Advertisement

ಶಿಕ್ಷಣದ ಜತೆ ಕೌಶಲ್ಯ ರೂಢಿಸಿಕೊಳ್ಳಿ 

01:14 PM Dec 29, 2017 | Team Udayavani |

ಮೈಸೂರು: ವಿದ್ಯಾರ್ಥಿಗಳು ಪ್ರಸ್ತುತ ಸಮಾಜವನ್ನು ಅರ್ಥಮಾಡಿಕೊಂಡು ಶೈಕ್ಷಣಿಕ ಜಾnನದ ಜತೆಗೆ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಸಾಹಿತಿ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್‌ ಹೇಳಿದರು.

Advertisement

ಸದ್ವಿದ್ಯಾ ಪ್ರೌಢಶಾಲೆ ಹಾಗೂ ಸದ್ವಿದ್ಯಾ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಿಂದ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪೋಷಕರ ದಿನಾಚರಣೆ ಹಾಗೂ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಮನುಸ್ಮತಿಯನ್ನು ನೋಡದವರಿಂದ ಮಾತ್ರ ಮನುವಾದದ ಹೆಸರಿನಲ್ಲಿ ನಿರಾಕರಣೆ ಮಾಡಲಾಗುತ್ತದೆ. ಆದರೆ, ಮನುಸ್ಮತಿಯಲ್ಲಿರುವ ಒಳ್ಳೆಯ ವಿಚಾರಗಳನ್ನು ಅನುಸರಿಸುವ ಮೂಲಕ ನಮ್ಮಲ್ಲಿರುವ ಆಯುರ್ವೇದ, ಜೋತಿಷ್ಯ ಜಾnನವನ್ನು ವಿಶ್ವವೇ ಮೆಚ್ಚುತ್ತಿದ್ದರೂ ನಮ್ಮಲ್ಲಿ ನಿರ್ಲಕ್ಷ್ಯ ಮನೋಭಾವ ಹೆಚ್ಚಿದೆ.

ಇಂದಿನ ಕಲುಷಿತ ರಾಜಕಾರಣದಲ್ಲಿ ಜನಸೇವೆ ಮುಖ್ಯವಲ್ಲದ ಕಾರಣ ಜನರು ದಿಕ್ಕು ತಪ್ಪುತ್ತಿದ್ದು, ಸಾಹಿತ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಜಾರಿ ರಾಜಕಾರಣ ನಡೆಯುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಸಮಾಜವನ್ನು ಅರ್ಥ ಮಾಡಿಕೊಂಡು, ನಿರ್ದಿಷ್ಟ ಗುರಿಯೊಂದಿಗೆ ಸತತ ಪ್ರಯತ್ನದೊಂದಿಗೆ ಶಿಕ್ಷಣದ ಜಾnನದ ಜತೆಗೆ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.

ಕಾರ್ಯಕ್ರಮದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಲ್ಲದೆ ಕಾರ್ಯಕ್ರಮದ ಅಂಗವಾಗಿ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

Advertisement

ಸದ್ವಿದ್ಯಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್‌.ವಿಜಯಶೇಖರ್‌, ಗೌರವ ಕಾರ್ಯದರ್ಶಿ ಎಂ.ಡಿ.ಗೋಪಿನಾಥ್‌, ಆಡಳಿತ ಮಂಡಳಿ ಸದಸ್ಯ ಡಾ.ಗುರುರಾಜ, ಪೊ›.ಪಿ.ವಿ.ನರಹರಿ, ಪೊ›.ಕೆ.ಎಸ್‌.ಹಿರಿಯಣ್ಣ, ನಾಗಲಕ್ಷಿ, ಅಮಿತಾ, ಅಜುಂಫಾತಿಮಾ, ಹೇಮಲತಾ, ಶಿವರಂಜನಿ, ರಾಜೇಶ್‌, ರಾಮಚಂದ್ರಭಟ್‌, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ, ಪ್ರಬಾರ ಮುಖ್ಯ ಶಿಕ್ಷಕ ಸಿ.ಎನ್‌.ಬಾಲಕೃಷ್ಣ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next