ಕೋಲಾರ: ಕೋವಿಡ್-19 ಸಂಕಷ್ಟದ ನಡುವೆ ಜಿಲ್ಲೆಯ 72 ಕೇಂದ್ರಗಳಲ್ಲಿ 20906 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿದ್ದು, ಯಾವುದೇ ಗೊಂದಲ, ಸಮಸ್ಯೆಗಳು ಎದುರಾ ಗದಂತೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಸೂಚನೆ ನೀಡಿದರು. ತಮ್ಮ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ಶುಕ್ರವಾರ ಜೂ.25 ರಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂಬಂಧ ಕೈಗೊಳ್ಳಬೇಕಿರುವ ಪೂರ್ವಸಿದತೆ ಕುರಿತು ಚರ್ಚಿಸಲು ಕರೆದಿದ್ದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ತಾಗದಂತೆ ಎಲ್ಲಾ ಎಚ್ಚರಿಕಾ ಕ್ರಮ ಕೈಗೊಂಡು ಜಿಲ್ಲೆಗೆ ಕಪ್ಪುಚುಕ್ಕೆ ಬಾರದಂತೆ ಚುನಾವಣಾ ಕಾರ್ಯದ ರೀತಿಯಲ್ಲಿ ಪರೀಕ್ಷೆ ನಡೆಸಿ ಉತ್ಕೃಷ್ಟತೆಗೆ ಸಾಕ್ಷಿಯಾಗೋಣ ಎಂದು ಹೇಳಿದರು.
ಕೆಎಸ್ಸಾರ್‌ಟಿಸಿ, ಬೆಸ್ಕಾಂಗೆ ಸೂಚನೆ: ಜೂ.18 ರಂದು ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಹಾಗೂ ಜೂ.25 ರಿಂದ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭದಲ್ಲಿ ನಿರಂತರ ವಿದ್ಯುತ್ ಪೂರೈಕೆಗೆ ಬೆಸ್ಕಾಂ ಎಇ ಸುಬ್ರಮಣಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಬಸ್ ಓಡಿಸಲು ಸಾರಿಗೆ ಸಂಸ್ಥೆಗೆ ಸೂಚಿಸಿದಾಗ ಇದಕ್ಕೆ ಉತ್ತರಿಸಿದ ಸಾರಿಗೆ ಸಂಸ್ಥೆ ಡೀಸಿ ಚಂದ್ರಶೇಖರ್, ಶಿಕ್ಷಣ ಇಲಾಖೆ ಡಿಡಿಪಿಐ ಅವರು ಯಾವ ಮಾರ್ಗದಲ್ಲಿ ಬಸ್ಸಿನ ಅಗತ್ಯವಿದೆ ಎಂದು ಅಂಕಿಅಂಶ ನೀಡಿದಲ್ಲಿ ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಥರ್ಮಲ್ ಸ್ಕ್ಯಾನರ್: ಡಿಡಿಪಿಐ ಕೆ.ರತ್ನಯ್ಯ ಮಾತನಾಡಿ, ಪರೀಕ್ಷಾ ಕೇಂದ್ರದಲ್ಲಿ ಪ್ರತಿ 200 ಮಂದಿಗೆ ಒಂದು ಥರ್ಮಲ್ ಸ್ಕ್ಯಾನರ್ ಇಟ್ಟಿರುವ ಕುರಿತು ತಿಳಿಸಿದಾಗ ಮತ್ತೂಂದು ವ್ಯವಸ್ಥೆ ಮಾಡಿಕೊಳ್ಳಿ ಎಂದು ಸೂಚಿಸಿದ ಡೀಸಿಯವರು ನಗರ ವ್ಯಾಪ್ತಿಯ 34 ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೆ„ಸ್ ಮಾಡಿಸಿಕೊಡಲು ನಗರಾಭಿವೃದಿಟಛಿ ಯೋಜನಾ ನಿರ್ದೇಶಕ ರಂಗಸ್ವಾಮಿಗೆ ಸೂಚಿಸಿ, ಗ್ರಾಮೀಣ ಪ್ರದೇಶದಲ್ಲಿ ಗ್ರಾಪಂಗಳು ಈ ಕಾರ್ಯ ನಡೆಸಲು ತಾಪಂ ಇಒಗೆ ಆದೇಶಿಸಿದರು.ಡಿಡಿ ಪಿಐ ರತ್ನಯ್ಯ ಮಾಹಿತಿ ನೀಡಿ, ಎಲ್ಲಾ ದೈಹಿಕ ಶಿಕ್ಷಕರನ್ನು ಪರೀಕ್ಷಾ ಕಾರ್ಯಕ್ಕೆ ನೇಮಿಸಿ ಕೊಂಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅವರು ಶ್ರಮಿಸುವರು ಎಂದು ತಿಳಿಸಿದರು.
ಸಭೆಯಲ್ಲಿ ವೀಕ್ಷಕ ರಘುನಾಥರೆಡ್ಡಿ, ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್. ನಾಗೇಂದ್ರ ಪ್ರಸಾದ್, ಡಿವೈಪಿಸಿ ಮೋಹನ್ ಬಾಬು, ಇಒ ಸಿ.ಆರ್.ಅಶೋಕ್, ಬಿಇಒಗಳಾದ ಕೆ.ಎಸ್ .ನಾಗರಾಜಗೌಡ, ಕೆಂಪಯ್ಯ, ಉಮಾದೇವಿ, ಗಿರಿಜೇಶ್ವರಿದೇವಿ, ಕೃಷ್ಣಮೂರ್ತಿ, ಶಂಕರ್ ಕಾವಲಿ, ಬಿಆರ್‌ಸಿ ರಾಮಕೃಷ್ಣಪ್ಪ, ಎವೈಪಿಸಿ ಸಿದ್ದೇಶ್, ವಿಷಯ ಪರಿವೀಕ್ಷಕರಾದ ಕೃಷ್ಣಪ್ಪ, ಶಶಿವಧನ, ಗಾಯತ್ರಿ, ತಾಲೂಕು ನೋಡಲ್ ಅಧಿಕಾರಿಗಳಾದ ಸಿ.ಎಂ.ವೆಂಕಟರಮಣಪ್ಪ, ಮುನಿರತ್ನಯ್ಯಶೆಟ್ಟಿ, ಶ್ರೀನಿವಾಸ್, ಅಂಜಿತಾ, ತಿಮ್ಮರಾಯಪ್ಪ, ಬಾಬಾಜಾನ್, ಸಿರಾಜುದ್ದೀನ್, ತಾಪಂನ ಕಾಮತ್, ರೋಟರಿ ಸಂಸ್ಥೆಯ ವಿ.ಪಿ.ಸೋಮಶೇಖರ್, ಜಿ.ಶ್ರೀನಿವಾಸ್, ಆರ್.ಶ್ರೀನಿವಾಸನ್, ತಹಶೀಲ್ದಾರರು, ತಾಪಂ ಇಒ ಸಭೆಯಲ್ಲಿ ಉಪಸ್ಥಿತರಿದ್ದರು.