Advertisement

ಅಫ್ಘಾನಿಸ್ತಾನ: ಗಡ್ಡ ಬಿಟ್ಟಿದ್ದರೆ ಮಾತ್ರ ಆಫೀಸಿಗೆ ಎಂಟ್ರಿ

07:01 PM Mar 28, 2022 | Team Udayavani |

ಕಾಬೂಲ್‌: ಅಫ್ಘಾನಿಸ್ತಾನದ ತಾಲಿಬಾನ್‌ ಆಡಳಿತವು ಅಲ್ಲಿನ ಸರ್ಕಾರಿ ಕಚೇರಿಗಳ ನೌಕರರಿಗೆ ಹೊಸ ನಿಯಮವನ್ನು ಹೇರಿದೆ.

Advertisement

ಸರ್ಕಾರಿ ನೌಕರರು ಗಡ್ಡ ಬಿಟ್ಟಿರಬೇಕು ಮತ್ತು ಸ್ಥಳೀಯ ಉಡುಪನ್ನೇ ಧರಿಸಿರಬೇಕು ಎಂದು ಸಾರ್ವಜನಿಕ ನೈತಿಕತೆ ಸಚಿವಾಲಯ ಆದೇಶ ಹೊರಡಿಸಿದೆ.

ಗಡ್ಡ ಬಿಡುವವರೆಗೂ ಹಾಗೂ ಜುಬ್ಟಾ, ಕೋಟ್‌ ಮತ್ತು ಟೋಪಿ ಧರಿಸುವವರೆಗೂ ನೌಕರರು ಕಚೇರಿಗೆ ಬಾರದಿರಲು ಸೂಚಿಸಲಾಗಿದೆ.

ಒಂದು ವೇಳೆ ನಿಯಮ ತಪ್ಪಿದಲ್ಲಿ ಅವರನ್ನು ಕೆಲಸದಿಂದಲೇ ಅಮಾನತು ಮಾಡಲಾಗುವುದು ಎಂದೂ ಎಚ್ಚರಿಸಲಾಗಿದೆ.

ತಾಲಿಬಾನ್‌ ಆಡಳಿತ ಆರಂಭವಾದಾಗಿನಿಂದ ಬಹುತೇಕ ಎಲ್ಲ ಹೆಣ್ಣು ಮಕ್ಕಳೂ ಕೆಲಸ ಬಿಡುವಂತೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next