ಕಾಬೂಲ್: ಸಲಿಂಗ ಕಾಮ, ಕಳವು ಸೇರಿದಂತೆ ಹಲವು ಅಪರಾಧಗಳಲ್ಲಿ ತೊಡಗಿಸಿಕೊಂಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ 12 ಮಂದಿಗೆ ತಾಲಿಬಾನ್ ಉಗ್ರರ ಆಡಳಿತ ಛಡಿ ಏಟಿನ ಶಿಕ್ಷೆ ವಿಧಿಸಿದೆ.
Advertisement
ಕಾಬೂಲ್ನ ಫುಟ್ಬಾಲ್ ಕ್ರೀಡಾಂಗಣದಲ್ಲಿ ಸೇರಿದ್ದ ಸಾವಿರಾರು ಮಂದಿಯ ಎದುರಿನಲ್ಲಿ 12 ಮಂದಿಗೆ ಛಡಿ ಏಟು ನೀಡಲಾಗಿದೆ.
ಈ ಪೈಕಿ ಕೆಲವರಿಗೆ ಮನೆಗೆ ಮರಳಲು ಅವಕಾಶ ಕಲ್ಪಿಸಲಾಗಿದ್ದರೆ, ಇನ್ನುಳಿದವರನ್ನು ಜೈಲಿಗೆ ಕಳುಹಿಸಲಾಗಿದೆ. ಅಪರಾಧ ಎಸಗಿದ ಪುರುಷ-ಮಹಿಳೆಯರಿಗೆ 21ರಿಂದ 39 ಏಟುಗಳನ್ನು ನೀಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.