ಮುಂಬಯಿ, ಡಿ. 16: ಬಂಟರ ಸಂಘ ಮುಂಬಯಿ ಇದರ ಮುಖವಾಣಿ ಬಂಟರವಾಣಿಯ ಆಶ್ರಯದಲ್ಲಿ 2020 ಫೆಬ್ರವರಿ 8ರಂದು ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಲಿರುವ ನಾಲ್ಕನೇ ವಾರ್ಷಿಕ ಬಂಟರವಾಣಿ “ಚಿಣ್ಣರ ಚಿಲಿಪಿಲಿ-4′ ಫ್ಯಾಶನ್ ಶೋ ಪ್ರತಿಭಾ ಸ್ಪರ್ಧೆ ಹಾಗೂ ಸಮೂಹ ನೃತ್ಯ ಸ್ಪರ್ಧೆ ಕಾರ್ಯಕ್ರಮದ ಯಶಸ್ಸಿಗಾಗಿ ವಿಶೇಷ ಸಮಿತಿಯೊಂದನ್ನು ರಚಿಸಲಾಯಿತು.
ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಇವರ ಮಾರ್ಗದರ್ಶನದಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಭೋಜ ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಆರ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿ. ಶೆಟ್ಟಿ ಮತ್ತು ಸಮಿತಿಯ ಪ್ರೋತ್ಸಾಹ, ಸಹಕಾರದೊಂದಿಗೆ ಕಾರ್ಯಕ್ರಮ ಜರಗಲಿದೆ.
ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾ ರಾಮ ಬಿ. ಶೆಟ್ಟಿ ಇವರ ನೇತೃತ್ವದಲ್ಲಿ ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ, ಸಂಪಾದಕ ಪ್ರೇಮನಾಥ್ ಶೆಟ್ಟಿ ಮುಂಡ್ಕೂರು, ಸಂಪಾದಕ ಮಂಡಳಿಯ ಡಾ| ಸುನೀತಾ ಎಂ. ಶೆಟ್ಟಿ, ಕೋಡು ಭೋಜ ಶೆಟ್ಟಿ, ಶಾಂತಾ ವಿ. ಶೆಟ್ಟಿ, ನಾರಾಯಣ ಶೆಟ್ಟಿ ನಂದಳಿಕೆ, ಕರ್ನೂರು ಮೋಹನ್ ರೈ, ಲತಾ ಸಂತೋಷ್ ಶೆಟ್ಟಿ ಹಾಗೂ ಸಲಹಾ ಮಂಡಳಿಯ ಉಸ್ತುವಾರಿಯಲ್ಲಿ ಜರಗಲಿರುವ ಬಂಟರವಾಣಿ ಚಿಣ್ಣರ ಚಿಲಿಪಿಲಿ-4 ಹಾಗೂ ಸಮೂಹ ನೃತ್ಯ ಕಾರ್ಯಕ್ರಮಕ್ಕೆ ಸಂಘದ ಒಂಬತ್ತು ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರಾದ ಜಗದೀಶ್ ಶೆಟ್ಟಿ ನಂದಿಕೂರು ನವಿಮುಂಬಯಿ, ರವೀಂದ್ರ ಎಸ್. ಶೆಟ್ಟಿ ಜೋಗೇಶ್ವರಿ-ದಹಿಸರ್, ಡಾ| ಆರ್. ಕೆ. ಶೆಟ್ಟಿ ಅಂಧೇರಿ-ಬಾಂದ್ರಾ, ಕರುಣಾಕರ ವಿ. ಶೆಟ್ಟಿ ಡೊಂಬಿವಲಿ, ಸತೀಶ್ ಎನ್. ಶೆಟ್ಟಿ ಭಿವಂಡಿ-ಬದ್ಲಾಪುರ, ಜಯಂತ್ ಆರ್. ಪಕ್ಕಳ ವಸಾಯಿ-ಡಹಾಣೂ, ಗಿರೀಶ್ ಶೆಟ್ಟಿ ತೆಳ್ಳಾರ್ ಮೀರಾ-ಭಾಯಂದರ್, ನಲ್ಯಗುತ್ತು ಪ್ರಕಾಶ್ ಟಿ. ಶೆಟ್ಟಿ ಸಿಟಿ ರೀಜನ್, ಸಿಎ ವಿಶ್ವನಾಥ ಶೆಟ್ಟಿ ಕುರ್ಲಾ-ಭಾಂಡೂಪ್ ಹಾಗೂ ಸಮಿತಿಯಸದಸ್ಯರು ಸಹಕರಿಸಲಿದ್ದಾರೆ. ಇತ್ತೀಚೆಗೆ ಬಂಟರವಾಣಿ ಕಾರ್ಯಾಧ್ಯಕ್ಷ ಶಾಂತಾರಾಮ ಬಿ. ಶೆಟ್ಟಿ ಅವರ ನೇತೃತ್ವದಲ್ಲಿ ಬಂಟರ ಭವನದಲ್ಲಿ ಜರಗಿದ ವಿಶೇಷ ಸಭೆಯಲ್ಲಿ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ಮೋಹನ್ ದಾಸ್ ಶೆಟ್ಟಿ ಅವರನ್ನು ನೇಮಿಸಲಾಯಿತು.
