Advertisement
ಪಟ್ಟಣದ ಎಸ್.ಕೆ. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪುರುಷರ ವಲಯ ಹಾಗೂ ಅಂತರ್‌ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ಮುಕ್ತಾಯ ಸಮಾರಂಭದಲ್ಲಿ ಅವರು ಮಾತನಾಡಿದರು.
ಪಂದ್ಯಾವಳಿಯನ್ನು ತಾಳಿಕೋಟೆಯ ಎಸ್.ಕೆ. ಮಹಾವಿದ್ಯಾಲಯಕ್ಕೆ ಸಂಘಟಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕೆ.ಎಸ್. ಮುರಾಳ ಮಾತನಾಡಿ, ಒಬ್ಬ ಕ್ರೀಡಾಪಟುವಾಗಿ ತಮ್ಮ ಕ್ರೀಡಾ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತ ಸೋಲು ಗೆಲುವು ಮುಖ್ಯವಲ್ಲ, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವಂತೆ ಹೇಳಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳನ್ನು ಹಾಗೂ ದಾನಿಗಳಾದ ಎಸ್. ಎಸ್. ನಾಡಗೌಡ, ಎಂ.ವೈ. ಮಹೇಂದ್ರಕರ, ಸಚಿನ ಹಂಚಾಟೆ ಹಾಗೂ ಎಂ.ಎಸ್. ಪಾಟೀಲ ಅವರನ್ನು ಸನ್ಮಾನಿಸಲಾಯಿತು.
Related Articles
Advertisement
ಕಾರ್ಯಕ್ರಮವನ್ನು ಕಾಶೀನಾಥ ದೇಸಾಯಿ ನಿರೂಪಿಸಿದರು. ರಮೇಶ ಜಾಧವ ಸ್ವಾಗತಿಸಿದರು.ಎಸ್.ಜಿ. ಕೊಡೆಕಲ್ಲಮಠ ವಂದಿಸಿದರು. ವಿಜೇತರು: ಪಂದ್ಯಾವಳಿಯಲ್ಲಿ 14 ವಲಯ ಮಟ್ಟದ ತಂಡಗಳು ಹಾಗೂ 8 ಅಂತರ್ ವಲಯ ಮಟ್ಟದ ತಂಡಗಳು ಭಾಗವಹಿಸಿದ್ದವು. ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಬಿಎಲ್‌ಡಿಇ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಬಸವನಬಾಗೇವಾಡಿ ಪಡೆದುಕೊಂಡರು. ದ್ವಿತೀಯ ಸ್ಥಾನವನ್ನು ಎಸ್. ಕೆ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ
ತಾಳಿಕೋಟೆ ಹಾಗೂ ತೃತೀಯ ಸ್ಥಾನವನ್ನು ಸಿ.ಎಂ. ಮನಗೂಳಿ ಮಹಾವಿದ್ಯಾಲಯ, ಸಿಂದಗಿ ಅವರು ಪಡೆದುಕೊಂಡರು. ಅಂತರ್ ವಲಯ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಕೆಎಲ್‌ಇ ಸಂಸ್ಥೆಯ ಎಸ್‌ಸಿಪಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮಹಾಲಿಂಗಪುರ, ದ್ವಿತೀಯ ಸ್ಥಾನ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಬಸವನಬಾಗೇವಾಡಿ, ತೃತೀಯ ಸ್ಥಾನವನ್ನು ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಮೂಡಲಗಿ ಇವರು ಪಡೆದುಕೊಂಡರು.