Advertisement

ದೀರ್ಘ‌ಕಾಲಿನ ಕಾಯಿಲೆ ರೋಗಿಗಳ ಬಗ್ಗೆ ನಿಗಾವಹಿಸಿ

01:48 PM May 26, 2021 | Team Udayavani |

ಮೈಸೂರು: ದೀರ್ಘ‌ಕಾಲಿನ ಕಾಯಿಲೆಗಳು(ಕೋಮಾರ್ಬಿಡಿಟಿಸ್‌) ಇರುವವರಲ್ಲಿ ರೋಗ ನಿರೋಧಕ ಶಕ್ತಿಕಡಿಮೆ ಇದ್ದು, ಇಂತಹವರಲ್ಲಿ ಬ್ಲ್ಯಾಕ್‌ ಫ‌ಂಗಸ್‌ ಬರುವಸಾಧ್ಯತೆ ಹೆಚ್ಚು. ಹಾಗಾಗಿ ಕೋಮಾರ್ಬಿಡಿಟಿಸ್‌ ಇರುವವರಮೇಲೆ ಹೆಚ್ಚು ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.

Advertisement

ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದಅವರು, ಜಿÇÉೆಯಲ್ಲಿ 60 ವರ್ಷ ಮೇಲ್ಪಟ್ಟ2.4 ಲಕ್ಷ ಜನರಿದ್ದಾರೆ. ಇವರಲ್ಲಿ 64,473ಜನರಿಗೆ ಹೈಪರ್‌ಟೆನ್ಸನ್‌,75,056 ಜನರಿಗೆಡಯಾಬಿಟಿಸ್‌, 10,226 ಜನರಿಗೆಹೃದಯ ಸಂಬಂಧಿ ಕಾಯಿಲೆ, 906 ಜನರಿಗೆ ಕ್ಯಾನ್ಸರ್‌, 546ಜನರಿಗೆ ಕಿಡ್ನಿ ಕಾಯಿಲೆ,162 ಜನರಿಗೆ ಡಯಾಲಿಸಿಸ್‌ ಆಗುತ್ತಿದೆ.

ಮನೆ ಮನೆ ಸಮೀಕ್ಷೆ ನಡೆಸುವಾಗ ಈ ಕೋಮಾರ್ಬಿಡಿಟಿಸ್‌ಇರುವವರ ಬಗ್ಗೆ ನಿಗಾ ವಹಿಸಬೇಕು ಎಂದು ಹೇಳಿದರು.ಬೆಂಗಳೂರಿನಲ್ಲಿ ವರ್ಷಕೆ R 10 ರಿಂದ 20 ಪ್ರಕರಣಗಳುದಾಖಲಾಗುತ್ತಿದ್ದವು. ಆದರೆ ಇಂದು ದಿನಕ್ಕೆ 10 ರಿಂದ 20ಪ್ರಕರಣಗಳು ದಾಖಲಾಗುತ್ತಿವೆ. ಹಾಗೆಯೇ ಮೈಸೂರಿನಲ್ಲಿಯೂ ಸಹ 21 ಪ್ರಕರಣಗಳು ದಾಖಲಾಗಿವೆ. ಆದ್ದರಿಂದಬ್ಲ್ಯಾಕ್‌ ಫ‌ಂಗಸ್‌ ಲಕ್ಷಣಗಳು ಕಾಣಿಸಿದ ಕೂಡಲೇ ಆಸ್ಪತ್ರೆಗೆಬಂದು ಪರೀಕ್ಷಿಸಿಕೊಳ್ಳಲು ಹಾಗೂ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವಂತೆ ಹೇಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.ಬ್ಲ್ಯಾಕ್‌  ಫಂಗಸ್  ನಿರ್ಲಕ್ಷಿಸಿದರೆ ಇದಕ್ಕಾಗಿ ಹೆಚ್ಚು ಹಣ ವ್ಯಯಿಸಬೇಕಾಗುತ್ತದೆ.

ಹೀಗಾಗಿ ಜನರಿಗೆ ಇದರ ಬಗ್ಗೆ ಜಾಗೃತಿಮೂಡಿಸಿ. ತಾಲೂಕುಗಳಲ್ಲಿರುವ ವೈದ್ಯರಿಗೆ ಬ್ಲ್ಯಾಕ್‌ ಫಂಗಸ್‌ಗೆನೀಡುವ ಚಿಕಿತ್ಸಾ ವಿಧಾನದ ಬಗ್ಗೆ ತಿಳಿಸಲು ಕೆ.ಆರ್‌.ಆಸ್ಪತ್ರೆವೈದ್ಯರಿಂದ ತರಬೇತಿ ಕೊಡಿಸಲಾಗುತ್ತದೆ ಎಂದು ತಾಲೂಕುವೈದ್ಯರಿಗೆ ಹೇಳಿದರು.ಮನೆ ಮನೆ ಸಮೀಕ್ಷೆ ನಡೆಸುವ ಆಶಾ ಹಾಗೂ ಅಂಗನವಾಡಿಕಾರ್ಯಕರ್ತೆಯರಲ್ಲಿ ಕಡ್ಡಾಯವಾಗಿ ಆಕ್ಸಿಮೀಟರ್‌ ಇರಬೇಕು.ಅವರ ಬಳಿ ಇಲ್ಲದಿದ್ದರೆ ತಿಳಿಸಿದರೆ ಅವರಿಗೆ ಸಿಎಸ್‌ಆರ್‌ ಫಂಡ್‌ಯೋಜನೆಯಡಿ ಆಕ್ಸಿಮೀಟರ್‌ ಕೊಡಿಸಿಕೊಡಲಾಗುತ್ತದೆ.

ಬ್ಲಾಕ್‌  ಫಂಗಸ್‌ನಿಂದ ಗುಣಮುಖರಾದವರು ಔಷಧಿಗಳನ್ನುಸರಿಯಾಗಿ ಪಡೆದುಕೊಳ್ಳುತ್ತಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಪ್ರತಿ ತಾಲೂಕಿನಲ್ಲಿ ಒಂದು ಸಾವಿರಕ್ಕೂ ಹೆಚ್ಚುಕಿಟ್‌ ಇದ್ದು, ಇದನ್ನು ಕೋವಿಡ್‌ ಪರೀಕ್ಷೆ ಮಾಡಿಸಲುಬಳಸಿಕೊಳ್ಳಬೇಕು ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next