ಕಲಬುರಗಿ: ನಗರದಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಸಾವಿಗೀಡಾಗಿದ್ದು, ಆತ ಅಪಘಾತದಲ್ಲಿಸಾವಿಗೀಡಾಗಿಲ್ಲ ಕೊಲೆಯಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಪೊಲೀಸ್ ಭವನದ ಎದುರು ಪ್ರತಿಭಟನೆ ನಡೆಸಿ ಎಸ್‌ಪಿ ಶಶಿಕುಮಾರಗೆ ಮನವಿ ಸಲ್ಲಿಸಿದವು.
ನಗರದ ಸಂತ್ರಾಸವಾಡಿಯಲ್ಲಿ ಇತ್ತೀಚೆಗೆ ಮೆಹಬೂಬ ನಗರ ನಿವಾಸಿ ಮಹ್ಮದ ಜಹೀರುದ್ದಿನ್ ಅಬ್ದುಲ್ ಗಫೂರ(33) ಎನ್ನುವರು ಅಪಘಾತದಲ್ಲಿ ಸಾವಿಗೀಡಾಗಿದ್ದಾರೆಂದು ಪ್ರಕರಣ ದಾಖಲಾಗಿತ್ತು.
ಈ ಸಾವಿನಲ್ಲಿ ಸಂಶಯವಿದ್ದು ಇದೊಂದು ಕೊಲೆ ಪ್ರಕರಣವಾಗಿರುವುದರಿಂದ ಕೊಲೆ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಜಾಮಿಯತ್ ಬಾಗಬಾನ್, ಗುಲಬರ್ಗಾ ಮುಸ್ಲಿಂ ವೆಲ್‌ಫೇರ್ ಅಸೋಶಿಯೇಶನ್, ರೋಜಾ ವೆಲ್‌ಫೇರ್ ಅಸೋಸಿಯೇಶನ್, ಇತ್ತಿಯಾದೆ ಮಿಲ್ಲತ್ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಎಸ್‌ಪಿ ಎನ್.ಶಶಿಕುಮಾರರಿಗೆ ಮನವಿ ಸಲ್ಲಿಸಿ, ನಗರದ ಜನನಿಭಿಡ ಪ್ರದೇಶಗಳಲ್ಲಿ ಇತ್ತೀಚೆಯ ದಿನಗಳಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದ್ದು, ಅಪರಾಧ ತಡೆಗೆ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ನಗರದ ಪ್ರಮುಖ ಕಡೆ ಹಾಗೂ ನಗರದ ಹೊರವಲಯದಲ್ಲೂ ಸಿಸಿ ಟಿವಿಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಮಹ್ಮದ ಇಲಿಯಾಸ್ ಸೇಠ ಭಾಗಬಾನ, ಸೈಯ್ಯದಮಜರ ಹುಸೇನ, ನಯೀಮ್‌ಖಾನ, ಪಾಲಿಕೆಯ ಸದಸ್ಯ ಅಬ್ದುಲ್ ರಹೀಮ್, ಇಮಿ¤ಯಾಜ್ ಸಿದ್ದಿಕಿ, ಮಹ್ಮದ ಯುಸೂಫ್ ಪಟೇಲ್, ಶೇಖ್ ಸಿರಾಜ್ ಹಾಗೂ ಇತರರು ಪಾಲ್ಗೊಂಡಿದ್ದರು.