Advertisement

ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಣೆ: ಸಿಎಂ ಬೊಮ್ಮಾಯಿ

12:25 AM Apr 06, 2022 | Team Udayavani |

ಬೆಂಗಳೂರು: ಮುಸಲ್ಮಾನ ಸಮುದಾಯದವರು ನಮಾಜ್‌ ಮಾಡಲು ಆಜಾನ್‌ ಬಳಕೆ ಮಾಡುವ ಬಗ್ಗೆ ಹೈಕೋರ್ಟ್‌ ಆದೇಶ ಇದೆ. ಈ ವಿಚಾರದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಜಾನ್‌ ಬಳಕೆಗೆ ನಿರ್ದಿಷ್ಟ ಡೆಸಿಬಲ್ಸ್‌ ಶಬ್ದ ಇರಬೇಕು ಎಂದು ಹೈಕೋರ್ಟ್‌ ಈ ಹಿಂದೆಯೇ ಆದೇಶ ನೀಡಿತ್ತು. ಆ ಆದೇಶ ಪಾಲಿಸಿಲ್ಲ ಅಂತ ಹೈಕೋರ್ಟ್‌ ಮತ್ತೊಂದು ಆದೇಶ ಮಾಡಿದೆ ಎಂದರು.

ಹೈಕೋರ್ಟ್‌ನ ಹಿಂದಿನ ಆದೇಶಗಳನ್ನು ಹಂತ ಹಂತವಾಗಿ ಪಾಲನೆಗೆ ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲರನ್ನೂ ವಿಶ್ವಾಸದಲ್ಲಿ ತೆಗೆದುಕೊಂಡು ಮಾಡುವ ಕೆಲಸ ಇದು. ಈ ವಿಚಾರದಲ್ಲಿ ಯಾವುದೇ ರೀತಿಯ ಬಲವಂತ ಮಾಡಬೇಕಾಗಿಲ್ಲ. ಹಲವು ಸಂಘಟನೆಗಳ ಜತೆ ಪೊಲೀಸ್‌ ಠಾಣೆ ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ ಸಭೆಗಳನ್ನೂ ಮಾಡಿದ್ದೇವೆ. ಮುಂದೆಯೂ ಈ ತರದ ಸಭೆಗಳನ್ನು ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ:ಡಾ| ಪ್ರಭಾಕರ ಭಟ್‌ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಹಾಸ್ಯಾಸ್ಪದ
ತೆಲಂಗಾಣದ ಐಟಿ ಬಿಟಿ ಸಚಿವ ಕೆ.ಟಿ. ರಾಮರಾವ್‌ ಬೆಂಗಳೂರನ್ನು ಹೈದರಾಬಾದ್‌ಗೆ ಕರ್ನಾಟಕವನ್ನು ತೆಲಂಗಾಣಕ್ಕೆ ಹೋಲಿಕೆ ಮಾಡಿರುವುದು ಹಾಸ್ಯಾಸ್ಪದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಹೈದರಾಬಾದ್‌ಗೆ ಉದ್ಯಮಿಗಳನ್ನು ಆಹ್ವಾನಿಸಿ ತೆಲಂಗಾಣ ಸಚಿವ ಕೆ.ಟಿ. ರಾಮರಾವ್‌ ಟ್ವೀಟ್‌ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಕೆ.ಟಿ. ರಾಮರಾವ್‌ಗೆ ಅವರ ಟ್ವೀಟ್‌ ಹಾಸ್ಯಾಸ್ಪದವಾಗಿದೆ. ಇಡೀ ಜಗತ್ತಿನ ಜನ ಬೆಂಗಳೂರಿಗೆ ಬರುತ್ತಿದ್ದಾರೆ. ಬರೀ ಭಾರತದ ಉದ್ಯಮಿಗಳಷ್ಟೇ ಬರುತ್ತಿಲ್ಲ. ಅತೀ ಹೆಚ್ಚು ಸ್ಟಾರ್ಟ್‌ ಅಪ್‌ ಗಳು ಬೆಂಗಳೂರಿನಲ್ಲಿವೆ. ಅತೀ ಹೆಚ್ಚು ಎಫ್ ಡಿಐ ಬೆಂಗಳೂರಿನಲ್ಲಿದೆ. ಕರ್ನಾಟಕದ ಕಳೆದ ಮೂರು ತ್ತೈಮಾಸಿಕಗಳ ಆರ್ಥಿಕತೆ ಹೆಚ್ಚಿನ ಮಟ್ಟದಲ್ಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next