Advertisement

ದಿಲ್ಲಿ ಚುನಾವಣೆ ಭಾರತ-ಪಾಕ್ ಗೆ ಹೋಲಿಸಿದ್ದ ಕಪಿಲ್ ಟ್ವೀಟ್ ತೆಗೆದು ಹಾಕಿ: ಟ್ವೀಟರ್ ಗೆ ಆಯೋಗ

10:03 AM Jan 25, 2020 | Nagendra Trasi |

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಹೋರಾಟ ಎಂದು ಟ್ವೀಟ್ ಮಾಡುವ ಮೂಲಕ ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ವಿವಾದಕ್ಕೊಳಗಾಗಿದ್ದರು. ಇದೀಗ ಕಪಿಲ್ ಟ್ವೀಟ್ ಅನ್ನು ತೆಗೆಯುವಂತೆ ಚುನಾವಣಾ ಆಯೋಗ ಟ್ವೀಟರ್ ಸಂಸ್ಥೆಗೆ ಸೂಚನೆ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

ಗುರುವಾರ ಕಪಿಲ್ ಮಿಶ್ರಾ ಪೋಸ್ಟ್ ಮಾಡಿರುವ ಟ್ವೀಟ್ ಅನ್ನು ತೆಗೆಯುವಂತೆ ಚುನಾವಣಾ ಆಯೋಗದ ಮುಖ್ಯ ಅಧಿಕಾರಿ ಟ್ವೀಟರ್ ಗೆ ಮನವಿ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಟ್ವೀಟ್ ಮಾಡಿದ್ದ ಕಪಿಲ್ ಮಿಶ್ರಾಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ. ಮಿಶ್ರಾ ಮೊಡೆಲ್ ನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next