Advertisement

ಕೋವಿಡ್ : ಗ್ರಾಮಗಳಲ್ಲಿ  ಕಠಿಣ ಕ್ರಮ ಕೈಗೊಳ್ಳಿ

08:27 PM May 23, 2021 | Team Udayavani |

ತುಮಕೂರು: ಕೊರೊನಾ ಸೋಂಕಿತರು ಈಗ ಹಳ್ಳಿಗಳಲ್ಲಿ ಹೆಚ್ಚು ಕಂಡು ಬರುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ನಿಗಾವಹಿಸಿ ಗ್ರಾಮಗಳು ಕೊರೊನಾ ಬಾಧಿತಪ್ರದೇಶಗಳಾಗದಂತೆ ಸೋಂಕಿನ ಸಂಪೂರ್ಣ ನಿಯಂತ್ರಣಕ್ಕೆ ಕಟ್ಟುನಿಟ್ಟಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಖಡಕ್‌ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ಮೂಲಕ ಸಭೆ ನಡೆಸಿ ಮಾತನಾಡಿದ ಅವರು, ಸೋಂಕುಪತ್ತೆಯಾಗಿರುವ ಗ್ರಾಮಗಳಲ್ಲಿ ಸೋಂಕಿನ ನಿಯಂತ್ರಣಕ್ಕೆಗರಿಷ್ಠಮುನ್ನೆಚ್ಚರಿಕಾ ಕ್ರಮ ಅನುಸರಿಸಬೇಕು.

ಸೋಂಕಿತರನ್ನುಕಡ್ಡಾಯವಾಗಿ ಕೊರೊನಾ ಆರೈಕೆಕೇಂದ್ರಕ್ಕೆ ಸ್ಥಳಾಂತರಿಸಬೇಕು. ಕೊರೊನಾ ಆರೈಕೆ ಕೇಂದ್ರಕ್ಕೆ ಬರಲುಹಿಂದೇಟು ಹಾಕುವ ಸೋಂಕಿತರಿಗೆ ಆಯಾ ಸ್ಥಳೀಯ ಜನಪ್ರತಿನಿಧಿಗಳು ಅವರಿಗೆ ಮನವರಿಕೆ ಮಾಡಿ ಆರೈಕೆಕೇಂದ್ರಕ್ಕೆ ಸ್ಥಳಾಂತರಿಸಲು ಹೆಚ್ಚು ಜವಾಬ್ದಾರಿ ವಹಿಸಿಕಾರ್ಯನಿರ್ವಹಿಸಬೇಕು ಎಂದರು.ಹೆಚ್ಚು ಪ್ರಕರಣಗಳಿರುವ ಗ್ರಾಮ ಲಾಕ್‌ಡೌನ್‌ಮಾಡಿ,ಸಾರ್ವಜನಿಕರ ಅನಗತ್ಯ ಸಂಚಾರಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು.

ಈಗಾಗಲೇ ನಿಗದಿಯಾಗಿರುವಮದುವೆ ನಡೆಯಲು ಅನುಮತಿ ನೀಡಿ, ಹೊಸಮದುವೆ ನಡೆಯಲು ಅವಕಾಶ ಮಾಡಿಕೊಡಬೇಡಿ.ಪ್ರತಿ ಕೊರೊನಾ ಆರೈಕೆ ಕೇಂದ್ರಗಳಲ್ಲಿಯೂ ಗುಣಮಟ್ಟದ ಆಹಾರ ವಿತರಣೆ ಮಾಡುವುದರ ಜೊತೆಗೆಉತ್ತಮ ನಿರ್ವಹಣೆ ಮಾಡಬೇಕು.

ಸೋಂಕಿತರಿಂದದೂರು ಕೇಳಿಬರದಂತೆ ಆರೈಕೆಕೇಂದ್ರಗಳನ್ನು ನಿರ್ವಹಿಸಬೇಕು ಎಂದು ಸೂಚಿಸಿದರು.ಕೂಪನ್‌ ನೀಡಿಪಡಿತರ ವಿತರಿಸಿ: ತಾಲೂಕುಮಟ್ಟದಅಧಿಕಾರಿಗಳು ಮತ್ತು ಆಯಾ ತಾಲೂಕಿನ, ಗ್ರಾಮದಜನಪ್ರತಿನಿಧಿಗಳೊಂದಿಗೆ ಕೊರೊನಾ ನಿರ್ವಹಣೆಗೆಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ ಮಾಹಿತಿಪಡೆದರು. ಅಗತ್ಯವಿದ್ದರೆ ಕೊರೊನಾ ಆರೈಕೆ ಕೇಂದ್ರತೆರೆಯಬೇಕು. ಹಳ್ಳಿಗಳಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ನೀಡಲಾಗುವಆಹಾರ ಪಡಿತರಕ್ಕೆ ಹೆಬ್ಬೆಟ್ಟು ಕಡ್ಡಾಯವಲ್ಲ.

Advertisement

ತಂಬಿಂಗ್‌ನಿಂದ ಸೋಂಕು ಹರಡುವ ಸಾಧ್ಯತೆಯಿದೆ. ಹಾಗಾಗಿದಿನಕ್ಕೆ 30 ಪಡಿತರದಾರರಿಗೆ ಕೂಪನ್‌ ನೀಡಿ ಪಡಿತರವಿತರಣೆಗೆ ಅಧಿಕಾರಿಗಳುಕ್ರಮವಹಿಸುವಂತೆ ಸೂಚನೆನೀಡಿದರು.ಜಿಪಂ ಸಿಇಒ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ,ಪಲ್ಸ್‌ ಆಕ್ಸಿಮೀಟರ್‌, ಸ್ಯಾನಿಟೈಸರ್‌, ಮಾಸ್ಕ್, ಮಾತ್ರೆಸೇರಿದಂತೆ ಮತ್ತಿತರ ಕೋವಿಡ್‌ ನಿರ್ವಹಣೆಗಾಗಿದಾನಿಗಳಿಂದ ನೆರವು ಬಂದಿದ್ದು. ಕೋವಿಡ್‌ ನಿರ್ವಹಣೆಗಾಗಿ ಪ್ರತಿ ಪಂಚಾಯತಿಗೆ ಸರ್ಕಾರ ನೀಡಿರುವತಲಾ 50,000 ರೂ.ಗಳನ್ನು ಕುಡಿಯುವ ನೀರುನಿರ್ವಹಣೆಗೆ ಬಳಸಿಕೊಳ್ಳಬೇಕೆಂದು ತಿಳಿಸಿದರು.ಸಂಸದ ಜಿ.ಎಸ್‌.ಬಸವರಾಜು, ಶಾಸಕ ಜ್ಯೋತಿಗಣೇಶ್‌, ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ್‌, ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ, ಅಪರಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಜಿಲ್ಲಾಶಸ್ತ್ರಚಿಕಿತ್ಸಕ ಡಾ. ಸುರೇಶ್‌ ಬಾಬು, ಪಾಲಿಕೆ ಆಯುಕ್ತೆರೇಣುಕಾ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next