Advertisement
ಗಡಿದಾಟಿ ಬರುವ ಪ್ರಯಾಣಿಕರ ಮಾಹಿತಿ ಸಂಗ್ರಹಿಸಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವ ವೇಳೆ ಹೆಲ್ಪ್ ಡೆಸ್ಕ್ ಸದಸ್ಯರ ಕಾಯಕಕ್ಕೆ ತಲೆದೋರುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರವನ್ನು ಇವರು ಒದಗಿಸುತ್ತಿದ್ದಾರೆ. ಬೆಳಗ್ಗೆ 8ರಿಂದ ಸಂಜೆ 4 ಗಂಟೆ, ಸಂಜೆ 4ರಿಂದ ರಾತ್ರಿ 12 ಗಂಟೆ, ರಾತ್ರಿ 12ರಿಂದ ಬೆಳಗ್ಗೆ 8 ಗಂಟೆ ವರೆಗಿನ 3 ಶಿಫ್ಟ್‌ಗಳಲ್ಲಿ 24 ತಾಸುಗಳೂ ಇಲ್ಲಿ ಸೇವೆ ಜರಗುತ್ತಿದೆ. ಪ್ರತಿ ಶಿಫ್ಟ್‌ನಲ್ಲಿ ತಲಾ 5 ಅಕ್ಷಯ ಘಟಕದಾರರು, ಅಕ್ಷಯ ಜಿಲ್ಲಾ ಕಚೇರಿ ಇಬ್ಬರು ಸಿಬಂದಿ ಇರುವರು. ನ್ಯಾಶನಲ್ ಇನ್‌ಫಾರ್ಮೆಟಿಕ್ ಜಿಲ್ಲಾ ಅಧಿಕಾರಿ, ಐ.ಟಿ. ಮಿಷನ್ ಸಿಬಂದಿಯ ಸಹಕಾರ ದೊಂದಿಗೆ ಅಕ್ಷಯ ತಲಪಾಡಿ ಹೆಲ್ಪ್ ಡೆಸ್ಕ್ ಚಟುವಟಿಕೆಗಳು ಸಕ್ರಿಯವಾಗಿವೆ ಎಂದು ಅಕ್ಷಯ ಜಿಲ್ಲಾ ಯೋಜನೆ ಪ್ರಬಂಧಕ ಎನ್.ಎಸ್. ಅಜೀಷ್ ತಿಳಿಸಿದರು.
ಮಂಜೇಶ್ವರ ಚೆಕ್‌ಪೋಸ್ಟ್ ಮೂಲಕ ಮಂಗಳವಾರ 410 ಮಂದಿ ಕೇರಳ ಪ್ರವೇಶ ನಡೆಸಿದರು. ಈ ವರೆಗೆ ಮಂಜೇಶ್ವರ ಚೆಕ್ ಪೋಸ್ಟ್ ಮೂಲಕ ಒಟ್ಟು 6,336 ಮಂದಿ ರಾಜ್ಯ ಪ್ರವೇಶಿಸಿದ್ದಾರೆ. ಜಿಲ್ಲೆಯಿಂದ ಒಟ್ಟು 6,175 ಮಂದಿ ಪಾಸ್‌ಗೆ ಅರ್ಜಿ ಸಲ್ಲಿಸಿದ್ದು, 3,800 ಮಂದಿ ಪ್ರವೇಶಾತಿ ಪಡೆದಿದ್ದಾರೆ.