Advertisement
ನವಯುಗ್ ಸಂಸ್ಥೆಯಿಂದ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಟೋಲ್ ಸಂಗ್ರಹ ನಡೆಯುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಸ್ಥಳೀಯ ಸಂಘಟನೆಗಳು ಕಳೆದ ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದರೂ ಬುಧವಾರ ಬೆಳಗ್ಗೆ 8.30ಕ್ಕೆ ಪ್ರತಿಭಟನೆಯ ನಡುವೆಯೇ ಪೊಲೀಸರ ಬಿಗು ಭದ್ರತೆಯಲ್ಲಿ ಟೋಲ್ ಸಂಗ್ರಹ ಪ್ರಾರಂಭಗೊಂಡಿತು.10 ಟ್ರಾಕ್‌ಗಳಲ್ಲಿ ಸಂಗ್ರಹ ತಲಪಾಡಿಯಲ್ಲಿ ಆಧುನಿಕವಾಗಿ ನಿರ್ಮಾಣಗೊಂಡಿರುವ ಟೋಲ್ ಫ್ಲಾಝಾದಲ್ಲಿ ಏಕಮುಖದಲ್ಲಿ 5 ಟ್ರಾಕ್ ವ್ಯವಸ್ಥೆ ಮತ್ತು ದ್ವಿಮುಖದಲ್ಲಿ 5 ಟ್ರಾಕ್ ವ್ಯವಸ್ಥೆ ಮಾಡಿದ್ದು, ಒಟ್ಟು 10 ಟ್ರಾಕ್‌ಗಲ್ಲಿ ಟೋಲ್ ಸಂಗ್ರಹ ನಡೆಯಲಿದೆ. ಲಘು ವಾಹನ, ವಾಣಿಜ್ಯ ವಾಹನ, ಬಸ್, ಟ್ರಕ್‌ಗಳಿಗೆ ಮೂರು ಟ್ರಾಕ್‌ಗಳಿದ್ದರೆ, ಫಾಸ್ಟ್ ಟ್ರಾಕ್ ಮತ್ತು ಭಾರೀ ಸರಕು ಸಾಗಾಟದ ವಾಹನಗಳಿಗೆ ಪ್ರತ್ಯೇಕ ಟ್ರಾಕ್‌ಗಳನ್ನು ದ್ವಿಮುಖ ಸಂಚಾರಧಿದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಟೋಲ್ ಪ್ರಾರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಗಡಿನಾಡು ರಕ್ಷಣಾ ವೇದಿಕೆಯ ಕಾರ್ಯಕರ್ತರು, ಬಸ್ ಮಾಲಕರು, ರಿಕ್ಷಾ ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಟೋಲ್ ಸಂಗ್ರಹಕ್ಕೆ ಅಡ್ಡಿಪಡಿಸಿದ 12 ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಬಳಿಕ ಟೋಲ್ ಸಂಗ್ರಹ ನಿರಾತಂಕವಾಗಿ ನಡೆಯಿತು. ಮುಂದುವರಿದ ಟೋಲ್ ಸಂಗ್ರಹ
ಟೋಲ್ ಪ್ರಾರಂಭದ ಸಂದರ್ಭದಲ್ಲಿ ನಡೆದ ಪ್ರತಿರೋಧ ಬಿಟ್ಟರೆ ಬುಧವಾರ ರಾತ್ರಿ ವರೆಗೆ ಯಾವುದೇ ಅಡೆತಡೆಯಿಲ್ಲದೆ ಟೋಲ್ ಸಂಗ್ರಹ ನಡೆದಿದೆ. ಸ್ಥಳೀಯರು ಸೇರಿದಂತೆ 65ಕ್ಕೂ ಹೆಚ್ಚು ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Related Articles
ಕಾಮಗಾರಿ ಪೂರ್ತಿಗೊಳಿಸದೆ ಟೋಲ್ ಸಂಗ್ರಹವನ್ನು ವಿರೋಧಿಸಿ ಐಕ್ಯ ಪ್ರಜಾಪ್ರಭುತ್ವ ವೇದಿಕೆಯ ಯುವಜನ ವಿಭಾಗ ಮತ್ತು ಗಡಿನಾಡು ರಕ್ಷಣಾ ವೇದಿಕೆಯ ಆಶ್ರಯದಲ್ಲಿ ಫೆ. 9ರಂದು ಬೆಳಗ್ಗೆ 8 ಗಂಟೆಗೆ ಟೋಲ್‌ಗೇಟ್ ಎದುರು ಪ್ರತಿಭಟನೆ ನಡೆಯಲಿದೆ.
Advertisement