Advertisement

ಮಹಿಳಾ ವಿಭಾಗದಿಂದ ಪ್ರತಿಭಾ ಸ್ಪರ್ಧೆ, ಅರಸಿನ ಕುಂಕುಮ

06:20 PM Feb 12, 2020 | Suhan S |

ಮುಂಬಯಿ, ಫೆ. 11: ತೀಯಾ ಸಮಾಜ ಮುಂಬಯಿ ಇದರ ಪೂರ್ವ ಮತ್ತು ಪಶ್ಚಿಮ ವಲಯಗಳ ಮಹಿಳಾ ವಿಭಾಗದ ವತಿಯಿಂದ ಪ್ರತಿಭಾ ಸ್ಪರ್ಧೆ ಮತ್ತು ಅರಸಿನ ಕುಂಕುಮ ಸಂಭ್ರಮವು ಫೆ. ರಂದು ಆಲ್‌ ಇಂಡಿಯಾ ಇನ್‌ ಸ್ಟ ಟ್ಯೂಟ್‌ ಆಫ್‌ ಸೆಲ್ಪ್ ಲೋಕಲ್‌ ಗೌರ್ಮೆಂಟ್‌ ಇಲ್ಲಿನ ಟೆರೆಸ್‌ ಹಾಲ್ ಜುಹೂ ಲೇನ್‌ ಅಂಧೇರಿ ಪಶ್ಚಿಮ ಇಲ್ಲಿ ಜರಗಿತು.

Advertisement

ಸಂಘದ ಅಧ್ಯಕ್ಷರಾದ ರವೀಂದ್ರ ಮಂಜೇಶ್ವರ, ವಿಶ್ವಸ್ಥರಾದ ಶಂಕರ್‌ ಸಾಲ್ಯಾನ್‌, ಡಾ| ದಯಾನಂದ ಕುಂಬ್ಳ, ಬಾಬು ಟಿ. ಬಂಗೇರ, ಗೌರವ ಕೋಶಾಧಿಕಾರಿ ಅಶ್ವಿ‌ನ್‌ ಬಂಗೇರ, ಆರೋಗ್ಯ ನಿಧಿ ಕಾರ್ಯಾಧ್ಯಕ್ಷ ತಿಮ್ಮಪ್ಪ ಬಂಗೇರ, ಬೊಳ್ನಾಡು ಶ್ರೀ ಭಗವತೀ ಕ್ಷೇತ್ರದ ಪುನಃರ್ನಿರ್ಮಾಣದ ರೂವಾರಿ ಕೃಷ್ಣ ಉಚ್ಚಿಲ, ತೀಯಾ ಬೆಳಕು ಸಂಪಾದಕ ಶ್ರೀಧರ ಸುವರ್ಣ, ಪೂರ್ವ ಮತ್ತು ಪಶ್ಚಿಮ ವಲಯ ಕಾರ್ಯಧ್ಯಕ್ಷೆ ಪದ್ಮಿನಿ ಕೆ. ಕೋಟೆಕಾರ್‌, ಲತಾ ಡಿ. ಉಳ್ಳಾಲ್‌ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಹಿಳಾ ಸದಸ್ಯೆಯರು ಪ್ರಾರ್ಥನೆಗೈದರು. ಪುಟಾಣಿ ಮಕ್ಕಳಿಗೆ ಬಣ್ಣ ಹಚ್ಚುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅಡುಗೆ ಸ್ಪರ್ಧೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಶ್ವೇತಾ ವಿವೇಕ್‌, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನುಕ್ರಮವಾಗಿ ಯಶೋಧಾ ಕೋಟ್ಯಾನ್‌ ಹಾಗೂ ಶಶಿಪ್ರಭಾ ಬಂಗೇರ ಅವರು ಪಡೆದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಹಿಳೆಯರನ್ನು ಗೌರವಿಸಲಾಯಿತು.

ಅರಸಿನ ಕುಂಕುಮ :  ಪಶ್ಚಿಮ ವಲಯ ಮಹಿಳಾ ವಿಭಾಗದ ಸದಸ್ಯೆಯರು ಅರಸಿನ ಕುಂಕುಮ ಕಾರ್ಯಕ್ರಮವನ್ನು ನೆರವೇರಿಸಿದರು. ಸೋನಾಲ್‌ ಉಳ್ಳಾಲ್‌ ಸಹಕರಿಸಿದರು. ನಿಧಿ ಭಾಸ್ಕರನ್‌ ಹಾಗೂ ಸ್ನೇಹಾ ಬಂಗೇರ ಅವರ ನಿರೂಪಣೆಯಲ್ಲಿ ಮಕ್ಕಳ ಮತ್ತು ಸದಸ್ಯರ ನೃತ್ಯ ಮತ್ತು ಗಾಯನ ಕಾರ್ಯಕ್ರಮ ನಡೆಯಿತು.

