Advertisement

ಮನಮಿಡಿಯುವ ಕಥೆಗಳು: ಆಫೀಸಿನಿಂದ 30 ಕಿ.ಮೀ. ನಡೆದೇ ಬಂದೆವು!

12:07 AM Aug 24, 2021 | Team Udayavani |

ಆಫೀಸಿನಲ್ಲಿದ್ದ 118 ಭಾರತೀಯರು ಅಲ್ಲಿಂದ 30 ಕಿ.ಮೀ. ದೂರದಲ್ಲಿದ್ದ ಡೆನ್ಮಾರ್ಕ್‌ ರಾಯಭಾರ ಕಚೇರಿಗೆ ನಡೆದುಕೊಂಡೇ ಬಂದಿದ್ದಾರೆ.

Advertisement

ಕಾಬೂಲ್‌ ವಿಮಾನ ನಿಲ್ದಾಣದವರೆಗೆ ನಡೆದು ಹೋಗುವಷ್ಟರಲ್ಲಿ ನಮ್ಮಲ್ಲಿ ಅನೇಕರು ಅಸ್ವಸ್ಥರಾಗಿದ್ದರು ಎನ್ನುತ್ತಾರೆ ಕಾಬೂಲ್‌ನಿಂದ ಭಾರತಕ್ಕೆ ಮರಳಿರುವ ಜೀತ್‌ಬಹದೂರ್‌ ಥಾಪಾ. ಅಫ್ಘಾನ್‌ನ ಕಂಪೆನಿ ಯೊಂದರಲ್ಲಿ ಸೂಪರ್‌ವೈಸರ್‌ ಆಗಿ ಕೆಲಸ ಮಾಡುತ್ತಿರುವ ಅವರು, ರವಿವಾರ ದೇಶಕ್ಕೆ ಮರಳಿದ್ದಾರೆ. ಏರ್‌ಪೋರ್ಟ್‌ಗೆ ಬರುವಾಗ ದಾರಿ ಮಧ್ಯೆ ಕಳ್ಳರು ನಮ್ಮ ಹಣವನ್ನೂ ಕದ್ದರು. ಹಾಗೂ ಹೀಗೂ ಆ.18ಕ್ಕೆ ಏರ್‌ಪೋರ್ಟ್‌ ತಲುಪಿದೆವು. ಅಲ್ಲಿ 3 ದಿನ ಕಾದೆವು. ಅಲ್ಲಿದ್ದ ತಾಲಿಬಾನಿಯೊಬ್ಬ ಬಂದೂಕು ಹಿಡಿದುಕೊಂಡು ನಮ್ಮನ್ನು ಬಯಲಲ್ಲಿ ನೆಲದ ಮೇಲೆ 5 ತಾಸು ಕೂರಿಸಿದ್ದ. ಎದ್ದರೆ ಸಾಯುತ್ತೇವೆನ್ನುವ ಭಯದಲ್ಲೇ ಕುಳಿತಿದ್ದೆವು ಎಂದು ಥಾಪಾ ಹೇಳಿದ್ದಾರೆ.

ಶವಗಳ ಮೇಲೂ ಅತ್ಯಾಚಾರ! :

“ತಾಲಿಬಾನಿಗಳು ಹೆಣಗಳನ್ನೂ ಬಿಡುವುದಿಲ್ಲ. ಅವುಗಳ ಮೇಲೂ ಅತ್ಯಾಚಾರ ಎಸಗುತ್ತಾರೆ…’ ಇಂಥದ್ದೊಂದು ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದ್ದು ಅಫ್ಘಾನ್‌ನಲ್ಲಿ ಪೊಲೀಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಭಾರತಕ್ಕೆ ಬಂದಿರುವ ಮುಸ್ಕಾನ್‌. “ತಾಲಿಬಾನ್‌ ಉಗ್ರರಿಗೆ ಹೆಣ್ಣು ಜೀವಂತ ಇದ್ದಾಳ್ಳೋ ಇಲ್ಲವೋ ಎನ್ನುವುದು ಒಂದು ವಿಚಾರವೇ ಆಗುವುದಿಲ್ಲ. ಈ ರೀತಿ ಶವಗಳ ಮೇಲೆ ಅತ್ಯಾಚಾರ ಮಾಡುವುದಕ್ಕೆ ನೆಕ್ರೋಫಿಲಿಯಾ ಎಂದು ಕರೆಯುತ್ತಾರೆ. ನಾನು ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಕೆಲಸ ಬಿಡಬೇಕೆಂದು ಸಾಕಷ್ಟು ಬೆದರಿಕೆ ಬಂದಿದ್ದವು. ಆ ಹಿನ್ನೆಲೆಯಲ್ಲಿ ನಾನು ಆ ದೇಶ ಬಿಟ್ಟು ಬಂದೆ’ ಎಂದು ಅವರು ಹೇಳಿಕೊಂಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next