Advertisement

ಕೌಶಲ್ಯವೃದ್ಧಿಗೆ ಪ್ರತಿಭಾ ವೇಗವರ್ಧನೆ

10:10 PM Mar 05, 2020 | Team Udayavani |

ಪದವೀಧರರ ಕೌಶಲ್ಯಗಳನ್ನು ಉನ್ನತೀಕರಿಸಲು ಮುಂದಾಗಿರುವ ರಾಜ್ಯ ಸರ್ಕಾರ,ಪ್ರತಿಭೆ ವೇಗವರ್ಧನ ಕಾರ್ಯಕ್ರಮವನ್ನು ಘೋಷಿಸಿದೆ. ಖಚಿತವಾದ ಉದ್ಯೋಗಾವಕಾಶಕ್ಕಾಗಿ ಕೌಶಲ್ಯ ತರಬೇತಿ ನೀಡಲು ಮತ್ತು ಕೌಶಲ್ಯಗಳನ್ನು ಉನ್ನತೀಕರಿಸಲು ಮುಂದಿನ 2 ವರ್ಷಗಳಲ್ಲಿ 1000 ಪದವೀಧರರಿಗೆ ಕೌಶಲ್ಯಾಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ 2 ಕೋಟಿ ರೂ. ವೆಚ್ಚದಲ್ಲಿ ಟ್ಯಾಲೆಂಟ್‌ ಎಕ್ಸಲರೇಷನ್‌ ಪ್ರೋಗ್ರಾಂ( ಪ್ರತಿಭೆ ವೇಗವರ್ಧನೆ ಕಾರ್ಯಕ್ರಮ) ಅನ್ನು ಅನುಷ್ಠಾನಗೊಳಿಸಲಾಗುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ.

Advertisement

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಯಾ ಗಿರುವ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಈವರೆಗೆ ವಸತಿ ರಹಿತ ತರಬೇತಿ ನಡೆಸಲಾಗುತ್ತಿದೆ. ಬಹಳಷ್ಟು ತರಬೇತಿ ಸಂಸ್ಥೆಗಳು ನಗರ, ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಯುವಕ, ಯುವತಿಯರು ತರಬೇತಿ ಪಡೆಯಲು ನೆರವಾಗಲು ಕೇಂದ್ರ ಸರ್ಕಾರದ ಸಾಮಾನ್ಯ ವೆಚ್ಚ ನಿಯಮಾವಳಿಗೆ ಅನುಸಾರ ವಾಗಿ ವಸತಿ ತರ ಬೇತಿ ಕಾರ್ಯಕ್ರಮ ಪ್ರಾರಂಭಿ ಸಲಾಗುವುದು. ಈ ಉದ್ದೇಶಕ್ಕಾಗಿ 2020-21ನೇ ಸಾಲಿನಲ್ಲಿ 20 ಕೋಟಿ ರೂ. ಒದಗಿಸಲಾಗುವುದು.

ಸಾರ್ವಜನಿಕ ಖಾಸಗಿ ಸಹಭಾಗಿತ್ವದೊಂದಿಗೆ ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗ, ಹಾಸನ, ತುಮಕೂರು ಮತ್ತು ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳಲ್ಲಿ 353 ಕೋಟಿ ರೂ. ವೆಚ್ಚದಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲಾಗುವುದು. ಇದರಿಂದ ಕೈಗಾರಿಕಾ ಉದ್ಯಮ ಕ್ಷೇತ್ರಗಳ ಉನ್ನತ ಮಟ್ಟದ ಡೊಮೈನ್‌ಗಳಲ್ಲಿ ಕೌಶಲ್ಯ ತರಬೇತಿ ನೀಡುವುದರ ಮೂಲಕ ರಾಜ್ಯದ ಯುವಜನತೆಗೆ ಉದ್ಯೋಗಾವಕಾಶ ಹೆಚ್ಚಿಸಲಿದೆ. ಮುಂದಿನ 5 ವರ್ಷಗಳಲ್ಲಿ 12,600 ವಿದ್ಯಾರ್ಥಿಗಳಿಗೆ ಉದ್ಯೋಗ ನಿಯುಕ್ತಿಗೊಳಿಸುವ ಗುರಿ ಹೊಂದಲಾಗಿದೆ.

ರಾಜ್ಯದ ಐಟಿಐಗಳಲ್ಲಿ ಉಭಯ ತರಬೇತಿ ವ್ಯವಸ್ಥೆ ಅಳವಡಿಸಲಾಗುವುದು. ಇದು ಉದ್ಯಮಗಳ ಕುಶಲ ಮಾನವ ಸಂಪನ್ಮೂಲದ ಅಗತ್ಯತೆ ಪೂರೈಸಲು ಹಾಗೂ ಹೆಚ್ಚು ಉದ್ಯೋಗ ದೊರಕುವ ಕೋರ್ಸ್‌ಗಳಲ್ಲಿ ತರಬೇತಿ ನಡೆಸಲು ಸಹಾಯಕವಾಗಲಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು.

ಯುವ ಕೇಂದ್ರಕ್ಕೆ 2 ಕೋಟಿ: ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕರ್ನಾಟಕದ ಮಹನೀಯರ ಕುರಿತು ಕಾನೂನಿನ ದೃಷ್ಟಿಕೋನದಿಂದ ಸಂಶೋಧಿಸುವ ಉದ್ದೇಶದಿಂದ ವಿಜ್ಞಾನೇಶ್ವರ ಅಧ್ಯಯನ ಪೀಠವನ್ನು 1 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾ ಗುವುದು. ವಿವೇಕಾನಂದ ಯುವ ಕೇಂದ್ರವನ್ನು ಬೆಂಗಳೂರಿನಲ್ಲಿ 2 ಕೊ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next