Advertisement

ಮಾಸ್ಕ್ ಹಾಕದವರಿಂದ ದಂಡ ವಸೂಲಿ

06:34 PM May 14, 2020 | Naveen |

ತಾಳಿಕೋಟೆ: ಪಟ್ಟಣದಲ್ಲಿ ಮಾಸ್ಕ್ ಹಾಕಿಕೊಳ್ಳದೇ ಬೀದಿಯಲ್ಲಿ ಸುತ್ತುತ್ತಿದ್ದವರಿಗೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪಾಗಿ ನಿಂತವರಿಂದ ಪುರಸಭೆ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ ನೇತೃತ್ವದ ಅಧಿಕಾರಿಗಳು ದಂಡ ವಸೂಲಿಗೆ ಮುಂದಾಗಿದ್ದು ನಾಲ್ಕು ದಿನದಲ್ಲಿ 200ಕ್ಕೂ ಅಧಿಕ ಜನರಿಗೆ ದಂಡ ವಿಧಿಸಿದ್ದಾರೆ.

Advertisement

ಮೊದಲ ದಿನವೇ 64 ಜನರಿಗೆ ದಂಡ ವಿಧಿಸಿ 6400 ರೂ. ವಸೂಲಿ ಮಾಡಿದ್ದಾರೆ. ನಂತರ 3 ದಿನದಲ್ಲಿ 132 ಜನರಿಗೆ ದಂಡ ವಿಧಿಸಿದ್ದಾರೆ. ಜತೆಗೆ ಕೆಲವೆಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪಾಗಿ ನಿಲ್ಲುವುದನ್ನು ಗಮನಿಸಿದ್ದ ಅಧಿಕಾರಿಗಳ ತಂಡ ಪ್ರತಿಯೊಬ್ಬರಿಗೆ 500 ರೂ.ನಂತೆ ದಂಡ ವಿಧಿಸಿದ್ದಾರೆ. ನಾಲ್ಕು ದಿನಗಳ ಕಾಲ ಬೆಳಗ್ಗೆಯಿಂದಲೇ ಮಾಸ್ಕ್ ಇಲ್ಲದೇ ರಸ್ತೆಗೆ ಬಂದವರನ್ನು ಗುರುತಿಸಿ ಪ್ರತಿಯೊಬ್ಬರಿಗೆ 100 ರೂ.ನಂತೆ ದಂಡ ವಿಧಿಸಿದ್ದಾರೆ.

ನಂತರ ಅಧಿಕಾರಿಗಳ ತಂಡ ಕಪ್ಪಡ ಮತ್ತು ಕಿರಾಣಿ ಇತರ ಅಂಗಡಿಗಳಿಗೆ ಹಾಗೂ ದಂಡ ತೆತ್ತವರಿಗೂ ಖಡಕ್‌ ವಾರ್ನಿಂಗ್‌ ಮಾಡುವುದರೊಂದಿಗೆ ರಸ್ತೆಗೆ ಬಂದರೆ ಕ್ರಿಮಿನಲ್‌ ಕೇಸ್‌ ದಾಖಲು ಮಾಡುವುದಾಗಿ ಎಚ್ಚರಿಸಿದೆ. ಪುರಸಭೆ ಮುಖ್ಯಾಧಿಕಾರಿ ಸಿ.ವಿ. ಕುಲಕರ್ಣಿ, ವ್ಯವಸ್ಥಾಪಕ ಎಚ್‌.ಎ. ಢಾಲಾಯತ್‌, ಆರ್‌.ವೈ. ನಾರಾಯಣಿ, ಬಿ.ಜಿ. ನಾರಾಯಣಕರ, ಶ್ರೀಪಾದ ಜೋಶಿ, ಎಸ್‌.ಎ.ಘತ್ತರಗಿ, ಶಿವು ಜುಮನಾಳ, ಬಸವರಾಜ ಖಾಜಿಬಿಳಗಿ, ಸಿದ್ದಲಿಂಗಯ್ಯ ಚೊಂಡಿಪಾಟೀಲ, ಅನೀಫ್‌ ಮಕಾಂದಾರ, ನಜೀರ ಮುಲಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next