Advertisement

ಸಾಲಗಾರ ಸಾಲಗಾರನಾಗಿಯೇ ಉಳಿಯುವುದು ಬೇಡ: ಪಾಟೀಲ

05:19 PM Aug 28, 2019 | Team Udayavani |

ತಾಳಿಕೋಟೆ: ಬ್ಯಾಂಕುಗಳಿಂದಾಗಲಿ ಇತರ ಸೋಸೈಟಿಗಳಿಂದಾಗಲಿ ಸಾಲ ಪಡೆದ ಸಾಲಗಾರ ಆ ಹಣವನ್ನು ಅಗತ್ಯ ಕಾರ್ಯಕ್ಕೆ ಬಳಿಸಿಕೊಂಡು ಸದುಪಯೋಗ ಮಾಡಿಕೊಳ್ಳಬೇಕೆಂದು ಬಿಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಬಿ.ಎಸ್‌. ಪಾಟೀಲ (ಯಾಳಗಿ) ಹೇಳಿದರು.

Advertisement

ದಿ ತಾಳಿಕೋಟೆ ಸಹಕಾರಿ ಬ್ಯಾಂಕ್‌ ನಿ. ವತಿಯಿಂದ ಸಂಗಮೇಶ್ವರ ಸಭಾಭವನದಲ್ಲಿ ಏರ್ಪಡಿಸಿದ್ದ ಬ್ಯಾಂಕಿನ 60ನೇ ವರ್ಷದ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.

ತೆಗೆದುಕೊಂಡ ಸಾಲವನ್ನು ಸಾಲಗಾರ ಸದ್ಬಳಕೆ ಮಾಡಿಕೊಂಡು ಅದರಿಂದ ಬಂದ ಉತ್ಪನ್ನವನ್ನು ಅದೇ ಬ್ಯಾಂಕಿನಲ್ಲಿ ಕೂಡಿಡಬೇಕು. ಇದರಿಂದ ಸಾಲ ಪಡೆಯುವದನ್ನು ಬಿಟ್ಟು ಕೂಡಿಟ್ಟ ಹಣ ಸದುಪಯೋಗ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಕಾರಣ ಸಾಲಗಾರ ಸಾಲಗಾರನಾಗಿ ಉಳಿಯದೇ ಇರಲಿ ಎಂಬುದು ನನ್ನ ಆಸೆಯಾಗಿದೆ ಎಂದರು.

ಈ ಸಹಕಾರಿ ಬ್ಯಾಂಕ್‌ ಕಳೆದ 59 ವರ್ಷಗಳ ಹಿಂದೆ ಪ್ರಾರಂಭದ ಹಂತದಲ್ಲಿ 20 ಸಾವಿರ ರೂ. ಬಂಡವಾಳದೊಂದಿಗೆ ಪ್ರಾರಂಭಿಸಲಾಯಿತು. ಈಗ ಷೇರು ಹಣದಲ್ಲಿ 40.63 ಲಕ್ಷ ರೂ. ಠೇವುಗಳಲ್ಲಿ 1328.83 ಲಕ್ಷ ರೂ. ನಿಧಿಗಳಲ್ಲಿ 92.76 ಲಕ್ಷ ರೂ. ಈ ರೀತಿ ಪ್ರಗತಿಯತ್ತ ಸಾಗಬೇಕಾದರೆ ಈ ಹಿಂದೆ ಹಿರಿಯರು ಮಾಡಿದ ತ್ಯಾಗ ಕಾರಣ. ಈಗಾಗಲೇ ಸಾಲ ಪಡೆಯುತ್ತಿರುವ ಸಾಲಗಾರರು ಸುತ್ತ ಮುತ್ತಲಿನ ಗ್ರಾಮಗಳ ಗ್ರಾಹಕರಾಗಿದ್ದು ಅವರು ತೆಗೆದುಕೊಂಡ ಸಾಲ ಮರು ಪಾವತಿ ಮಾಡುತ್ತ ಸಾಗಿದ್ದರಿಂದಲೇ ಬ್ಯಾಂಕು ಏಳ್ಗೆಯತ್ತ ಸಾಗಲು ಕಾರಣವಾಗಿದೆ ಎಂದರು.

ಎಸ್‌.ಕೆ. ಮಹಾ ವಿದ್ಯಾಲಯ ಇಂಗ್ಲಿಷ್‌ ಪ್ರಾಧ್ಯಾಪಕ ಡಾ| ಅನಿಲಕುಮಾರ ಆಲ್ಯಾಳಮಠ ಮಾತನಾಡಿ, ಸಹಕಾರ ತತ್ವದ ಆಧಾರದ ಮೇಲೆ ತಾಳಿಕೋಟೆ ಸಹಕಾರಿ ಬ್ಯಾಂಕ್‌ ಕಾರ್ಯ ನಿರ್ವಹಿಸುತ್ತಿ ದೆ. ಸಮಾಜದಲ್ಲಿಯ ಜನತೆಗೆ ಸಾಲ ಒದಗಿಸಿ ಆರ್ಥಿಕ ಸಬಲರನ್ನಾಗಿ ಮಾಡಿದೆ. ಯಾವುದೇ ಸಹಕಾರಿ ಯಶಸ್ವಿಯಾಗಬೇಕಾದರೆ ಅಲ್ಲಿಯ ಆಡಳಿತ ಮಂಡಳಿ ಸಿಬ್ಬಂದಿಗಳ ನಿಸ್ವಾರ್ಥ ಸೇವೆ ಕಾರಣವಾಗಿರುತ್ತದೆ ಎಂದರು.