ಸಮಿತಿಯ ಸಂಚಾಲಕರಾಗಿ ಮಹೇಶ್ ಎಸ್. ಶೆಟ್ಟಿ, ಕಾರ್ಯಕ್ರಮದ ಕಾನೂನು ನಿಯಮ, ವ್ಯವಸ್ಥಾಪನಾ ಸಮಿತಿಯ ಮೇಲ್ವಿಚಾರಕರಾಗಿ ಜಯ ಎ. ಶೆಟ್ಟಿ, ರವೀಂದ್ರನಾಥ ಎಂ. ಭಂಡಾರಿ, ಪ್ರಸಾದ್ ಶೆಟ್ಟಿ ಅಂಗಡಿಗುತ್ತು, ಎಂ. ಜಿ. ಶೆಟ್ಟಿ ಅವರನ್ನು ನೇಮಿಸಲಾಯಿತು. ಸಾಂಸ್ಕೃತಿಕ ಸಮಿತಿಯ ನೇತೃತ್ವವನ್ನು ಕರ್ನೂರು ಮೋಹನ್ ರೈ, ಕಿಶೋರ್ ಶೆಟ್ಟಿ ಕುತ್ಯಾರ್, ನವೀನ್ ಶೆಟ್ಟಿ ಇನ್ನಬಾಳಿಕೆ, ದಿವಾಕರ ಶೆಟ್ಟಿ ಕುರ್ಲಾ, ವಿಠಲ ಎಸ್. ಆಳ್ವ, ಉಮಾ ಕೆ. ಶೆಟ್ಟಿ, ಲತಾ ಪಿ. ಶೆಟ್ಟಿ, ಚಿತ್ರಾ ಆರ್. ಶೆಟ್ಟಿ, ಗೌತಮ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ವಿವೇಕ್ ವಿ. ಶೆಟ್ಟಿ, ಸಾಗರ್ ದಿವಾಕರ ಶೆಟ್ಟಿ, ಪ್ರಸನ್ನ ಶೆಟ್ಟಿ, ವಿಕಾಸ್ ಶೆಟ್ಟಿ, ಸವಿನ್ ಶೆಟ್ಟಿ, ನೀಲೇಶ್ ಶೆಟ್ಟಿ, ತಾರಾನಾಥ್ ಶೆಟ್ಟಿ ಅವರಿಗೆ ನೀಡಲಾಯಿತು. ಸಲಹಾ ಸಮಿತಿಯಲ್ಲಿ ಡಾ| ಸುನೀತಾ ಎಂ. ಶೆಟ್ಟಿ, ಇಂದ್ರಾಳಿ ದಿವಾಕರ ಶೆಟ್ಟಿ, ಡಾ| ಪ್ರಭಾಕರ ಎಂ. ಶೆಟ್ಟಿ, ರತ್ನಾಕರ ಶೆಟ್ಟಿ ಮುಂಡ್ಕೂರು, ಶಾಂತಾ ಆರ್. ಶೆಟ್ಟಿ, ಕೃಷ್ಣ ವಿ. ಶೆಟ್ಟಿ, ಮುಂಡಪ್ಪ ಎಸ್.
ಪಯ್ಯಡೆ, ಅಪ್ಪಣ್ಣ ಎಂ. ಶೆಟ್ಟಿ, ಖಾಂದೇಶ್ ಭಾಸ್ಕರ್ ಶೆಟ್ಟಿ, ಪ್ರಕಾಶ್ ಶೆಟ್ಟಿ ಬೊರಿವಲಿ, ಶಂಕರ ಎ. ಶೆಟ್ಟಿ ಜಿಎಸ್ ಇಂಟರ್‌ನ್ಯಾಷನಲ್, ಕುಶಲ್ ಭಂಡಾರಿ, ಅಶೋಕ್ ಅಡ್ಯಂತಾಯ, ವೇಣುಗೋಪಾಲ್ ಶೆಟ್ಟಿ, ಪಲಿಮಾರು ವಸಂತ್ ಶೆಟ್ಟಿ ಮುಲುಂಡ್ ಬಂಟ್ಸ್, ಶಶಿಕಾಂತಿ ಶೆಟ್ಟಿ ಮುಲುಂಡ್, ವಿನೋದಾ ಚೌಟ ಮುಲುಂಡ್, ಪ್ರಚಾರ ಸಮಿತಿ ಮತ್ತು ನಿರ್ವಹಣಾ ಸಮಿತಿಯಲ್ಲಿ ಅಶೋಕ್ ಪಕ್ಕಳ, ಪ್ರೇಮನಾಥ್ ಶೆಟ್ಟಿ ಮುಂಡ್ಕೂರು, ಆಸ್ತಾ ಪ್ರಕಾಶ್ ಶೆಟ್ಟಿ ಬೊರಿವಲಿ, ಪ್ರಕಾಶ್ ಕುಂಠಿನಿ, ಗುರುದತ್ತ್ಪೂಂ ಜಾ ಮುಂಡ್ಕೂರು ಇವರನ್ನು ಆಯ್ಕೆ ಮಾಡಲಾಯಿತು.
ಚಿತ್ರ-ವರದಿ: ಪ್ರೇಮನಾಥ್ ಶೆಟ್ಟಿ ಮುಂಡ್ಕೂರು