Advertisement
ತಮಿಳುನಾಡು ಪರ ಮಿಂಚಿದ್ದು ರಾಹುಲ್ ಚೌಧರಿ. ಅವರು 23 ಬಾರಿ ಎದುರಾಳಿ ತಂಡದ ಕೋಟೆಯ ಮೇಲೆ ದಾಳಿ ಮಾಡಿ ಉತ್ತಮ ಯಶಸ್ಸು ಗಳಿಸಿದರು. ಅವರು ಗಳಿಸಿದ ಅಂಕ 13. ರಕ್ಷಣೆಯಲ್ಲಿ ಅವರಿಗೆ ಮಂಜೀತ್ ಚಿಲ್ಲರ್ ನೆರವು ನೀಡಿ, 3 ಅಂಕ ಗಳಿಸಿದರು. ಹರ್ಯಾಣ ಪರ ವಿಕಾಸ್ ಕಂಡೊಲ ದಾಳಿಯಲ್ಲಿ ಮಿಂಚಿ 7 ಅಂಕ ತಂದಿತ್ತರು.
ಪ್ರೊ ಕಬಡ್ಡಿ ಇತಿಹಾಸದಲ್ಲಿ ಧರ್ಮರಾಜ್ ಚೆರ್ಲಥಾನ್, ಡು ಆರ್ ಡೈ ಹಂತದಲ್ಲಿ 10 ಸೂಪರ್ ಟ್ಯಾಕಲ್ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಹರ್ಯಾಣ ಪರ ಆಡುತ್ತಿರುವ ಧರ್ಮರಾಜ್ ರವಿವಾರದ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಪಾಟ್ನಾಕ್ಕೆ ಹೀನಾಯ ಸೋಲು
ದಿನದ ದ್ವಿತೀಯ ಪಂದ್ಯದಲ್ಲಿ ಆತಿಥೇಯ ಪಾಟ್ನಾ ಪೈರೇಟ್ಸ್ ಪುನೇರಿ ಪಲ್ಟಾನ್ ವಿರುದ್ಧ 20-41 ಅಂತರದ ಭಾರೀ ಸೋಲಿಗೆ ತುತ್ತಾಯಿತು. ಇದು ತವರಿನಲ್ಲಿ ಪಾಟಾದನಕ್ಕೆ ಎದುರಾದ ಸತತ ಎರಡನೇ ಸೋಲಾಗಿದೆ.