ಮನುಷ್ಯನಿಗೆ ವಯಸ್ಸು ಸರಿದಂತೆ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಕಣ್ಣಿನ ದೃಷ್ಟಿ ಮಂದವಾಗುವುದು, ತಲೆನೋವು ಬರುವುದು ಮೊದಲಾದ ಸಮಸ್ಯೆಗಳ ಉಂಟಾಗುತ್ತದೆ. ಕಣ್ಣಿನ ದೋಷ ವರುಷ ಹೆಚ್ಚಾದಂತೆ ಸಮಸ್ಯೆಯೂ ಹೆಚ್ಚಾಗುತ್ತದೆ. ಅದಕ್ಕಾಗಿ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡರೆ ಸಮಸ್ಯೆ ತೀವ್ರತೆಯನ್ನು ಕಡಿಮೆಗೊಳಿಸಬಹುದು.
ಕಣ್ಣಿನ ವ್ಯಾಯಾಮಾ ಮಾಡುವುದರಿಂದ ಕಣ್ಣಿನ ದೋಷ ತಡೆಗಟ್ಟಬಹುದು. ಕಣ್ಣಿಗೆ ಸಂಬಂಧಿಸಿದ ವ್ಯಾಯಾಮ ಮಾಡುವುದರಿಂದ ಕಣ್ಣಿನ ದೋಷವನ್ನು ತಡೆಗಟ್ಟಬಹುದು. ಕಣ್ಣು ಹೆಚ್ಚು ಸೂಕ್ಷ್ಮವಾದ ಅಂಗ. ಆದ್ದರಿಂದ ಕಣ್ಣಿನ ಸಮಸ್ಯೆಯನ್ನು ತಡೆಗಟ್ಟಲು ಮೊದಲೇ ಎಚ್ಚೆತ್ತುಕೊಂಡು ಕಾಳಜಿ ವಹಿಸಬೇಕು.
ಕಾರಣಗಳು
Advertisement
ಕಣ್ಣಿನ ವ್ಯಾಯಾಮ
••••ರಂಜಿನಿ ಮಿತ್ತಡ್ಕ
Related Articles
ಕಣ್ಣಿನ ಸಮಸ್ಯೆಯು ವಯಸ್ಸು ಸರಿದಂತೆ ಉಂಟಾಗುವುದು ಸಾಮಾನ್ಯವಾದರೂ ಒತ್ತಡದ ಬದುಕು, ಡಿಜಿಟಲ್ ವಸ್ತಗಳ ಬಳಕೆಗಳಿಂದ ಸಮಸ್ಯೆ ಹೆಚ್ಚಾಗುತ್ತದೆ. ಹೆಚ್ಚು ಮೊಬೈಲ್, ಕಂಪ್ಯೂಟರ್ ಬಳಕೆ ಮಾಡುವುದುರಿಂದ, ಬೆಳಕಿಲ್ಲದೆ ಡಿಜಿಟಲ್ ವಸ್ತುಗಳನ್ನು ಬಳಕೆ ಮಾಡುವುದರಿಂದ ಸಮಸ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಅನುವಂಶಿಕವಾಗಿಯೂ ಕಣ್ಣಿನ ದೋಷದ ಸಮಸ್ಯೆ ಕಾಣಿಸುತ್ತದೆ.
ಆರೋಗ್ಯಕರ ಆಹಾರ ಸೇವನೆ
Advertisement
ತಿನ್ನುವ ಆಹಾರದಲ್ಲಿಯೂ ಕಣ್ಣಿಗೆ ಬೇಕಾದ ವಿಟಮಿನ್ ಸಿಗದೆ ಇದ್ದರೂ ಕಣ್ಣಿನ ದೋಷ ಉಂಟಾಗುತ್ತದೆ. ಕಣ್ಣಿನ ದೋಷವನ್ನು ತಡೆಗಟ್ಟಲು 50 ವರ್ಷ ಮೇಲ್ಪಟ್ಟವರು ತಿನ್ನುವ ಆಹಾರದ ಕುರಿತು ಗಮನ ಹರಿಸಬೇಕು. ಹೆಚ್ಚು ವಿಟಮಿನ್‌ಯುಕ್ತ ಆಹಾರ ಸೇವನೆಯಿಂದ ಕಣ್ಣಿನ ದೋಷ ಕಡಿಮೆಯಾಗಬಹುದು. ಒತ್ತಡದ ಬದುಕಿನಿಂದ ಹೊರಬಂದು ಹೆಚ್ಚು ಗಾಳಿ, ಬೆಳಕು ಬರುವಲ್ಲಿ ಕುಳಿತುಕೊಳ್ಳಬೇಕು. ಜತೆಗೆ ಡಿಜಿಟಲ್ ವಸ್ತಗಳ ಬಳಕೆ ಮಾಡುವಾಗ ಬೆಳಕಿರುವಲ್ಲಿ ಕುಳಿತು ಬಳಕೆ ಮಾಡಬೇಕು. 50ರ ಬಳಿಕ ಕಣ್ಣಿನ ಪರೀಕ್ಷೆ ಮಾಡುತ್ತಿರಬೇಕು. ಕಣ್ಣಿನ ಸಮಸ್ಯೆಯ ಕುರಿತು ತಿಳಿದುಕೊಂಡು ವೈದ್ಯರ ಸಲಹೆಗಳನ್ನು ಪಾಲಿಸಬೇಕು.