Advertisement
“ಜನರ ಹಕ್ಕುಗಳನ್ನು ಗೌರವಿಸುತ್ತೇವೆ’ ಎಂಬ ಸುಳ್ಳಿನ ಸರಮಾಲೆ ಪೋಣಿಸಿದ್ದ ತಾಲಿಬಾನಿಗರು ಸಾರ್ವಜನಿಕರ ಮೇಲೆ ಗುಂಡಿನ ಮಳೆಗರೆಯುವ ಮೂಲಕ ಅಟ್ಟಹಾಸ ಮೆರೆಯಲಾರಂಭಿಸಿದ್ದಾರೆ.
Related Articles
Advertisement
ಉಗ್ರರ ಕೈಯಲ್ಲಿ ಅಮೆರಿಕದ ಶಸ್ತ್ರಾಸ್ತ್ರಗಳು :
ಅಮೆರಿಕ ಸೇನೆಯ ಶಸ್ತ್ರಸಜ್ಜಿತ 2 ಸಾವಿರ ವಾಹನಗಳು, 40 ವಿಮಾನಗಳು ಹಾಗೂ ಭಾರೀ ಸಂಖ್ಯೆಯ ಶಸ್ತ್ರಾಸ್ತ್ರ ಗಳು ಉಗ್ರರ ವಶ ದಲ್ಲಿವೆ ಎಂದು ಅಮೆರಿಕದ ಅಧಿಕಾರಿಯೊ ಬ್ಬರು ತಿಳಿಸಿದ್ದಾರೆ. ಇದೇ ವೇಳೆ 460 ದಶಲಕ್ಷ ಡಾಲರ್ ಮೀಸಲು ನಿಧಿಯು ತಾಲಿಬಾನ್ ಆಡಳಿತದ ಕೈಗೆ ಸಿಗದಂತೆ ತಡೆಯೊಡ್ಡಲಾಗುವುದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಘೋಷಿಸಿದೆ.
ತಂತಿಬೇಲಿಯಾಚೆ ಮಕ್ಕಳನ್ನು ಎಸೆದ ಅಮ್ಮಂದಿರು! :
ತಾಲಿಬಾನ್‌ನ ಕಪಿಮುಷ್ಟಿಯಿಂದ ತಮ್ಮ ಮಕ್ಕಳನ್ನು ಉಳಿಸುವ ಸಲುವಾಗಿ ಅಫ್ಘಾನ್‌ನ ಅಮ್ಮಂದಿರು ಕಾಬೂಲ್ ವಿಮಾನ ನಿಲ್ದಾಣದ ತಂತಿಬೇಲಿಯಿಂದಾಚೆಗೆ ಮಕ್ಕಳನ್ನು ಎಸೆದಿರುವ ಮನಮಿಡಿಯುವ ವೀಡಿಯೋಗಳು ವೈರಲ್ ಆಗಿವೆ. ಅಮೆರಿಕದ ಪ್ರಜೆಗಳನ್ನು ಕರೆದೊಯ್ಯಲು ಬಂದಿದ್ದ ವಾಯುಪಡೆ ವಿಮಾನಗಳಲ್ಲಿ ಜನರನ್ನು ತುಂಬಿಸಿಕೊಳ್ಳುವಾಗ ವಿಮಾನ ನಿಲ್ದಾಣದ ಕಾಂಪೌಂಡ್ ಗೋಡೆಯನ್ನೇರಿದ ಕೆಲವು ಮಹಿಳೆಯರು ತಮ್ಮ ಕಂದಮ್ಮಗಳನ್ನು ಸೈನಿಕರತ್ತ ನೂಕುತ್ತಾ “ದಯವಿಟ್ಟು ಇವರನ್ನು ಕರೆದುಕೊಂಡು ಹೋಗಿ’ ಎಂದು ಗೋಗರೆದಿದ್ದಾರೆ. ಇಂಗ್ಲೆಂಡ್‌ನ ಸೈನಿಕರಿಗೂ ಇದೇ ಅನುಭವವಾಗಿದೆ.
