Advertisement

19ರಂದು ಶಿವಾಜಿ ಜಯಂತಿ ಆಚರಣೆ: ಮೋಹಿತೆ

12:10 PM Feb 15, 2020 | Naveen |

ತಾಳಿಕೋಟೆ: ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತ್ಯುತ್ಸವವನ್ನು ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಅಭಿವೃದ್ಧಿ ಸಂಘ ಹಾಗೂ ಮರಾಠಾ ಸಮಾಜ ಮತ್ತು ಪಟ್ಟಣದ ವಿವಿಧ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಫೆ. 19ರಂದು ಅದ್ಧೂರಿಯಾಗಿ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಛತ್ರಪತಿ ಶಿವಾಜಿ ಮಹಾರಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ವಿಠ್ಠಲ ಮೋಹಿತೆ ಹೇಳಿದರು.

Advertisement

ಶುಕ್ರವಾರ ಪಟ್ಟಣದ ಶಿವಭವಾನಿ ಮಂದಿರದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಛತ್ರಪತಿ ಶಿವಾಜಿ ಮಹಾರಾಜರು ಈ ದೇಶಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅವರನ್ನು ಇಡಿ ದೇಶವೇ ಗೌರವಿಸುತ್ತ ಪೂಜಿಸುತ್ತಿದೆ. ಅವರ ರಾಜ್ಯಬಾರದ ಆಳ್ವಿಕೆಯ ಇತಿಹಾಸ ಇಂದಿನ ಯುವಜನತೆಗೆ ಪ್ರೇರಣೆಯಾದಂತಹದ್ದಾಗಿದೆ ಎಂದರು.

ಅವರ ಜಯಂತ್ಯುತ್ಸವವನ್ನು ಸರ್ಕಾರದ ಮಟ್ಟದಿಂದ ದೇಶಾದ್ಯಂತ ಫೆ. 19ರಂದು ಆಚರಿಸಲಾಗುತ್ತಿದೆ. ಅದರ ಅನ್ವಯ ತಾಳಿಕೋಟೆ ತಾಲೂಕಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಅಭೂತಪೂರ್ವವಾಗಿ ಅದ್ಧೂರಿಯಾಗಿ ಆಚರಿಸಲು ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಜಯಂತ್ಯುತ್ಸವ ಅದ್ಧೂರಿಯಾಗಿ ಆಚರಿಸಲು ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಶಾಸಕರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳು ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿಗಳು, ಹಿತೈಷಿಗಳು ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭವ್ಯ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆಂದರು.

ವಕ್ತಾರರಾಗಿ ಸ್ವಾಮಿ ವಿವೇಕಾನಂದ ಸೇನೆ ಜಿಲ್ಲಾ ಅಧ್ಯಕ್ಷರಾದ ರಾಘವ್‌ ಅಣ್ಣಿಗೇರಿ ಆಗಮಿಸಲಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಅಂದು ಮಧ್ಯಾಹ್ನ 2 ಗಂಟೆಗೆ ಮಹಾ ರಾಣಾಪ್ರತಾಪ ಸರ್ಕಲ್‌ನಿಂದ ಪ್ರಾರಂಭಗೊಳ್ಳಲಿರುವ ಶಿವಾಜಿ ಮಹಾರಾಜರ ಭಾವಚಿತ್ರದ ಬೃಹತ್‌ ಶೋಭಾಯಾತ್ರೆ ಶಿವಾಜಿ ವೃತ್ತ, ವಿಠ್ಠಲ ಮಂದಿರ ರಸ್ತೆ, ಬಾಲಾಜಿ ಮಂದಿರ ರಸ್ತೆ, ಕತ್ರಿ ಬಜಾರ ಮಾರ್ಗವಾಗಿ ರಾಜವಾಡೆಯಲ್ಲಿಯ ಶಿವಾಭವಾನಿ ಮಂದಿರಕ್ಕೆ ತಲುಪಲಿದೆ ಎಂದರು.

Advertisement

ತಾಲೂಕಿನ ಸಮಸ್ತ ಹಿಂದೂ ಸಮಾಜ ಬಾಂಧವರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ, ಭವ್ಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಮರಾಠಾ ಸಮಾಜದ ಉಪಾಧ್ಯಕ್ಷ, ಪುರಸಭೆ ಸದಸ್ಯ ಅಣ್ಣಾಜಿ ಜಗತಾಪ, ಛತ್ರಪತಿ ಶಿವಾಜಿ ಮಹಾರಾಜ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ರಾಘವೇಂದ್ರ ಮಾನೆ, ಸದಸ್ಯರುಗಳಾದ ಅಂಬಾಜಿ ಜಾಧವ, ರಾಮು ಜಗತಾಪ, ಅಂಬಾಜಿ ಘೋರ್ಪಡೆ, ವಿಠ್ಠಲ ಜಗತಾಪ, ಪ್ರವೀಣ ಘೋರ್ಪಡೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next