ತುಮಕೂರು: ಕ್ಷೇತ್ರದಲ್ಲಿ ಕೊರೊನಾ ಸೋಂಕುತೀವ್ರವಾಗುತ್ತಿದೆ. ಆದರೆ, ಇಲ್ಲಿಯ ಪ್ರಾಥಮಿಕಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರತೆ ಇದೆ.ಇದನ್ನು ನೀಗಿಸಿ ಔಷಧಗಳ ಲಭ್ಯತೆ ಹೆಚ್ಚಿಸಬೇಕುಎಂದು ಅಧಿಕಾರಿಗಳಿಗೆ ಶಾಸಕ ಡಿ.ಸಿ.ಗೌರಿಶಂಕರ್ ಸೂಚಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚುಸೋಂಕಿತರು ಹೋಂ ಕ್ವಾರಂಟೈನ್‌ನಲ್ಲಿದ್ದು ಅವರನ್ನುಭೇಟಿ ಮಾಡಿ ಸೋಂಕಿತರಿಗೆ ಧೈರ್ಯ ತುಂಬಿ ನಂತರಮಾತನಾಡಿದ ಅವರು, ಗ್ರಾಮಾಂತರ ಕ್ಷೇತ್ರದಹೊನ್ನುಡಿಕೆ, ನಾಗವಲ್ಲಿ, ಹೆಬ್ಬೂರು ಹಾಗೂ ಗೂಳೂರುವ್ಯಾಪ್ತಿಯಲ್ಲಿ ಕೊರೊನಾ ಹೆಚ್ಚಿದೆ. ಇಲ್ಲಿರುವಆಸ್ಪತ್ರೆಗಳಿಗೂ ಸೌಲಭ್ಯಗಳ ಕೊರತೆ ಇದೆ. ವೈದ್ಯರ ಸಭೆನಡೆಸಿದಾಗ ಆಸ್ಪತ್ರೆಯ ಕುಂದು ಕೊರತೆಗಳು ತಿಳಿದುಬಂದಿದೆ.
ಜತೆಗೆ ಕೊರೊನಾ ಹೆಚ್ಚಿರುವ ಪ್ರದೇಶದಲ್ಲಿಕೋವಿಡ್ ಬಗ್ಗೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಪರಿಶೀಲನೆ ನಡೆಸಿರುವುದಾಗಿ ತಿಳಿದರು.ತಮ್ಮ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಆರೋಗ್ಯಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ಜಿಲ್ಲಾಸ್ಪತ್ರೆಗೆ ಭೇಟಿನೀಡಿ ವೈದ್ಯರ ಸಭೆ ನಡೆಸಿ ಸಮಸ್ಯೆ ಆಲಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾರೋಗಿಗಳ ಸಂಖ್ಯೆ, ಲಭ್ಯವಿರುವ ಐಸಿಯು,ಔಷಧದಾಸ್ತಾನು, ಆ್ಯಂಬುಲೆನ್ಸ್ ಲಭ್ಯತೆ, ಇತ್ಯಾದಿ ವಿಷಯಗಳಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸುರೇಶ್ ಬಾಬು, ಜಿಲ್ಲಾಆರೋಗ್ಯಾಧಿಕಾರಿ ಎಂ.ಬಿ.ನಾಗೇಂದ್ರಪ್ಪ ಅವರಿಂದಮಾಹಿತಿ ಪಡೆದರು.
ಜಿಲ್ಲಾಧಿಕಾರಿ ಭೇಟಿ: ಜಿಲ್ಲಾಸ್ಪತ್ರೆ ಭೇಟಿ ಬಳಿಕ ಶಾಸಕಡಿ ಸಿ ಗೌರಿಶಂಕರ್ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆಭೇಟಿ ನೀಡಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲಅವರೊಂದಿಗೆ ಮಾತನಾಡಿ ಕೋಡಿಮುದ್ದನಹಳ್ಳಿಯಲ್ಲಿ ಕೋವಿಡ್ ಸೆಂಟರ್ ತೆರೆಯುವ ಬಗ್ಗೆ ಹಾಗೂ ಅಲ್ಲಿಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿ ಶೀಘ್ರವಾಗಿಕೋವಿಡ್ ಸೆಂಟರ್ ತೆರೆಯುವಂತೆ ಮನವಿಮಾಡಿದರು. ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಇದೆ. ಬೆಡ್‌ಗಳಕೊರತೆ ಇದ್ದು, ಜನಸಾಮಾನ್ಯರಿಗೆತೊಂದರೆಯಾಗುತ್ತಿದೆ. ಈ ಸಮಸ್ಯೆಗಳನ್ನು ಶೀಘ್ರವಾಗಿಬಗೆಹರಿಸುವಂತೆ ತಿಳಿಸಿದರು. ತಾಲೂಕು ಜೆಡಿಎಸ್‌ಅಧ್ಯಕ್ಷ ರಾಮಚಂದ್ರಪ್ಪ, ಹೊನ್ನುಡಿಕೆ ಜಿಪಂ ಉಸ್ತುವಾರಿಪಾಲನೇತ್ರಯ್ಯ, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಹಾಲನೂರು ಅನಂತಕುಮಾರ್ ಇದ್ದರು.