ಎಸೆಯುವ ವೇಳೆ ಕೆಲವು ಮಕ್ಕಳು ರೇಜರ್ ತಂತಿ ಬೇಲಿಗೆ ಸಿಲುಕಿದ್ದು, ಯುಕೆ ಸೈನಿಕರೇ ಅವರನ್ನು ಬೇಲಿಯಿಂದ ಬಿಡಿಸಿಕೊಂಡು ಆಲಂಗಿಸಿಕೊಂಡಾಗ ಎಲ್ಲರ ಕಣ್ಣಾಲಿಗಳೂ ಒದ್ದೆಯಾಗಿದ್ದವು.
ತಾಲಿಬಾನ್‌ಗೆ ಪಾಕ್ ಉಗ್ರರ ತರಬೇತಿ! :
ತಲೆಮರೆಸಿಕೊಂಡಿದ್ದ ತಾಲಿಬಾನಿಗರಿಗೆ ಏಕಾಏಕಿ ಇಡೀ ದೇಶವನ್ನೇ ಕೈವಶ ಮಾಡಿಕೊಳ್ಳುವಷ್ಟು ಶಕ್ತಿ, ಸಾಮರ್ಥ್ಯ ಬಂದಿದ್ದು ಎಲ್ಲಿಂದ ಎಂಬ ಪ್ರಶ್ನೆಗೆ ಗುಪ್ತಚರ ವರದಿಯು ಉತ್ತರ ನೀಡಿದೆ. ಇದರ ಹಿಂದೆಯೂ ಕೆಲಸ ಮಾಡಿದ್ದು ಕುತಂತ್ರಿ ಪಾಕಿಸ್ಥಾನ ಎಂದು ಈ ವರದಿ ಹೇಳಿದೆ.
ಪಾಕ್ ಮೂಲದ ಜೈಶ್, ಲಷ್ಕರ್ ಉಗ್ರ ಸಂಘಟನೆಗಳು ತಮ್ಮ ಸದಸ್ಯರನ್ನು ಅಫ್ಘಾನ್‌ಗೆ ಕಳುಹಿಸಿ, ಯುವಕರಿಗೆ ತರಬೇತಿ ನೀಡಿದ್ದವು. ಉಗ್ರ ತರಬೇತಿ ಶಿಬಿರಗಳೂ ಪಾಕ್‌ನಿಂದ ಅಫ್ಘಾನ್‌ಗೆ ಸ್ಥಳಾಂತರಗೊಂಡಿದ್ದವು. ಉಗ್ರರಾದ ಹಫೀಜ್ ಸಯೀದ್ ಮತ್ತು ಝಕೀವುರ್ ರೆಹಮಾನ್ ಲಖೀÌ ಇದಕ್ಕಾಗಿ ದೇಣಿಗೆ ಸಂಗ್ರಹ ನಿರತರಾಗಿದ್ದರು ಎಂದೂ ವರದಿ ಉಲ್ಲೇಖೀಸಿ ಟೈಮ್ಸ್ ನೌ ವರದಿ ಮಾಡಿದೆ.
ಉಗ್ರರು ಯಾವತ್ತೂ ಉಗ್ರರೇ. ಅವರನ್ನು ವೈಭವೀಕರಿಸಲೇಬಾರದು. ಭಯೋತ್ಪಾದನೆ ಕೂಡ ಕೊರೊನಾ ಸೋಂಕು ಇದ್ದಂತೆ. ನಾವೆಲ್ಲರೂ ಸುರಕ್ಷಿತವಾಗುವವರೆಗೂ ಯಾರೊಬ್ಬರೂ ಸುರಕ್ಷಿತರಲ್ಲ. ಉಗ್ರ ನಿಗ್ರಹದ ವಿಚಾರದಲ್ಲಿ ಎಲ್ಲ ದೇಶಗಳೂ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲಿ.– ಎಸ್. ಜೈಶಂಕರ್, ವಿದೇಶಾಂಗ ಸಚಿವ (ಯುಎನ್‌ಎಸ್‌ಸಿ ಸಭೆಯಲ್ಲಿ)