Advertisement
ಪುರಸಭೆಯಿಂದ ಪ್ರತಿ ವರ್ಷ ಕರ ಬಾಕಿ ತುಂಬಲು ಏಷ್ಟೇ ಪ್ರಯತ್ನಿಸಿದರೂ ತಾತ್ಸಾರ ತೋರುತ್ತಿದ್ದ ಕೆಲವರು ಚುನಾವಣೆ ಉಮೇದುವಾರಿಕೆ ಸಲ್ಲಿಸಲು ಮುಂದಾಗಿದ್ದಾರೆ. ತಮ್ಮ ಆಸ್ತಿ ಮತ್ತು ನೀರಿನ ಕರ ಅಲ್ಲದೇ ಇನ್ನಿತರವಾಗಿ ಪುರಸಭೆಗೆ ಕಟ್ಟಬೇಕಾದ ಕರ ಬಾಟಕಿಯ ಜೊತೆಗೆ ನಾಲ್ವರು ಸೂಚಕರ ಕರ ಬಾಕಿಯನ್ನು ಪಾವತಿಸುವ ಹೊಣೆ ಹೊತ್ತುಕೊಳ್ಳುವುದು ಅನಿವಾರ್ಯವಾಗಿದೆ. ಇದರಿಂದ ಸೂಚಕರಾಗುವ ಪ್ರತಿಯೊಬ್ಬರಿಗೂ ಲಕ್ಕಿ ಆಫರ್ ಸಿಕ್ಕಂತಾಗಿದೆ.
Related Articles
Advertisement
ಆದರೆ ಈ ಬಾರಿಯ ಪುರಸಭೆ ಚುನಾವಣೆ ಪ್ರತಿ ವಾರ್ಡ್‌ನಲ್ಲಿ ಸುಮಾರು 10ಕ್ಕೂ ಹೆಚ್ಚು ಜನರು ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಸ್ಪರ್ಧಾ ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ಸುಮಾರು ವರ್ಷಗಳಿಂದ ಬಾಕಿ ಉಳಿದುಕೊಂಡಿದ್ದ ತಮ್ಮ ಆಸ್ತಿ ಕರದ ಜೊತೆಗೆ ಸೂಚಕರ ಕರ ಪಾವತಿಯನ್ನು ತಾವೇ ಮಾಡುತ್ತಿರುವದು ಮೇಲ್ನೋಟಕ್ಕೆ ಕಾಣತೊಡಗಿದೆ. ಇದರಿಂದ ಚುನಾವಣೆ ಅಧಿಸೂಚನೆ ಘೋಷಣೆಯಾದ ಎರಡೇ ದಿನದಲ್ಲಿ 12 ಲಕ್ಷಕ್ಕೂ ಅಧಿಕ ಕರ ಭಾಕಿ ಪುರಸಭೆ ಬೋಕ್ಕಸ ಸೇರಿದೆ.
15ಕ್ಕೆ ಬಿ ಫಾರ್ಮ್ ಘೋಷಣೆ ಸಾಧ್ಯತೆ: ಪಕ್ಷದ ಚಿಹ್ನೆಯಡಿ ಸ್ಪರ್ಧೆ ಬಯಿಸಿ ಈಗಾಗಲೇ ಕೆಲ ವಾರ್ಡ್‌ಗಳಿಂದ ಟಿಕೆಟ್ ಆಕಾಂಕ್ಷಿಗಳು ಆಯಾ ಪಕ್ಷದ ಅಧ್ಯಕ್ಷರ ಬಳಿ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧೆ ಬಯಿಸಿ 15 ವಾರ್ಡ್‌ಗಳಿಂದ 32 ಜನರು ಅರ್ಜಿ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಸ್ಪರ್ದೆ ಬಯಸಿ 8 ವಾರ್ಡ್‌ಗಳಿಂದ 14 ಜನರು ಟಿಕೆಟ್ ಬಯಿಸಿ ಅರ್ಜಿ ಸಲ್ಲಿಸಿದ್ದಾರೆ. ಇನ್ನೂ ಕೆಲವು ವಾರ್ಡ್‌ಗಳಲ್ಲಿ ಉಮೇದುವಾರಿಕೆ ಸಲ್ಲಿಸುವ ಎದುರಾಳಿ ಅಭ್ಯರ್ಥಿಗಳ ಸಂಖ್ಯೆಗನುಗುಣವಾಗಿ ತಮ್ಮ ಲಾಭ ನಷ್ಟ ಅನುಸರಿಸಿ ಪಕ್ಷವೋ ಅಥವಾ ಪಕ್ಷೇತರವೋ ಎಂಬ ನಿರ್ಧಾರಕ್ಕೆ ಕಾದು ನೋಡುತ್ತಿದ್ದಾರೆ. ಪಕ್ಷದ ಬಿ ಫಾರ್ಮ್ ಬಯಸಿ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದವರಲ್ಲಿ ಯಾರಿಗೆ ಟಿಕೆಟ್ ನೀಡಬೇಕೆಂಬುದು ಮೇ 15ರಂದು ಅಂತಿಮಗೊಳಿಸಲಾಗುವದು ಎಂದು ಎರಡೂ ಪಕ್ಷದ ಮುಖಂಡರು ಪತ್ರಿಕೆಗೆ ತಿಳಿಸಿದ್ದಾರೆ.
ಬೇ ಬಾಕಿ ಪ್ರಮಾಣ ಪತ್ರ ಬಯಸಿ ಎರಡು ದಿನದಲ್ಲಿ 95 ಜನರು ಅರ್ಜಿ ಸಲ್ಲಿಸಿದ್ದು 84 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಈಗಾಗಲೇ 12 ಲಕ್ಷಕ್ಕೂ ಅಧಿಕ ಕರ ಬಾಕಿ ಜಮೆಯಾಗಿದ್ದು ಚುನಾವಣೆ ವೇಳೆಗೆ ಸುಮಾರು 30 ಲಕ್ಷ ರೂ. ಜಮೆಯಾಗುವ ನಿರೀಕ್ಷೆ ಇದೆ.•ಸುರೇಶ ನಾಯಕ, ಪುರಸಭೆ ಮುಖ್ಯಾಧಿಕಾರಿ ಜಿ.ಟಿ. ಘೋರ್ಪಡೆ