Advertisement

ವಿಜಯಪುರ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸಾಲ ವಸೂಲಾತಿ ಮಾಡಿದ್ದರಿಂದ ಈ ಬ್ಯಾಂಕಿಗೆ ಪ್ರಶಸ್ತಿ ದೊರೆತಿದೆ. ಠೇವಣಿದಾರ ಹಾಗೂ ಸಾಲಗಾರ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಾಲಗಾರನ ಮನವೊಲಿಸಿ ಸಾಲ ವಸೂಲಾತಿ ಮಾಡಬೇಕೆಂದು ಹೇಳಿದರು.

ಸಹಕಾರಿ ಬ್ಯಾಂಕ್‌ ಅಧ್ಯಕ್ಷ ವಿಠ್ಠಲ  ಸಿಂಗ್‌ ಹಜೇರಿ ಅಧ್ಯಕ್ಷತೆ ವಹಿಸಿದ್ದರು. ವೀ.ವಿ. ಸಂಘದ ಮಾಜಿ ಅಧ್ಯಕ್ಷ ಎಸ್‌.ಪಿ. ಸರಶೆಟ್ಟಿ ಬ್ಯಾಂಕ್‌ ಸಾಗಿ ಬಂದಿದ್ದರ ಕುರಿತು ವಿವರಿಸಿದರು.

ಇದೇ ಸಮಯದಲ್ಲಿ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಹುದ್ದೆಯಿಂದ ಬಡ್ತಿ ಹೊಂದಿ ವಿಜಯಪುರ ಉಪ ನಿಬಂಧಕರಾಗಿ ಸೇವೆಗೆ ಮುಂದಾದ ಪಿ.ಬಿ. ಕಾಳಗಿ ಅವರಿಗೆ ಬ್ಯಾಂಕ್‌ ವತಿಯಿಂದ ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಬ್ಯಾಂಕ್‌ ಪ್ರಭಾರ ವ್ಯವಸ್ಥಾಪಕಿ ಬಿ.ಕೆ. ಮಣೂರ ವರದಿ ವಾಚಿಸಿದರು. ಸಂಗಮೇಶ್ವರ ವಿದ್ಯಾ ಸಂಸ್ಥೆ ಅಧ್ಯಕ್ಷ ಎಚ್.ಎಸ್‌. ಪಾಟೀಲ, ಗಾಳಿಮಠ, ಬ್ಯಾಂಕ್‌ ಉಪಾಧ್ಯಕ್ಷ ಕಾಶೀನಾಥ ಸಜ್ಜನ, ನಿರ್ದೇಶಕರಾದ ಐ.ಬಿ. ಬಿಳೇಭಾವಿ, ಎಚ್.ಬಿ. ಬಾಗೇವಾಡಿ, ಎಂ.ಎಸ್‌. ಸರಶೆಟ್ಟಿ, ಡಿ.ಎಸ್‌. ಹೆಬಸೂರ, ಸಿ.ಎಸ್‌. ಯಾಳಗಿ, ಡಿ.ಎಸ್‌. ಪಂಜಗಲ್ಲ, ಜಿ.ಬಿ. ಕೊಡಗಾನೂರ, ಎ.ಎಸ್‌. ಬಬಲೇಶ್ವರ, ಆರ್‌.ಬಿ. ಕಟ್ಟಿಮನಿ, ವೃತ್ತಿಪರ ನಿರ್ದೇಶಕರಾದ ಎನ್‌.ಬಿ. ಪೂಜಾರಿ, ಆರ್‌.ಎ. ಮುರಗಿ ಹಾಗೂ ಮಿಣಜಗಿ ಶಾಖೆ ಅಧ್ಯಕ್ಷ ಜಿ.ಕೆ. ಬಿರಾದಾರ, ಸದಸ್ಯರಾದ ಎಸ್‌.ಎಸ್‌. ಯರನಾಳ, ಡಿ.ಕೆ. ಪಾಟೀಲ, ಎ.ಜಿ. ಪಾಟೀಲ ಇದ್ದರು.

ಹಿರಿಯ ಸಹಾಯಕಿ ಎಸ್‌.ಬಿ. ದೇಸಾಯಿ ಪ್ರಾರ್ಥಿಸಿದರು. ಪ್ರಭಾರ ಪ್ರಧಾನ ವ್ಯವಸ್ಥಾಪಕ ಸಿ.ಬಿ. ತಂಗಡಗಿ ಸ್ವಾಗತಿಸಿದರು. ಮಿಣಜಗಿ ಶಾಖಾ ವ್ಯವಸ್ಥಾಪಕ ಜಿ.ಕೆ. ಯಳಮೇಲಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next