Advertisement

ಆತ್ಮಹತ್ಯಾ ದಾಳಿಕೋರರ ಕುಟುಂಬಕ್ಕೆ ತಾಲಿಬಾನ್‌ ಸಹಾಯ

08:53 PM Oct 20, 2021 | Team Udayavani |

ಕಾಬೂಲ್‌: ಆಫ್ಘಾನಿಸ್ತಾನದಲ್ಲಿ ಅಮೆರಿಕದ ಸೇನೆಯಿದ್ದಾಗ ಆತ್ಮಹತ್ಯಾ ಬಾಂಬ್‌ ದಾಳಿ ನಡೆಸಿದ್ದವರ ಕುಟುಂಬಗಳ ಸಹಾಯಕ್ಕೆ ತಾಲಿಬಾನ್‌ ಸರ್ಕಾರ ನಿಂತಿದೆ. ಅವರನ್ನೆಲ್ಲ ಹುತಾತ್ಮರೆಂದು ಕರೆದಿರುವ ಸರ್ಕಾರ, ಮೃತ ದಾಳಿಕೋರರ ಕುಟುಂಬಕ್ಕೆ ಜಮೀನು, ಹಣ ಮತ್ತು ಬಟ್ಟೆ ಒದಗಿಸಿದೆ.

Advertisement

ಕಾಬೂಲ್‌ನ ಅಂತಾರಾಷ್ಟ್ರೀಯ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೃತ ಆತ್ಮಹತ್ಯಾ ಬಾಂಬ್‌ ದಾಳಿಕೋರರ ಕುಟುಂಬದವರನ್ನು ಭೇಟಿ ಮಾಡಿದ ಆಫ್ಘನ್‌ ಆಂತರಿಕ ಸಚಿವ ಸಿರಾಜುದ್ದೀನ್‌ ಹಕ್ಕಾನಿ ಈ ಘೋಷಣೆ ಮಾಡಿದ್ದಾರೆ.

ಮೃತ ದಾಳಿಕೋರರ ತ್ಯಾಗವನ್ನು ಶ್ಲಾಘಿ ಸಿರುವ ಹಕ್ಕಾನಿ, ಅವರನ್ನು ಇಸ್ಲಾಂ ದೇಶದ ನಾಯಕರೆಂದು ಕರೆದಿದ್ದಾರೆ. ಅವರ ಕುಟುಂಬಕ್ಕೆ ತಲಾ 10,000 ಅಫ್ಘಾನಿ (8,313 ರೂ.), ಜಮೀನು ಹಾಗೆ ಬಟ್ಟೆ ಕೊಡಲಾಗುವುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ:25ರಿಂದ 724 ಕಿರಿಯ ಪ್ರಾಥಮಿಕ ಶಾಲೆಗಳು ಓಪನ್‌

Advertisement

Udayavani is now on Telegram. Click here to join our channel and stay updated with the latest news.

Next