Advertisement

ಮಾಸ್‌ ಆಡಿಯನ್ಸ್‌ಗೆ ಟೀಸರ್‌ನಲ್ಲೇ “ಟಕ್ಕರ್‌’

10:21 AM Apr 24, 2019 | Team Udayavani |

ಕಳೆದ ವರ್ಷ ಅದ್ಧೂರಿಯಾಗಿ ಸೆಟೇರಿದ್ದ “ಟಕ್ಕರ್‌’ ಚಿತ್ರ ಸದ್ಯ ತೆರೆಗೆ ಬರೋದಕ್ಕೆ ತೆರೆಮರೆಯಲ್ಲಿ ರೆಡಿಯಾಗಿದೆ. ಸದ್ಯ ಚಿತ್ರದ ಪ್ರಮೋಷನ್‌ ಕೆಲಸಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ “ಟಕ್ಕರ್‌’ ಚಿತ್ರದ ಮೊದಲ ಟೀಸರ್‌ ಬಿಡುಗಡೆ ಮಾಡಿದೆ.

Advertisement

ನಟ ದರ್ಶನ್‌ ಅವರ ಸೋದರ ಸಂಬಂಧಿ ಮನೋಜ್‌ ಅವರು “ಟಕ್ಕರ್‌’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಹೆಸರೇ ಹೇಳುವಂತೆ “ಟಕ್ಕರ್‌’ ಔಟ್‌ ಆ್ಯಂಡ್‌ ಔಟ್‌ ಮಾಸ್‌ ಸಬ್ಜೆಕ್ಟ್ ಚಿತ್ರವಾಗಿದ್ದು, ಚಿತ್ರದ ಪ್ರಾರಂಭದಲ್ಲಿಯೇ ಚಿತ್ರತಂಡ ತಿಳಿಸಿದಂತೆ ಭರ್ಜರಿ ಆ್ಯಕ್ಷನ್‌ ಸೀನ್‌ಗಳು ಚಿತ್ರದ ಟೀಸರ್‌ನಲ್ಲೂ ಕಾಣುತ್ತಿದೆ.

“ನೀನು ಟಕ್ಕರ್‌ ಕೊಡಲು ಬಂದಿರೋದು ದಾಸನ ಗರಡಿ ಹುಡುಗನ ಜೊತೆ’ ಎಂಬ ಪಂಚಿಂಗ್‌ ಡೈಲಾಗ್‌ ಮೂಲಕ ಪ್ರಾರಂಭವಾಗುವ ಟೀಸರ್‌, ನಿಧಾನವಾಗಿ ಮಾಸ್‌ ಆಡಿಯನ್ಸ್‌ ಗಮನ ಸೆಳೆಯುತ್ತಿದೆ. ಆ್ಯಕ್ಷನ್‌ ಜೊತೆ ಸಿನಿಮಾದ ನವಿರಾದ ಪ್ರೇಮ ಕಥೆಯನ್ನು ಹೊಂದಿರುವ “ಟಕ್ಕರ್‌’ ಚಿತ್ರದಲ್ಲಿ, ನಾಯಕ ಮನೋಜ್‌ಗೆ ಜೋಡಿಯಾಗಿ “ಪುಟ್ಟ ಗೌರಿ ಮದುವೆ’ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್‌ ನಟಿಸಿದ್ದಾರೆ.

ವಿ.ರಘು ಶಾಸ್ತ್ರಿ ನಿರ್ದೇಶನದಲ್ಲಿ “ಟಕ್ಕರ್‌’ ಮೂಡಿ ಬಂದಿದ್ದು, ಕೆ.ಎನ್‌ ನಾಗೇಶ್‌ ಕೋಗಿಲು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಒಟ್ಟಾರೆ ಮಾಸ್‌ “ಟಕ್ಕರ್‌’ ತೆರೆಮೇಲೆ ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಚಿತ್ರ ಬಿಡುಗಡೆ ಆದ ಮೇಲಷ್ಟೇ ಗೊತ್ತಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next