Advertisement

ಕೆಲಸದೊಂದಿಗೆ ಆರೋಗ್ಯ ಕಾಳಜಿ ವಹಿಸಿ: ತಾ.ಪಂ. ಇಒ ರಾಮಣ್ಣ ದೊಡ್ಡಮನಿ

02:44 PM Jun 09, 2022 | Team Udayavani |

ಕುಕನೂರು: ತಾಲೂಕಿನ ಮಂಗಳೂರು ಗ್ರಾಪಂನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರಿಯ ಉದ್ಯೋಗ ಖಾತ್ರಿ ಯೋಜನೆ ನಾಲಾ ಸುಧಾರಣ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.

Advertisement

ಈ ಸಂದರ್ಭದಲ್ಲಿ ತಾಪಂ ಇಒ ರಾಮಣ್ಣ ದೊಡ್ಡಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಆರೋಗ್ಯ ಉತ್ತಮವಾಗಿದ್ದರೆ ದುಡಿಯಲು ಸಮರ್ಥನಾಗಿರುತ್ತಾನೆ. ಆ ನಿಟ್ಟಿನಲ್ಲಿ ಕಾರ್ಮಿಕನ ಆರೋಗ್ಯವು ಉಣಮಟ್ಟದ್ದಾಗಿರಲಿ ಎನ್ನುವ ಉದ್ದೇಶದಿಂದ ಸರಕಾರ ನರೇಗಾದಡಿ ದುಡಿಯುವ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿದೆ. ಇದರ ಸದ್ಬಳಕೆ ಹೊಣೆ ಕಾರ್ಮಿಕರ ಮೇಲಿದೆ. ದುಡಿಯುವ ಕಾರ್ಮಿಕರು ಕೆಲಸಕ್ಕೆ ಮಾತ್ರವಲ್ಲ ಅವರ ಆರೋಗ್ಯದ ಸ್ಥಿತಿಯನ್ನು ಗ್ರಾಪಂ ಗಮನಿಸಿ ಕಾಮಗಾರಿ ಸ್ಥಳದಲ್ಲೆ ಚಿಕಿತ್ಸೆ ನೀಡಲಿದೆ. ಕಾಯಕ ಬಂಧುಗಳು ಈ ಬಗ್ಗೆ ತಮ್ಮ ಗ್ರಾಮಗಳ ವ್ಯಾಪ್ತಿಯ ಜನರಲ್ಲಿ ಜಾಗೃತಿ ಮೂಡಿಸಬೇಕು. ಆಯುಷ್ಮಾನ್‌ ಭಾರತ, ಆರೋಗ್ಯ ಕರ್ನಾಟಕ, ವಿಮೆ ಯೋಜನೆಗಳ ಬಗ್ಗೆ ತಿಳಿಸಬೇಕು ಎಂದರು.

ಸಹಾಯಕ ನಿರ್ದೇಶಕ ವೆಂಕಟೇಶ ವಂದಾಲ್‌ ಮಾತನಾಡಿ, ನರೇಗದಡಿ ರೈತ ಕೂಲಿ ಕಾರ್ಮಿಕರು ನುಗ್ಗೆ, ಪೇರಲ, ಲಿಂಬು, ಹುಣಸೆ, ಮಾವು, ಬಾಳೆ ಸೇರಿದಂತೆ ಇನ್ನಿತರ ಸಸಿಗಳನ್ನು ನಾಟಿ ಮಾಡಬೇಕು ಎಂದರು. ಗ್ರಾಪಂ ಮೂಲಕ ನೀಡುವ 319 ರೂ. ಕೂಲಿ ಹಣ ಪಡೆದು ಆರ್ಥಿಕ ಸುಧಾರಣೆ ಜತೆಗೆ ವೈಯಕ್ತಿಕ ಅಭಿವೃದ್ಧಿಗೆ ಒತ್ತುಕೊಡಬೇಕು. ಅರ್ಹ ಫಲಾನುಭವಿಗಳು ಎಬಿಎಆರ್‌ಕೆ ಕಾರ್ಡ್‌ ಮಾಡಿಸಿ ಸರಕಾರಿ ಆಸ್ಪತ್ರೆಯಲ್ಲಿ ಸಿಗುವ 5 ಲಕ್ಷ ರೂ. ವರೆಗೂ ಸೌಲಭ್ಯ ಪಡೆಯಿರಿ, ಪಿಎಂಎಸ್‌ಬಿವೈ, ಪಿಎಂಜೆಜೆಬಿವೈ, ಅಟಲ್‌ ಪೆನ್ಸಿನ್‌ ಯೋಜನೆಯ ಲಾಭ ಪಡೆಯಿರಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಎಬಿಎಆರ್‌ಕೆ, ಅಂಗವಿಕಲರಿಗೆ ವಿಶೇಷ ಜಾಬ್‌ ಕಾರ್ಡ್‌ ವಿತರಿಸಿದರು. ಕಾರ್ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷ ಗ್ರಾಪಂ ಸದಸ್ಯರು, ಪಿಡಿಒ ವೀರೇಶ, ಆರೋಗ್ಯ ಇಲಾಖೆಯವರು, ತಾಂತ್ರಿ ಸಿಬ್ಬಂದಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next