ಹಾಸನ: ಜಿಲ್ಲೆಯಲ್ಲಿ ಕೊರೊನಾ 3ನೇ ಅಲೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್ ರಾಜ್‌ಸಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಆರ್.ಗಿರೀಶ್, ಜಿಪಂ ಸಿಇಒ ಕಾಂತರಾಜ್ ಹಾಗೂ ಹಿಮ್ಸ್ ಹಾಗೂ ಆರೋಗ್ಯ, ಕೃಷಿತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಮಂಗಳವಾರ ವಿಡಿಯೋ ಸಂವಾದ ನಡೆಸಿದ ಅವರು ಜಿಲ್ಲೆಯಲ್ಲಿ ಪಾಸಿಟಿಟಿ ದರ ಕಡಿಮೆ ಮಾಡಲು ವಿಶೇಷ ಗಮನ ಹರಿಸಬೇಕು ಎಂದರು.
ಶೇ.100ರಷ್ಟು ಲಸಿಕೆ ಹಾಕಿ: ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರುಹಾಗೂ ಲಭ್ಯ ಇರುವ ಸೌಲಭ್ಯ, ಲಸಿಕೆ ನೀಡಿಕೆಯಲ್ಲಿನ ಸಾಧನೆಗಳ ಬಗ್ಗೆ ಮಾಹಿತಿ ಪಡೆದ ನವೀನ್‌ರಾಜ್‌ಸಿಂಗ್ ಅವರು, 2ನೇ ಡೋಸ್ ಲಸಿಕೆ ಬಾಕಿ ಇರುವವರು, 15-18 ವರ್ಷದೊಳಗಿನವರು ಮತ್ತು ಬೂಸ್ಟರ್ ಡೋಸ್ ಪಡೆಯ ಬೇಕಿರುವವರಿಗೆ ಶೇ.100 ರಷ್ಟು ಲಸಿಕೆ ಹಾಕಬೇಕು ಎಂದು ನಿರ್ದೇಶಿಸಿದರು.
ಮರಣೋತ್ತರ ಪರೀಕ್ಷೆಯಲ್ಲಿ ಸೋಂಕು ಪತ್ತೆ: ಜಿಲ್ಲಾಧಿಕಾರಿ ಅರ್.ಗಿರೀಶ್ ಮಾತನಾಡಿ, ಜಿಲ್ಲೆಯಲ್ಲಿ ಪಾಸಿಟಿಟಿ ದರ ನಿಯಂತ್ರಣದಲ್ಲಿದೆ. ಸೋಂಕು ತೀವ್ರಸ್ವರೂಪ ಪಡೆಯುತ್ತಿಲ್ಲ. ಹೀಗಾಗಿ ಇದುವರೆಗೂ ಹಾಸಿಗೆ, ಔಷಧಿ ಕೊರತೆ ಎದುರಾಗಿಲ್ಲ. ಹಿಮ್ಸ್‌ಆಸ್ಪತ್ರೆಯಲ್ಲಿ ಈ ಹಿಂದಿನಂತೆ ಸಾವಿನ ಪ್ರಮಾಣ ಇದೆ.ಆದರೆ, ಅಪಘಾತ ಸೇರಿದಂತೆ ಇತರ ಕಾರಣಗಳಿಂದಮೃತ ಪಡುತ್ತಿರವವರಲ್ಲಿಯೂ ಮರಣೋತ್ತರ ಪರೀಕ್ಷೆ ವೇಳೆ ಸೋಂಕು ಪತ್ತೆಯಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಎಲ್ಲ ತಾಲೂಕುಗಳಲ್ಲಿ 15ರಿಂದ 18 ವರ್ಷದೊಳಗಿನ ಎಲ್ಲರಿಗೂ ಮೂರು ದಿನಗಳೊಳಗೆಲಸಿಕೆ ನೀಡಿ ಶೇ.100ರಷ್ಟು ಗುರಿ ಸಾಧನೆ ಮಾಡಬೇಕು.ಅದೇ ರೀತಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೂ ತ್ವರಿತವಾಗಿ ಬೂಸ್ಟರ್ ಡೋಸ್‌ಲಸಿಕೆ ನೀಡಬೇಕು. ಲಸಿಕಾ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿ ಗಳಿಗೆ ಸೂಚನೆ ನೀಡಿದರು.
ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಕೃಷ್ಣಮೂರ್ತಿ, ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್, ಆರ್.ಸಿ.ಎಚ್ ಅಧಿಕಾರಿ ಡಾ.ಕಾಂತರಾಜ್, ಜಂಟಿ ಕೃಷಿನಿರ್ದೇಶಕ ರವಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.