Advertisement

ಸರ್ಕಾರ-ಜನರ ಮಧ್ಯದ ಸೇತುವೆಯೇ ಸಂಘಟನೆ

06:24 PM Nov 29, 2019 | Naveen |

ತಾಳಿಕೋಟೆ: ಜಯ ಕರ್ನಾಟಕ ಸಂಘಟನೆಯು ಜನ್ಮ ತಾಳಿದ 12 ವರ್ಷಗಳಲ್ಲಿ ಕನ್ನಡಿಗರಿಗಾಗಿ ಹಾಗೂ ರೈತರ ಜೀವನಾಡಿಯಂತೆ ಸರ್ಕಾರ ಮತ್ತು ಜನರ ಮಧ್ಯ ಸೇತುವೆಯಂತೆ ಕೆಲಸ ಮಾಡುತ್ತಾ ಸಾಗಿದೆ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಆರ್‌.ಚಂದ್ರಪ್ಪ ನುಡಿದರು.

Advertisement

ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕದ ನೇತೃತ್ವದಲ್ಲಿ ಪಟ್ಟಣದ ಸಂಗಮೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ಕನ್ನಡ ರಾಜ್ಯೋತ್ಸವ ಹಾಗೂ ತಾಳಿಕೋಟೆ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದಿನೇ ದಿನೇ ಪರಿಭಾಷಿಕರ ಸಂಖ್ಯೆ ಏರುತ್ತಾ ಸಾಗಿದೆ. ಇಲ್ಲಿಯ ಕನ್ನಡ ಭಾಷೆ ಮತ್ತು ಸಂಸ್ಕೃತಿ ಕಲಿತುಕೊಂಡು ಹೋಗುವ ಜವಾಬ್ದಾರಿ ಅವರ ಮೇಲಿದೆ. ಕನ್ನಡ ಭಾಷೆಗೆ ದಕ್ಕೆ ಉಂಟಾಗುವ ಯಾವುದೇ ಸಮಯದಲ್ಲಿಯೂ ಜಯ ಕರ್ನಾಟಕ ಸಂಘಟನೆ ಸುಮ್ಮನೆ ಕೂಡುವದಿಲ್ಲ. ಕನ್ನಡಿಗರಿಗೋಸ್ಕರ ರಾಜ್ಯದ ಜನರಿಗೋಸ್ಕರ ಮುತ್ತಪ್ಪ ರೈ ಅವರು ಸಂಘಟನೆಯನ್ನು ಕಟ್ಟಿದ್ದಾರೆ ಎಂದರು.

ಜಯ ಕರ್ನಾಟಕ ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಅಣ್ಣಪ್ಪ ಓಲೇಕಾರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್‌.ರಾಮಚಂದ್ರಯ್ಯ ಅವರು ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಜಯ ಕರ್ನಾಟಕ ಸಂಘಟನೆ ಸಮಾಜಮುಖೀಯಾಗಿ ಕಾರ್ಯಕರ್ತರನ್ನು ತಯಾರಿಸಬೇಕು. ರೈತರಿಗೆ ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ಕೊಡಿಸಬೇಕೆಂದು ಉದ್ದೇಶದಿಂದ ಸಂಘಟನೆ ಹೊರತಂದು ಇಂದು 40 ಲಕ್ಷಕ್ಕೂ ಅಧಿಕ ಕಾರ್ಯಕರ್ತರನ್ನು ಸನ್ನದ್ಧಗೊಳಿಸಲಾಗಿದೆ ಎಂದರು.

ಅತಿಥಿ ಸಂಗಮಾರ್ಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್‌.ಎಸ್‌.ಪಾಟೀಲ ಅವರು ಕನ್ನಡ ಭಾಷೆಯ ಬಗ್ಗೆ ರಾಜ್ಯದ ಜನರ ಹಿತದಲ್ಲಿ ಸಂಘಟನೆಯ ಪಾತ್ರ ಕುರಿತು ವಿವರಿಸಿದರು. ಸಾನ್ನಿಧ್ಯ ವಹಿಸಿದ್ದ ಶರಣಸೋಮನಾಳದ ಮಹಾದೇವಯ್ಯ ಶಾಸ್ತ್ರೀ ಮಾತನಾಡಿ, ಕನ್ನಡ ನಾಡ ನುಡಿ ರಕ್ಷಣೆಗೆ ಹುಟ್ಟಿಕೊಂಡಿರುವ ಜಯ ಕರ್ನಾಟಕ ಸಂಘಟನೆಯು ತನ್ನ ಉದ್ದೇಶಗಳನ್ನು ಅತ್ಯಂತ ಸಫಲವಾಗಿ ಮಾಡುತ್ತಿರುವುದು ಸಂತಸ ತಂದಿದೆ ಎಂದರು. ಸಂಘಟನೆ ಜಿಲ್ಲಾಧ್ಯಕ್ಷ ಬಸಲಿಂಗಪ್ಪಗೌಡ ಇಂಗಳಗಿ, ಜಿಪಂ ಸದಸ್ಯ ಶಿವಾನಂದ ಎಸ್‌. ದೇಸಾಯಿ, ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಡಿ.ವಿ.ಪಾಟೀಲ, ರಾಜುಗೌಡ ನಾಡಗೌಡ, ಸಂಗನಗೌಡ ಧನ್ನೂರ, ಶಿವಣ್ಣ ಬ್ಯಾಕೋಡ, ನಿವೃತ್ತ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಬಿ.ಕಟ್ಟಿಮನಿ, ರವಿ ಹಯ್ನಾಳ, ರಮೇಶ ರಾಠೊಡ, ಪ್ರಕಾಶ ಪಾಟೀಲ, ವೀರೇಶ ಕಲ್ಲೂರ, ಬಸವರಾಜ ಸಿಂಗನಳ್ಳಿ, ವಿಜುಗೌಡ ಬಿರಾದಾರ, ಸಂಗಮೇಶ ಚೌದ್ರಿ, ಜಿಲ್ಲಾ ಘಟಕದ ಪದಾಧಿಕಾರಿಗಳು
ತಾಲೂಕಾಧ್ಯಕ್ಷರು, ಮಹಿಳಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮುಂಚೆ ಕನ್ನಡಾಂಭೆಯ ಭಾವಚಿತ್ರದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳ ಜರುಗಿತು. ಹುಸೇನ ಮುಲ್ಲಾ ನಿರೂಪಿಸಿದರು. ರಮೇಶ ನಾಯಕ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next