Advertisement
ಅಮೃತೂರು ಗ್ರಾಮದ ಎರಡು, ಮೂರು ಹಾಗೂ ನಾಲ್ಕನೇ ಬ್ಲಾಕ್ ಕೆಲ ಬಡಾವಣೆಗಳಲ್ಲಿ ಕಳೆದ ಆರು ತಿಂಗಳಿನಿಂದ ಟ್ಯಾಂಕರ್ ನೀರು ಸರಬರಾಜು ಮಾಡ ಲಾಗುತ್ತಿದೆ. ನೀರು ಯೋಗ್ಯವಾಗಿಲ್ಲ ಎಂದು ಶಾಸಕರಿಗೆ ದೂರು ಹೇಳಿದರು, ಕೆಂಡಾಮಂಡಲರಾದ ಶಾಸಕ, ಶಾಸಕರ ಅನುದಾನದಲ್ಲಿ ಹೊಸದಾಗಿ ಐದು ಕೊಳವೆ ಬಾವಿ ಕೊರೆಸಲಾಗಿದೆ ಆದರೂ ಶುದ್ಧ ನೀರು ಏಕೆ ಪೂರೈಸುತ್ತಿಲ್ಲ ಎಂದು ಪಿಡಿಒ ಲತಾ ಅವರನ್ನು ತರಾಟೆ ತೆಗೆದುಕೊಂಡರು. 5 ಹೊಸ ಕೊಳವೆ ಬಾವಿಗಳ ಪೈಕಿ ಎರಡು ವಿಫಲ ವಾಗಿದೆ. ಒಂದು ರೀಬೋರ್ ಮಾಡ ಲಾಗಿದೆ. ಉಳಿದ ಎರಡು ಕೊಳವೆ ಬಾವಿಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ನೀರು ಬರುತ್ತಿದೆ. ಹಾಗಾಗಿ ಟ್ಯಾಕರ್ ನೀರು ಸರಬರಾಜು ಮಾಡಲಾಗುತ್ತದೆ ಎಂದು ಪಿಡಿಒ ತಿಳಿಸಿದರು. ನೀರಿನ ಗುಣಮಟ್ಟ ಪರಿಶೀಲಿಸಿದ್ದೀರ ಎಂದು ಕೇಳಿದ ಪ್ರಶ್ನೆಗೆ ಪಿಡಿಒ ನಿರುತ್ತರರಾದರು.
Related Articles
Advertisement
ತರಾಟೆ: ಎಚ್ವಿಡಿಎಸ್ ಯೋಜನಡಿಯಲ್ಲಿ ರೈತರ ಪಂಪ್ ಸೆಟ್‌ಗಳಿಗೆ ವಿದ್ಯುತ್ ಪರಿವರ್ತಕ ಅಳವಡಿಸಿಲು 500 ಬಾರಿ ಕರೆ ಮಾಡಿದ್ದೇನೆ ಎಂದು ಬೆಸ್ಕಾಂ ಎಸ್‌ಒ ನವೀನ್‌ಕುಮಾರ್ ಅವರನ್ನು ಶಾಸಕರು ತರಾಟೆ ತೆಗೆದು ಕೊಂಡರು. ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿರುವ ರೈತರು ಅನ್ಯಾಯವಾಗಿ ದಂಡ ಕಟ್ಟಬೇಕಾಗುತ್ತದೆ. ಕೂಡಲೇ ಸಕ್ರಮ ಮಾಡಿಕೊಡಿ ಎಂದು ಸಲಹೆ ನೀಡಿದರು. ಇಒ ಶಿವರಾಜಯ್ಯ, ಗ್ರಾಪಂ ಅಧ್ಯಕ್ಷ ವೆಂಕಟರಾಮು, ಉಪಾಧ್ಯಕ್ಷೆ ಸೈದಾಬೇಗಂ, ಸದಸ್ಯರಾದ ಮರಿಯಪ್ಪ, ಪಾರ್ವತಮ್ಮ, ಭರತ್, ಸೋಮಶೇಖರ್, ತಾಲೂಕು ಪಂಚಾಯತಿ ಸದಸ್ಯೆ ನಾಗಮ್ಮ, ಮುಖಂಡ ರಾದ ಹರೀಶ್‌ಗೌಡ, ದಿವಾಕರ್‌ಗೌಡ, ಗೂಳಿಗೌಡ, ಬೋರೇಗೌಡ ಇದ್ದರು.