Advertisement

ಕೋವಿಡ್‌ 19 ತಡೆಗೆ ಕ್ರಮ ಕೈಗೊಳ್ಳಿ

05:43 AM Jul 07, 2020 | Lakshmi GovindaRaj |

ಹನೂರು: ಹಸಿರು ವಲಯದಲ್ಲಿದ್ದ ತಾಲೂಕಿಗೂ ಕೋವಿಡ್‌ 19 ಸೋಂಕು ಹರಡಿದ್ದು, ಇದನ್ನು ತಡೆಗಟ್ಟಲು ಸರ್ಕಾರಿ ಆದೇಶಗಳನ್ನು ಎಲ್ಲಾ ಇಲಾಖೆಗಳು ಕಟ್ಟುನುಟ್ಟಾಗಿ ಪಾಲಿಸಬೇಕು ಎಂದು ಶಾಸಕ ಆರ್‌. ನರೇಂದ್ರ ಸೂಚಿಸಿದರು.  ಪಟ್ಟಣದಲ್ಲಿ ಕೋವಿಡ್‌-19 ಸಂಬಂಧ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

Advertisement

ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ 3 ಕೋವಿಡ್‌ 19 ಪ್ರಕರಣ ದೃಢಪಟ್ಟಿವೆ. ತಾಲೂಕಾದ್ಯಂತ ಜಾತ್ರೆ, ಗ್ರಾಮದೇವತೆ ಹಬ್ಬ,  ಕ್ರೀಡಾ ಪಂದ್ಯಾವಳಿ ರದ್ದುಪಡಿಸಲು ಗ್ರಾಮಸ್ಥರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು. ಮದುವೆ ಶುಭ ಸಮಾರಂಭಗಳಿಗೆ 50ಕ್ಕಿಂತ, ಅಂತ್ಯಸಂಸ್ಕಾರಕ್ಕೆ 20ಕ್ಕಿಂತ ಹೆಚ್ಚು ಜನ ಸೇರದಂತೆ ಕ್ರಮ ವಹಿಸಬೇಕು. ಹಣಕಾಸು ವ್ಯವಹಾರಗಳಲ್ಲಿ ಮುಂದಿನ  3 ತಿಂಗಳು ಬಲವಂತದ ವಸೂಲಾತಿ ಮಾಡಬಾರದು ಎಂದು ಸೂಚಿಸಿದರು.

ತಾಳಬೆಟ್ಟದಲ್ಲಿ ಪರೀಕ್ಷೆ: ತಾಲೂಕಿನ ಧಾರ್ಮಿಕ ಪುಣ್ಯಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತರನ್ನು ತಾಳಬೆಟ್ಟದಲ್ಲಿಯೇ ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಬೇಕು. ಅಲ್ಲದೆ ಶ್ರೀ ಕ್ಷೇತ್ರಕ್ಕೆ ಸರಕು ಸಾಗಣೆ ವಾಹನಗಳಿಗೆ ಪ್ರವೇಶ  ನಿರ್ಬಂಧಿಸಬೇಕು. ತಾಲೂಕಿನ ಎಲ್ಲಾ ಪಿಡಿಒಗಳು ಕೇಂದ್ರಸ್ಥಾನದಲ್ಲಿ ಉಳಿದು ಕೋವಿಡ್‌ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ಸಭೆಯಲ್ಲಿ ತಹಶೀಲ್ದಾರರಾದ ಕುನಾಲ್‌, ಬಸವರಾಜು ಚಿಗರಿ, ಡಿವೈಎಸ್ಪಿ  ನವೀನ್‌ಕುಮಾರ್‌, ತಾಪಂ ಇಒ ಶ್ರೀನಿವಾಸ್‌, ರಾಮಾಪುರ ಸಿಪಿಐ ಮನೋಜ್‌ ಕುಮಾರ್‌, ಮಹದೇಶ್ವರಬೆಟ್ಟ ಸಿಪಿಐ ಮಹೇಶ್‌, ಸಿಪಿಐ ಅಶೋಕ್‌ಕುಮಾರ್‌, ವೈದ್ಯಾಧಿಕಾರಿ ಡಾ.ಪುಷ್ಪಾರಾಣಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೂರ್ತಿ,  ಆರೋಗ್ಯ ನಿರೀಕ್ಷಕ ಮಾದೇಶ್‌, ಆರ್‌ಐ ಮಾದೇಶ್‌, ವಿಎ ಶೇಷಣ್ಣ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next