Advertisement

ತಲಪಾಡಿ-ಕಾಸರಗೋಡು ಷಟ್ಪಥ 2024ರಲ್ಲಿ ಪೂರ್ತಿ : ರಿಯಾಸ್‌

09:18 AM Aug 17, 2022 | Team Udayavani |

ಕುಂಬಳೆ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ತಲಪಾಡಿ-ಕಾಸರಗೋಡು ನಡುವೆ ನಡೆಯುತ್ತಿರುವ ಷಟ್ಪಥ ಕಾಮಗಾರಿಯನ್ನು ಕೇರಳ ಸರಕಾರದ ಲೋಕೋಪಯೋಗಿ ಇಲಾಖೆಯ ಸಚಿವ ಪಿ.ಎ. ಮುಹಮ್ಮದ್‌ ರಿಯಾಸ್‌ ಮಂಗಳವಾರ ವೀಕ್ಷಿಸಿದರು.

Advertisement

ಮಂಜೇಶ್ವರ, ಕುಂಬಳೆ, ಉಪ್ಪಳ, ಕಾಸರಗೋಡು ಮುಂತಾಡೆಗಳಲ್ಲಿ ನಡೆಯುತ್ತಿರುವ ಸೇತುವೆಗಳನ್ನು ಮತ್ತು ಕಾಸರಗೋಡಿನಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಯನ್ನು ವೀಕ್ಷಿಸಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಕಾಮಗಾರಿ ಭರದಿಂದ ಸಾಗುತ್ತಿದ್ದು, 2024ರ ಮೇ ತಿಂಗಳೊಳಗೆ ಪೂರ್ತಿಯಾಗಲಿದೆ. ಇದಕ್ಕೆ ಚುನಾಯಿತ ಪ್ರತಿನಿಧಿಗಳು, ಎಲ್ಲ ರಾಜಕೀಯ ಪಕ್ಷಗಳ ನಾಯಕರ ಸಹಕಾರ ಅಗತ್ಯ ಎಂದರು.

ಕಾಸರಗೋಡು ಸಂಸದ ರಾಜ್‌ಮೋಹನ್‌ ಉಣ್ಣಿತ್ತಾನ್‌, ಶಾಸಕರಾದ ಕಾಸರಗೋಡಿನ ಎನ್‌.ಎ. ನೆಲ್ಲಿಕುನ್ನು, ಮಂಜೇಶ್ವರದ ಎ.ಕೆ.ಎಂ. ಅಶ್ರಫ್‌, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್‌ ರಣ್‌ವೀರ್‌ಚಂದ್‌, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಬಿ.ಎಲ್‌. ಮೀನ ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ : ಕೋಲಾರದಲ್ಲಿ ಭೀಕರ ರಸ್ತೆ ಅಪಘಾತ : ಬಸ್ ಪಲ್ಟಿಯಾಗಿ ದಂಪತಿ ಸಾವು, 15 ಕ್ಕೂ ಹೆಚ್ಚು ಮಂದಿ ಗಾಯ

Advertisement

Udayavani is now on Telegram. Click here to join our channel and stay updated with the latest news.

Next