಭಿವೃದ್ಧಿ ಆಗಬೇಕಿದೆ. ಹೆಚ್ಚಿನ ರಸ್ತೆ ಬದಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು ಹರಿಯತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಅಗತ್ಯ. ಕಿನ್ನಿಗೋಳಿ ಲಿಟ್ಲ
ಫÉವರ್ ಶಾಲೆಯ ಬದಿಯಲ್ಲಿ ತುಡಾಮ ರಸ್ತೆ ಸಂಪರ್ಕ ರಸ್ತೆಯಾಗಿದ್ದು ಸಾಕಷ್ಟು ವಾಹನಗಳು ಮೂರು ಕಾವೇರಿ ಸುತ್ತು ಬಳಸಿ ಹೋಗುವ ಬದಲು ಇದೇ ರಸ್ತೆಯನ್ನು ಆಶ್ರಯಿಸಿವೆ. ಈ ರಸ್ತೆಯ ಅಗಲ ಕಿರಿದಾಗಿದ್ದು ರಸ್ತೆಯನ್ನು ವಿಸ್ತರಿಸಿ ಕಾಂಕ್ರೀಟ್ ಕಾಮಗಾರಿ ಮಾಡಬೇಕಿದೆ.
ಇತರ ಸಮಸ್ಯೆಗಳೇನು? :
- ತಾಳಿಪಾಡಿ ಗ್ರಾಮಕ್ಕೆ ಸಮಗ್ರವಾಗಿ ಒಳಚರಂಡಿ ಯೋಜನೆ ಅನುಷ್ಠಾನವಾಗಬೇಕಿದೆ.
- ವ್ಯವಸ್ಥಿತ ಬಸ್ ನಿಲ್ದಾಣ ನಿರ್ಮಾಣ, ಮುಖ್ಯರಸ್ತೆ ಪಾರ್ಕಿಂಗ್, ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಬೇಕಿದೆ.
- ಈ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಆರಂಭಿಸುವುದು ತುರ್ತು ಅಗತ್ಯವಿದೆ.
- ಖಾಯಂ ರೈತ ಸಂಪರ್ಕ ಕೇಂದ್ರ ಆಗಬೇಕಿದೆ.
- ಪೊಲೀಸ್ ಹೊರಠಾಣೆ ಆರಂಭಿಸಬೇಕಿದೆ.
- ಕಿನ್ನಿಗೋಳಿ ಬಸ್ ನಿಲ್ದಾಣದ ಸಮೀಪ ವಾಚನಾಲಯ ನಿರ್ಮಾಣವಾಗಬೇಕಿದೆ.
- ಪುನರೂರು, ತಾಳಿಪಾಡಿಯ ಗುತ್ತು ಬಳಿ ಹರಿಯುವ ಚಿಕ್ಕ ನದಿಯಲ್ಲಿ ಹೂಳು ತುಂಬಿ ಮಳೆಗಾಲದಲ್ಲಿ ಭತ್ತದ ಗದ್ದೆಗಳಿಗೆ ನೆರೆ ಭೀತಿ ಎದುರಾಗಿದೆ. ತಡೆಗೋಡೆ ನಿರ್ಮಾಣ ಅಗತ್ಯ.
- ಸುವ್ಯವಸ್ಥಿತ ದಾರಿದೀಪದ ವ್ಯವಸ್ಥೆ ಆಗಬೇಕಿದೆ.
- ಕಿನ್ನಿಗೋಳಿ ಸಂತೆ ದಿನವಹಿ ಮಾರ್ಕೆಟ್‌ನೊಳಗೆ ಕೊಳಚೆ ಹಾಗೂ ಮಳೆಗಾಲದಲ್ಲಿ ನೀರು ನಿಂತು ರಾಡಿಯಾಗುತ್ತದೆ. ಕಾಂಕ್ರೀಟ್ ಅಥವಾ ಇಂಟರ್‌ಲಾಕ್ ಆಳವಡಿಸಬೇಕಿದೆ.
- ಗ್ರಾಮಕ್ಕೆ ಶ್ಮಶಾನ ನಿರ್ಮಾಣ ಆಗಬೇಕಾಗಿದೆ.
- ತಾಳಿಪಾಡಿ ಗ್ರಾಮದಲ್ಲಿ ಮನೆ ನಿವೇಶನ ಹಂಚಿಕೆಯಾಗಬೇಕಿದೆ.