Advertisement

ಜಾನುವಾರು ಹತ್ಯೆ ತಡೆಗೆ ಕ್ರಮ ಕೈಗೊಳ್ಳಿ  : ಜಿಲ್ಲಾಧಿಕಾರಿ ಆರ್‌.ಗಿರೀಶ್‌

03:45 PM Feb 05, 2021 | Team Udayavani |

ಹಾಸನ: ಜಾನುವಾರು ಹತ್ಯೆ ತಡೆಯುವ ಕಾನೂನು ಪಾಲನೆ ಮಾಡುವುದರ ಜೊತೆಗೆ ಅಕ್ರಮ ಸಾಗಾಣಿಕೆ ತಡೆಗೆ ಹೆಚ್ಚು ನಿಗಾವಹಿಸುವಂತೆ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಾಣಿ ದಯಾ ಸಂಘದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನುವಾರು ಸಾಗಾಣಿಕೆಯನ್ನು ನಿರ್ಬಂಧಿಸಿ ಅನಧಿಕೃತ ಸಾಗಾಣಿಕೆಯಾಗದಂತೆ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಪ್ರಾಣಿ ದಯಾ ಸಂಘಕ್ಕೆ ಸದಸ್ಯರನ್ನು ನೋಂದಣಿ ಮಾಡಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದರು.

ಅರಿವು ಮೂಡಿಸಿ: ದನಗಳ ಜಾತ್ರೆ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕರಲ್ಲಿ ಜಾನುವಾರು ಹತ್ಯೆಯ ಬಗ್ಗೆ ಅರಿವು ಮೂಡಿಸಿ ಎಂದು ಜಿಲ್ಲಾಧಿಕಾರಿ, ತಾಪಂ, ಗ್ರಾಪಂ ಮಟ್ಟದಲ್ಲಿ ರೈತರಿಗೂ ಜಾನುವಾರು ಹತ್ಯೆ ತಡೆಯ ಬಗ್ಗೆ ಅರಿವು ಮೂಡಿಸಬೇಕು. ಗೋಶಾಲೆಗಳಿಗೆ ಬರುವ ಯಾವುದೇ ಪ್ರಾಣಿಗಳನ್ನು ತಿರಸ್ಕರಿಸದೆ ಅವುಗಳನ್ನು ಸೇರ್ಪಡೆ ಮಾಡಿಕೊಂಡು ಅವುಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ವಿವರಿಸಿದರು.

ಗೋ ಸೇವೆ ಮಾಡಲು ಚರ್ಚೆ: ಅರಸೀಕೆರೆಯಲ್ಲಿರುವ ಕಸ್ತೂರ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಸಂಸ್ಥೆಯಲ್ಲಿ 218 ರಾಸುಗಳಿದ್ದು, ಅವುಗಳನ್ನು ಈಗಾಗಲೇ ಪೋಷಣೆ ಮಾಡಲಾಗುತ್ತಿದೆ. ಹಾಗಾಗಿ ಪಿಂಜರಾಪೋಲೋ ಮಾದರಿಯ ಗೋಶಾಲೆಗೆ ಸರ್ಕಾರವು ನೀಡುವ ಸಹಾಯಾನುದಾನ ಯೋಜನೆಯಡಿ ಗೋಶಾಲೆಯನ್ನು ಸೇರಿಸಿ ಗೋ ಸೇವೆ ಮಾಡಲು ಸಭೆಯಲ್ಲಿ ಚರ್ಚಿಸಲಾಯಿತು.

ಇದನ್ನೂ ಓದಿ :ನೌಕರಿ ಕಾಯಂಗೆ ವಿಕಲಚೇತನರ ಒಕ್ಕೂಟ ಆಗ್ರಹ

Advertisement

ನಾಯಿಗಳ ಹಾವಳಿ ಹೆಚ್ಚಳ: ಇದೇವೇಳೆ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಸನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ಪ್ರಾಣಿ ದಯಾ ಸಂಘದ ಸದಸ್ಯರು ಸಭೆಯ ಸಗಮನಕ್ಕೆ ತಂದರು.

ಸಭೆಯಲ್ಲಿ ಎಸ್ಪಿ ಶ್ರೀನಿವಾಸ್‌ಗೌಡ,ಎಡೀಸಿ ಕವಿತಾ ರಾಜಾರಾಂ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ರಮೇಶ್‌, ಪ್ರಾಣಿ ದಯಾ ಸಂಘದ ನಿರ್ವಹಣಾ ಸಮಿತಿ ಪ್ರತಿನಿಧಿಗಳಾದ ಪಾರಸ್‌ ಜೈನ್‌, ಮೋಹನ್‌, ವೆಂಕಟೇಶ್‌, ಪ್ರೀತಂ, ನಾಗೇಂದ್ರ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next