ಕೃಷ್ಣ ಉಚ್ಚಿಲ್‌ ಅವರು ಭೋಜನದ ವ್ಯವಸ್ಥೆಯನ್ನು ಆಯೋಜಿಸಿದ್ದರು. ಈ ಸಂದರ್ಭ ಬೋಲ್ನಾಡು ಶ್ರೀ ಭಗವತೀ ಕ್ಷೇತ್ರ ಪುನ ನಿರ್ಮಾಣ ಮುಂಬಯಿ ಸಮಿತಿಯ ವತಿಯಿಂದ ಕ್ಷೇತ್ರದ ಪುನರ್‌ ನಿರ್ಮಾಣಕ್ಕಾಗಿ ಸಮುದಾಯ ಬಾಂಧವರಿಂದ ಸಂಗ್ರಹಿಸಲ್ಪಟ್ಟ 45,0000 ರೂ. ಗಳನ್ನು ಮುಂಬಯಿ ಸಮಿತಿ ಅಧ್ಯಕ್ಷ ತಿಮ್ಮಪ್ಪ ಬಂಗೇರ, ಗೌರವ ಕಾರ್ಯದರ್ಶಿ ಬಾಬು ಬೆಳ್ಚಡ, ಕೋಶಾಧಿಕಾರಿ ಉಜ್ವಲಾ ಸಿ. ಮುಟ್ಟಮ್‌ ಅವರು ವೇದಿಕೆಯ ಗಣ್ಯರ ಉಪಸ್ಥಿತಿಯಲ್ಲಿ ಕೃಷ್ಣ ಉಚ್ಚಿಲ್‌ ಅವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸಭಾ ಕಾರ್ಯಮ ಜರಗಿತು.

Advertisement

ವರದಿ ವರ್ಷದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಸಹಕರಿಸಿದ ಅಶ್ವಿ‌ನ್‌ ಬಂಗೆರ, ವೃಂದಾ ದಿನೇಶ್‌, ಶ್ರೀಧರ ಸುವರ್ಣ, ಪ್ರೀತಿ ಹರಿಶ್‌ ಮಂಜೇಶ್ವರ್‌, ಕೇಶವ್‌ ಸುವರ್ಣ, ಅಶಾಲತಾ ಕೆ. ಉಳ್ಳಾಲ್‌, ಕುಮುದಾ ಕೋಟ್ಯಾನ್‌, ಪದ್ಮಿನಿ ಕೋಟೆಕಾರ್‌, ಸುನೀತಾ ಸಾಲ್ಯಾನ್‌, ಸುಜಾತಾ ಕೇಶವ, ಶ್ವೇತಾ ವಿವೇಕ್‌, ಶ್ವೇತಾ ಪ್ರೀತಮ್, ಜಯಶ್ರೀ ಟಿ. ಸುವರ್ಣ, ದಿವ್ಯಾ ಸುವರ್ಣ, ನೀತು ಮರೋಲಿ,ರಾಜಶ್ರೀ ಚಂದ್ರನಾಥ್‌, ಕವಿತಾ ಅರುಣ್‌ ಬೆಳ್ಚಡ, ಲತಾ ಡಿ. ಉಳ್ಳಾಲ, ಸೋನಾಲ್‌ ಉಳ್ಳಾಲ, ಮಹೇಶ್‌ ನಾರಾಯಣ್‌, ದೀಕ್ಷಾ, ಸ್ಮಿತಿನ್‌ ಬೆಳ್ಚಡ, ಭಾಸ್ಕರ ಕರ್ಕೇರ, ಶೈಲೇಶ್‌ ಬಂಗೇರ, ರಮೇಶ್‌ ಸುವರ್ಣ, ಪುರುಷೋತ್ತಮ ಕೋಟೆಕಾರ್‌, ಸುಧಾ ವರ್ಕಾಡಿ, ಶುಭಾ ಗುಜರನ್‌, ಲತಾ ಕರ್ಕೆರ, ನೇಮಿರಾಜ್‌ ಕೋಟ್ಯಾನ್‌, ರೇಶ್ಮಾ ಮಹೇಶ್‌ ಸಪ್ನಾ, ಹಿತೇಶ್‌ ಹೊಸಬೆಟ್ಟು, ಯಶೋಧಾ ಕೋಟ್ಯಾನ್‌, ವಿಜಯಕುಮಾರ್‌ ಇವರನ್ನು ಗೌರವಿಸಲಾಯಿತು. ಬಾಬು ಬೆಳ್ಚಡ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next