ತಾಳಿಕೋಟೆ: ಪಟ್ಟಣದಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ 22 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು ಒಳಚರಂಡಿ ಚೇಂಬರ್ ನಿಂದ ಮಲಮೂತ್ರವೆಲ್ಲ ನಡು ರಸ್ತೆಯಲ್ಲಿ ಹರಿಯತೊಡಗಿದೆ.
Advertisement
ಪಟ್ಟಣದ ಬಸ್ ನಿಲ್ದಾಣದ ಮುಂದುಗಡೆಯ ಜನದಟ್ಟನೆ ಹಾಗೂ ವಾಹನ ಸಂಚಾರ ಹೆಚ್ಚಿಗೆ ಇರುವ ಜೋಡುಪಥ ಮುಖ್ಯರಸ್ತೆಯಲ್ಲಿಯೇ 2 ದಿನಗಳ ಹಿಂದೆ ಘಟನೆ ಜರುಗಿದೆ.
ಜನರು ಹಾಗೂ ಕನ್ನಡ ಶಾಲಾ ಮೈದಾನದ ಎದುರು ನಿರ್ಮಿಸಲಾದ ಶೌಚಾಲಯದ ಸಂಪರ್ಕವನ್ನು ಈ ಒಳಚರಂಡಿ ಚೆಂಬರ್‌ಗೆ ಅಳವಡಿಸಿಸಲಾಗಿದೆ. ಪರಿಣಾಮ ಮುಖ್ಯ ರಸ್ತೆಯಲ್ಲಿರುವ ಎಲ್ಲ ಚೇಂಬರ್ ಗಳಲ್ಲಿ ಮಲಮೂತ್ರ ತುಂಬಿಕೊಂಡಿದೆ. ಆದರೆ ಬಸ್ ನಿಲ್ದಾಣದ ಮುಂದಿನ ಮುಖ್ಯ ರಸ್ತೆಯಲ್ಲಿನ ಚೇಂಬರ್ ಒಂದರಿಂದ ಮಲ ಮೂತ್ರವೆಲ್ಲವೂ ಹೊರಗಡೆ ಸಿಡಿದು ಉಕ್ಕಿ ಬರುತ್ತ ನಡು ರಸ್ತೆಯಲ್ಲಿ ಹರಿಯತೊಡಗಿದೆ. ವಾಹನಗಳ ಸಂಚಾರ ವೇಳೆ ಕೆಲವರಿಗೆ ಮಲ ಮೂತ್ರ ಸಿಡಿದು ದುರ್ವಾಸನೆ ತಾಳದೇ ವಾಂತಿಯಾದ ಪ್ರಸಂಗಗಳು ಜರುಗುತ್ತಿವೆ.
Related Articles
Advertisement
ಬೆಂಗಳೂರಿನ ಫ್ರೀಡ್‌ಂ ಪಾರ್ಕ್‌ನಲ್ಲಿ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ ನಡೆಸಿ ರಾಜ್ಯದ ಗಮನವನ್ನು ಸೆಳೆದಿದ್ದರು. ಆ ವೇಳೆ ಒಳಚರಂಡಿ ಮಂಡಳಿ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಥರ್ಡ್ ಪಾರ್ಟಿಯಿಂದ ಕಾಮಗಾರಿ ತಪಾಸಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಲಿಖೀತ ಭರವಸೆ ನೀಡಿದ್ದರು.
ಆದರೆ ಥರ್ಡ್ ಪಾರ್ಟಿ ಕೆಲವೆಡೆ ಅವೈಜ್ಞಾನಿಕವಾಗಿ ಒಳ ಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಕೆಲವು ಜಾಗೆಗಳನ್ನು ಗುರುತಿಸಿಕೊಟ್ಟಿತ್ತು. ಆದರೆ ಥರ್ಡ್ ಪಾರ್ಟಿ ನೀಡಿದ ವರ ದಿಗೂ ಬೆಲೆ ನೀಡದ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಮೂಗಿಗೆ ತುಪ್ಪ ಸವರಿದಂತೆ ಸರಿಪಡಿಸುವ ಭರವಸೆ ನೀಡಿದರೂ ಯಾವುದೇ ಕಾರ್ಯಗಳು ಸಮರ್ಪಕವಾಗಿ ನಡೆಯಲಿಲ್ಲ.
ಕಾಮಗಾರಿ ಅಪೂರ್ಣ ಹಿನ್ನೆಲೆಯಲ್ಲಿ ಇನ್ನೂ ಒಳಚರಂಡಿ ಉಸ್ತುವಾರಿಯನ್ನು ಪುರಸಭೆ ವಹಿಸಿಕೊಂಡಿಲ್ಲ. ಸುಮಾರು ಒಂದೇ ವರ್ಷದಲ್ಲಿ ಇಂತಹ ಎರಡ್ಮೂರು ಪ್ರಕರಣ ನಡೆದಿದೆ. ಆಗ ಜನತೆಗೆ ಪ್ರತಿಭಟನೆ ಹಾದಿ ಹಿಡಿಯುವ ಹೊತ್ತಿಗೆ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಭೇಟಿ ನೀಡಿ ದುರಸ್ತಿ ಮಾಡಿದ್ದರು.
ಆದರೆ ಮತ್ತೆ ಮತ್ತೂಂದು ಚೇಂಬರ್‌ದಿಂದ ಮಲ ಮೂತ್ರ ಉಕ್ಕಿ ಹರಿಯುತ್ತಿರುವದು ಒಳಚರಂಡಿ ಕಾಮಗಾರಿ ಕಳಪೆ ಮಟ್ಟಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಈ ಅವೈಜ್ಞಾನಿಕ ಕಳಪೆಮಟ್ಟದ ಒಳಚರಂಡಿ ಕಾಮಗಾರಿಯಿಂದ ಇಡಿ ತಾಳಿಕೋಟೆ ಪಟ್ಟಣದ ಜನರಿಗೆ ಮತ್ತು ಮಹಿಳೆಯರಿಗೆ ಶಾಲಾ ಮಕ್ಕಳಿಗೆ ಮಲಮೂತ್ರದ ದುರ್ವಾಸನೆ ಅಸಯ್ಯ ಹುಟ್ಟುವಂತೆ ಮಾಡಿದೆ. ಈ ಒಳಚರಂಡಿ ಕಾಮಗಾರಿ ಕೈಗೊಂಡ ಅಧಿಕಾರಿಗಳ ವಿರೂದ್ಧ ಪಟ್ಟಣದ ಜನತೆ ರೋಶಿಹೋಗಿ ಪ್ರತಿಭಟನೆ ಹಾದಿ ಹಿಡಿಯುವ ಮುಂಚೆ ಮೇಲಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.