Advertisement

ಸೌಲಭ್ಯ ಪಡೆದು ಅಭಿವೃದ್ಧಿ ಹೊಂದಿ

12:33 PM Jul 07, 2017 | Team Udayavani |

ಶಹಾಪುರ: ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಪ್ರದೇಶದ ರೈತರಿಗೆ ಯೂನಿಯನ್‌ ಬ್ಯಾಂಕ್‌ ಸಮರ್ಪಕ ಸಾಲ ಸೌಲಭ್ಯ ನೀಡಿದ್ದು, ರೈತರು ಸದುಪಯೋಗ ಪಡೆಯಬೇಕು ಎಂದು ಬ್ಯಾಂಕ್‌ ವ್ಯವಸ್ಥಾಪಕ ಜಹೀರ್‌ ಪಾಷಾ ಬುರೇಶಿ ಹೇಳಿದರು.

Advertisement

ಯೂನಿಯನ್‌ ಬ್ಯಾಂಕ್‌ ವ್ಯವಸ್ಥಾಪಕ ಜಹೀರ ಪಾಷಾ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಗ್ರಾಮದ ರೈತರು ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಸಮರ್ಪಕ ಸಾಲ ವಿತರಣೆಗೆ ಯೂನಿಯನ್‌ ಬ್ಯಾಂಕ್‌ ಸದಾ ಸಿದ್ಧವಿದ್ದು, ರೈತರು ಸಾಲ ಪಡೆದುಕೊಂಡು ಸರಿಯಾದ ಸಮಯದಲ್ಲಿ ಪಾವತಿ ಮಾಡಬೇಕು. ಸಾಲ ಸೌಲಭ್ಯದಿಂದ ಕೃಷಿ ಚಟುವಟಿಕೆಗೆ ಬೇಕಾದ ಕಾರ್ಯಗಳಿಗೆ ಉಪಯೋಗ ಮಾಡಿಕೊಂಡು ನಂತರ ಬಂದ ಲಾಭದಿಂದ ಸಾಲ
ಮರು ಪಾವತಿ ಮಾಡಬೇಕು. ಈ ಮೂಲಕ ನಿರಂತರ ಸಂಪರ್ಕದಲ್ಲಿದ್ದು, ಆರ್ಥಿಕ ವೃತ್ತಿ ಅಭಿವೃದ್ಧಿ ಪಡಿಸಿಕೊಂಡಲ್ಲಿ ಬ್ಯಾಂಕಿನವರ ಜೊತೆ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ ಎಂದರು.

ನಗರದ ಎಸ್‌ ಬ್ಯಾಂಕ್‌ ವ್ಯವಸ್ಥಾಪಕ ಪವನಕುಮಾರ ದಿಗ್ಗಾವಿ ಮಾತನಾಡಿ, ರೈತರು ಶ್ರಮ ಜೀವಿಗಳು. ಯಾವುದೇ ಬ್ಯಾಂಕ್‌ನಿಂದ ಬೆಳೆ ಸಾಲ ಮತ್ತು ಇನ್ನಿತರ ಸಾಲ ಪಡೆಯಬೇಕಾದರೆ ನೇರವಾಗಿ ಬ್ಯಾಂಕ್‌ ಸಿಬ್ಬಂದಿ ಮತ್ತು ಶಾಖೆಯ ವ್ಯವಸ್ಥಾಪಕರೊಂದಿಗೆ ಮಾತನಾಡಿ, ದಲ್ಲಾಳಿಗಳಿಂದ ದೂರವಿರಿ ಎಂದು ಸಲಹೆ ನೀಡಿದರು. ಸಂಗನಗೌಡ ಪಾಟೀಲ್‌ಅಧ್ಯಕ್ಷತೆ ವಹಿಸಿದ್ದರು. ಅಮೂಲ್‌
ಅಮೃತಕರ್‌, ರಂಗಪ್ಪ ನಾಯಕ ದೊರೆ, ಶರಬಣ್ಣಗೌಡ, ರಾಘವೇಂದ್ರ ಹಾರಣಗೇರಾ, ಬಸವರಾಜ ಸಿನ್ನೂರ, ಶಾಂತಗೌಡ, ಮಾಣಿಕರಾಯ ದೊರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next